ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನ ಸುಳಿಯಿಂದ ಹೊರಬಂದು, ಕಳೆದ ಮೂರು ಪಂದ್ಯಗಳಲ್ಲಿ ಗೆಲುವು ಕಂಡಿದೆ. ಈ ಮೂಲಕ ಪ್ಲೇ ಆಫ್ ತಲುಪಲು ಹೋರಾಟ ನಡೆಸುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದಲ್ಲಿ ನಾಲ್ಕನೇ ತಂಡವಾಗಿ ಸ್ಥಾನ ಪಡೆಯಲಿದೆ.
ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ ವಿರುದ್ಧ ಎರಡು ಸೇರಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಆಡಿದ 11 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ 5 ಪಾಯಿಂಟ್ಸ್ ಹೊಂದಿದೆ. ಪ್ಲೇಆಫ್ಗೆ ತುರುಸಿನ ಪೈಪೋಟಿ ಇದ್ದು, ಕಷ್ಟಸಾಧ್ಯ ಎಂಬಂತಾಗಿದೆ.
ಉಳಿದ ಮೂರು ಪಂದ್ಯಗಳಲ್ಲಿ ಗೆಲ್ಲಬೇಕು. ಜೊತೆಗೆ ಇತರ ತಂಡಗಳ ಫಲಿತಾಂಶ ಆರ್ಸಿಬಿ ಪರವಾಗಿ ಬಂದಲ್ಲಿ ಮಾತ್ರ ಪ್ಲೇಆಫ್ಗೆ ಏರುವ ಸಾಧ್ಯತೆ ಇದೆ. ಆದರೆ, ಇದು ಅಷ್ಟು ಸುಲಭವಿಲ್ಲ. ಪವಾಡ ನಡೆಯುತ್ತಾ ಎಂಬುದನ್ನು ತಂಡ ಮತ್ತು ಅಭಿಮಾನಿಗಳು ಕಾಯುತ್ತಿದ್ದಾರೆ.
ಧರ್ಮಶಾಲಾದಲ್ಲಿ ಪಂಜಾಬ್ ಎದುರು:ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಆರ್ಸಿಬಿ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮೇ 9 ರಂದು ಎದುರಿಸಲಿದೆ. ಇದಕ್ಕಾಗಿ ತಂಡ ಧರ್ಮಶಾಲಾ ತಲುಪಿದೆ. ಅಭ್ಯಾಸದ ಜೊತೆಗೆ ಆಟಗಾರರು ಹಿಮಾಚಲ ಪ್ರದೇಶದ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಧರ್ಮಶಾಲಾವು ಸುಂದರವಾದ ಪರ್ವತಗಳು, ಕಣಿವೆಗಳು ಮತ್ತು ಭವ್ಯವಾದ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಈ ಮನಮೋಹಕ ಸೊಬಗನ್ನು ತಂಡದಲ್ಲಿರುವ ವಿದೇಶಿ ಆಟಗಾರರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಮೋಜು ಮಸ್ತಿಯಲ್ಲಿ ಪ್ಲೇಯರ್ಸ್:ಆಟಗಾರರು ಹಿಮಾಚಲದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಾಯಕ ಫಾಫ್ ಡು ಪ್ಲೆಸಿಸ್ ಧರ್ಮಶಾಲಾದಲ್ಲಿರುವ ಕೊಳ್ಳಗಳಲ್ಲಿ ಸ್ನಾನ ಮಾಡುತ್ತಿರುವುದು, ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ನೀರಿನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ತಂಡದ ಸಿಡಿಲಮರಿ ವಿಲ್ ಜಾಕ್ಸ್, ಗ್ರೀನ್ ಜೊತೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:IPL 2024, DC vs RR: ರಾಜಸ್ಥಾನ ವಿರುದ್ಧ 20 ರನ್‌ಗಳಿಂದ ಗೆದ್ದ ಡೆಲ್ಲಿ; ಪ್ಲೇ ಆಫ್ ರೇಸ್‌ನಲ್ಲಿ ಪಂತ್ ಬಳಗ - Delhi Beat Rajasthan