ಶ್ರೀನಗರ: ಕಣಿವೆ ನಾಡು ಕಾಶ್ಮೀರದಲ್ಲಿ ಮಳೆಯ ನಡುವೆ ವ್ಯಾಪಕ ಹಿಮಪಾತ ಆಗುತ್ತಿರುವುದರಿಂದ ಶ್ರೀನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಇಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರದಿಂದ ಭಾರೀ ಹಿಮಪಾತ ಕಂಡುಬರುತ್ತಿದ್ದು, ಕಣಿವೆನಾಡು ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಆವರಿಸಿದೆ. ಹಿಮಪಾತದಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಎಷ್ಟೋ ಪ್ರವಾಸಿಗರ ವಾಹನಗಳು ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡಿವೆ. ಅವುಗಳನ್ನು ತೆರವುಗೊಳಿಸಲಾಗುತ್ತಿದೆ.
#WATCH | Jammu and Kashmir: " we have come from delhi. our experience here was very good. people here are nice. our flight got cancelled, so we will stay here for two more days," says a tourist after flights were cancelled due to bad weather https://t.co/eMlCnFqToN pic.twitter.com/4GjmwNKvGG
— ANI (@ANI) December 28, 2024
ಇನ್ನು ನಿರಂತರ ಹಿಮಪಾತ ಮತ್ತು ಅತ್ಯಂತ ಕಡಿಮೆ ಗೋಚರತೆಯಿಂದಾಗಿ, ಶೇಖ್ ಉಲ್-ಆಲಂ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶುಕ್ರವಾರದಿಂದ ಪ್ರತಿಕೂಲ ಹವಾಮಾನವು ವಿಮಾನ ನಿಲ್ದಾಣದಲ್ಲಿ ವಾಯು ಸಂಚಾರದ ಮೇಲೆ ಪರಿಣಾಮ ಬೀರಿದೆ. ಕಡಿಮೆ ಗೋಚರತೆ ಮತ್ತು ರನ್‌ವೇಯಲ್ಲಿ ಹಿಮದ ಶೇಖರಣೆಗೆ ಆಗುತ್ತಿರುವುದರಿಂದ ಹಾಗೂ ಕೆಟ್ಟ ಹವಾಮಾನದಿಂದಾಗಿ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ರೈಲ್ವೆ ಹಳಿಯಲ್ಲಿ ಭಾರೀ ಹಿಮದ ಶೇಖರಣೆಯಾಗಿದ್ದು, ಅದರ ತೆರವು ಬಳಿಕ ರೈಲು ಸೇವೆ ಪುನರಾರಂಭಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
#WATCH | Jammu and Kashmir: Due to bad weather conditions, all flights at Srinagar Airport were cancelled; visuals from outside Sheikh ul-Alam International Airport pic.twitter.com/SxdlB1x6a2
— ANI (@ANI) December 28, 2024
ಪಿರ್ ಪಂಜಾಲ್ ಸುರಂಗ ಮತ್ತು ಶ್ರೀನಗರ ನಗರದ ನಡುವೆ ನೂರಾರು ವಾಹನಗಳು ಹಿಮಪಾತದಲ್ಲಿ ಸಿಲುಕಿಕೊಂಡಿದ್ದರಿಂದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಸಹ ಮುಚ್ಚಲಾಗಿದೆ. ಅಧಿಕಾರಿಗಳು ಇಡೀ ದಿನ ವಾಹನಗಳ ತೆರವು ಕಾರ್ಯದಲ್ಲಿ ತೊಡಗಿದ್ದು, ಪ್ರವಾಸಿಗರು ಬೇಕು ಬೇಡಿಕೆಯತ್ತಲೂ ಗಮನ ಹರಿಸುತ್ತಿದ್ದಾರೆ.
ಸಿಎಂ ಒಮರ್ ಅಬ್ದುಲ್ಲಾ ಅವರು ಶನಿವಾರದಂದು ಗಂದರ್‌ಬಾಲ್ ಜಿಲ್ಲೆಗೆ ಭೇಟಿ ನೀಡಿ ಆರೋಗ್ಯ ಮತ್ತು ಇತರ ಅಗತ್ಯ ಸೇವೆಗಳನ್ನು ಒದಗಿಸುವ ಸಿದ್ಧತೆಯನ್ನು ಪರಿಶೀಲಿಸಿದರು.
#WATCH | Amid heavy snowfall and road blockades, Jammu & Kashmir police of Pulwama Newa post with the help of locals ensured the cremation of an elderly, resident of Qazipora, Budgam who died in Srinagar hospital, last night. pic.twitter.com/j5KRqnVBGY
— ANI (@ANI) December 28, 2024
ಇದನ್ನೂ ಓದಿ: ಕಾಶ್ಮೀರದಲ್ಲಿ ಭಾರೀ ಹಿಮಪಾತ: ಆಶ್ರಯಕ್ಕಾಗಿ ರಾತ್ರೋರಾತ್ರಿ ಮಸೀದಿಗಳ ಬಾಗಿಲು ತಟ್ಟಿದ ಪ್ರವಾಸಿಗರು - TOURISTS IN MOSQUE