Nitish Kumar Reddy: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ.
ಬಲಿಷ್ಟ ಆಸ್ಟ್ರೇಲಿಯನ್ ಬೌಲಿಂಗ್ ಪಡೆ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿರುವ ನಿತೀಶ್ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದ 83ನೇ ಓವರ್‌ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಅರ್ಧಶತಕ ಪೂರೈಸಿದರು. ಮಿಚೆಲ್ ಸ್ಟಾರ್ಕ್ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರ್ಣಗೊಳಿಸಿದರು. 50ರನ್ ಪೂರ್ಣಗೊಳಿಸುತ್ತಿದ್ದಂತೆ ನಿತೀಶ್ ಪುಷ್ಪ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಬಿಸಿಸಿಐ ಕೂಡ ನಿತೀಶ್ ಅವರ ಪೋಸ್ಟ್ ಹಂಚಿಕೊಂಡಿದ್ದು, ನಿತೀಶ್ ಫ್ಲವರ್ ಅಲ್ಲ ಫೈರ್ ಎಂದು ಬರೆದುಕೊಂಡಿದೆ.
फ्लावर नहीं फायर है! 🔥
— BCCI (@BCCI) December 28, 2024
Nitish Kumar Reddy brings up his maiden 50 in Test cricket and unleashes the iconic celebration. 👏
Follow live: https://t.co/njfhCncRdL#TeamIndia pic.twitter.com/4aNqnXnotr
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟರ್ಗಳಿಗೂ ಆಕರ್ಷಿಸಿದೆ. ಈ ಹಿನ್ನೆಲೆ ಆಟಗಾರರು ಕ್ರಿಕೆಟ್ ಮೈದಾನದಲ್ಲಿ ಪುಷ್ಪ ಶೈಲಿಯಲ್ಲಿ ಸಂಭ್ರಮಿಸುವುದನ್ನು ಆಗಾಗ ಕಾಣಬಹುದಾಗಿದೆ. ಇತ್ತೀಚೆಗೆ ಪುಷ್ಪ ಸಿನಿಮಾದ ಎರಡನೇ ಭಾಗ ಕೂಡ ಬಿಡುಗಡೆಯಾಗಿದ್ದು ಮುಂದಿನ ವರ್ಷ ಪುಷ್ಪ ಪಾರ್ಟ್ 3 ಬರುವ ಸಾಧ್ಯತೆ ಇದೆ.
ಪಂದ್ಯದ ಹೈಲೈಟ್: ಮೂರನೇ ದಿನವಾದ ಇಂದು 221 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬ್ಯಾಟಿಂಗ್ಗೆ ಬಂದ ನಿತೀಶ್ ರೆಡ್ಡಿ ಮತ್ತು ವಾಷಿಂಗ್ಟ್ನ ಜೊತೆಗೂಡಿ ಆಸ್ಟ್ರೇಲಿಯನ್ನರ ವಿರುದ್ಧ ಕೆಚ್ಚೆದೆಯ ಪ್ರದರ್ಶನ ತೋರಿದರು. ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
" 𝙈𝙖𝙞𝙣 𝙟𝙝𝙪𝙠𝙚𝙜𝙖 𝙣𝙖𝙝𝙞!" 🔥
— Star Sports (@StarSportsIndia) December 28, 2024
the shot, the celebration - everything was perfect as #NitishKumarReddy completed his maiden Test fifty! 👏#AUSvINDOnStar 👉 4th Test, Day 3 | LIVE NOW! | #ToughestRivalry #BorderGavaskarTrophy pic.twitter.com/hupun4pq2N
ನಾಲ್ಕನೇ ಟೆಸ್ಟ್‌ನ ಮೂರನೇ ದಿನವಾದ ಇಂದು ಟೀಂ ಇಂಡಿಯಾ 97 ಓವರ್ಗೆ 7 ವಿಕೆಟ್ ನಷ್ಟಕ್ಕೆ 326 ರನ್ ಕಲೆಹಾಕಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ (ಅಜೇಯ 85) ಮತ್ತು ವಾಷಿಂಗ್ಟನ್ ಸುಂದರ್ (ಅಜೇಯ 40) ಬ್ಯಾಟಿಂಗ್ ಮುಂದುವರೆಸಿದ್ದಾರೆ. ಸಧ್ಯ ಈ ಇಬ್ಬರು 94 ರನ್‌ಗಳ ಜೊತೆಯಾಟವಾಡಿದ್ದು, ಇದರಿಂದಾಗಿ 97 ಒವರ್ ಮುಕ್ತಾಯದ ವೇಳೆಗೆ ಭಾರತ 148 ರನ್‌ಗಳ ಹಿನ್ನಡೆಯಲ್ಲಿದೆ.
ವಾಷಿಂಗ್ಟನ್ ಆಕರ್ಷಕ ಬ್ಯಾಟಿಂಗ್: ನಿತೀಶ್ ಕುಮಾರ್ ರೆಡ್ಡಿ ಜತೆಗೂಡಿ ಬ್ಯಾಟಿಂಗ್ ಮುಂದುವರೆಸಿರುವ ವಾಷಿಂಗ್ಟನ್ ಸುಂದರ್ ಕೂಡ ಉತ್ತಮ ಪ್ರದರ್ಶನ ತೋರಿದ್ದಾರೆ. ಸಧ್ಯ 115 ಎಸೆತಗಳಲ್ಲಿ 40 ರನ್ ಕಲೆಹಾಕಿ ಅರ್ಧಶತಕದ ಹೊಸ್ತಿಲಲ್ಲಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್ ಸತತ ವೈಫಲ್ಯ: 'ಕೂಡಲೇ ಅವರನ್ನು ತಂಡದಿಂದ ಕೈಬಿಡಿ'- ಚಾಟಿ ಬೀಸಿದ ಗವಾಸ್ಕರ್