ಹೈದರಾಬಾದ್:ಹೈದರಾಬಾದ್ನಲ್ಲಿ ಬಿಸಿಲ ತಾಪ ನೆತ್ತಿ ಸುಡುತ್ತಿದ್ದರೆ, ಇನ್ನೊಂದೆಡೆ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ರನ್ ಮಳೆಯನ್ನೇ ಹರಿಸುತ್ತಿದೆ. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಸನ್ರೈಸರ್ಸ್ ಎರಡನೇ ಬಾರಿಗೆ ಎದುರಾಗಲಿದ್ದು ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆಂಡಾಡಿದ್ದ ಹೈದರಾಬಾದ್, ಐಪಿಎಲ್ ಇತಿಹಾಸದಲ್ಲಿಯೇ ಸರ್ವಾಧಿಕ ರನ್ ದಾಖಲೆ ನಿರ್ಮಿಸಿತ್ತು. ಇಂದು ತನ್ನ ತವರು ಮೈದಾನವಾದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಎಲ್ಲರ ಕಣ್ಣು ಹೈದರಾಬಾದ್ ತಂಡದ ಮೇಲಿದೆ.
ಬ್ಯಾಟರ್ಸ್ vs ಬ್ಯಾಟರ್ಸ್:ಹೈದರಾಬಾದ್ ಮತ್ತು ಬೆಂಗಳೂರು ತಂಡಗಳು ಬ್ಯಾಟರ್ಗಳನ್ನೇ ನೆಚ್ಚಿಕೊಂಡಿವೆ. ಅದರಲ್ಲೂ ಎಸ್ಆರ್ಹೆಚ್ ತಂಡದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹೆನ್ರಿಕ್ ಕ್ಲಾಸಿನ್ ಈ ಋತುವಿನಲ್ಲಿ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಒಬ್ಬರು ತಪ್ಪಿದರೆ ಮತ್ತೊಬ್ಬರು ಅಬ್ಬರಿಸುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಐಪಿಎಲ್ನ ಅತ್ಯಧಿಕ ರನ್ ದಾಖಲೆ ನಿರ್ಮಿಸಿದ್ದಾರೆ. ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಡಿದಿದ್ದರೆ, ಬಳಿಕ ಆರ್ಸಿಬಿ ವಿರುದ್ಧ ಗುಡುಗಿ ತನ್ನದೇ ದಾಖಲೆಯನ್ನು ಮುರಿದಿತ್ತು.
ಹೈದರಾಬಾದ್ ತಂಡದಲ್ಲೂ ಬೌಲಿಂಗ್ ನೀರಸವಾಗಿದೆ. ಮೊದಲ ಮುಖಾಮುಖಿಯಲ್ಲಿ 287 ರನ್ ಗಳಿಸಿದ್ದರೂ, ಆರ್ಸಿಬಿ ಗುರಿ ಬೆನ್ನತ್ತಿ 262 ರನ್ ಬಾರಿಸಿತ್ತು. ಹೀಗಾಗಿ ಭುವನೇಶ್ವರ್ ಕುಮಾರ್, ನಟರಾಜನ್, ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಬೌಲಿಂಗ್ ಪಡೆಯನ್ನೇ ಮರೆತ ಆರ್ಸಿಬಿ:ಈ ಸೀಸನ್ನಲ್ಲಿ ಅತಿ ಕಳಪೆ ಆಟವಾಡುತ್ತಿರುವ ಆರ್ಸಿಬಿ ತನ್ನ ಬೌಲಿಂಗ್ ಪಡೆಯನ್ನು ಸಂಪೂರ್ಣವಾಗಿ ಮರೆತಂತಿದೆ. ಎಷ್ಟೇ ಗುರಿ ನೀಡಿದರೂ ಅದನ್ನು ಬೌಲರ್‌ಗಳು ಉಳಿಸಿಕೊಳ್ಳುತ್ತಿಲ್ಲ. ಮೊದಲು ಫೀಲ್ಡಿಂಗ್ ಮಾಡಿದರೂ, ಕನಿಷ್ಠ 200 ಕ್ಕೂ ಕಡಿಮೆ ರನ್ ಬಿಟ್ಟು ಕೊಡುತ್ತಿದ್ದಾರೆ. ಹೀಗಾಗಿ ಆರ್ಸಿಬಿ ಪೂರ್ಣವಾಗಿ ಬ್ಯಾಟಿಂಗ್ ಅವಲಂಬಿಸಿದೆ. ಸದ್ಯ ಟೂರ್ನಿಯ ಅತಿಹೆಚ್ಚು ಗಳಿಸಿದವರಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ, ನಾಯಕ ಡು ಪ್ಲೆಸಿಸ್, ಕಳೆದ ಪಂದ್ಯದಲ್ಲಿ ಮಿಂಚಿದ್ದ ರಜತ್ ಪಾಟೀದಾರ್ ಜವಾಬ್ದಾರಿ ಹೊರಬೇಕಿದೆ.