ETV Bharat / state

ಹೊಸ ವರ್ಷಾಚರಣೆ: ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಶಿವಮೊಗ್ಗ ಎಸ್​ಪಿ ಖಡಕ್ ಸೂಚನೆ - INSTRUCTIONS TO RESORT OWNERS

ಹೊಸ ವರ್ಷಾಚರಣೆ ಆಚರಿಸಲು ವ್ಯವಸ್ಥೆ ಮಾಡಿಕೊಂಡಿರುವ ಹೋಂ ಸ್ಟೇ, ರೆಸಾರ್ಟ್​ನವರು ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಬೇಕು ಎಂದು ಎಸ್​ಪಿ ಮಿಥುನ್‌ಕುಮಾರ್ ತಿಳಿಸಿದ್ದಾರೆ.

ಎಸ್​ಪಿ ಖಡಕ್ ಸೂಚನೆ
ಎಸ್​ಪಿ ಖಡಕ್ ಸೂಚನೆ (ETV Bharat)
author img

By ETV Bharat Karnataka Team

Published : Dec 28, 2024, 9:18 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಆಚರಿಸಲು ವ್ಯವಸ್ಥೆ ಮಾಡಿಕೊಂಡಿರುವ ಹೋಂ ಸ್ಟೇ, ರೆಸಾರ್ಟ್, ಕ್ಲಬ್​ ಮಾಲೀಕರು ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ತಿಳಿಸಿದ್ದಾರೆ. ನಗರದ ಡಿಎಆರ್ ಸಭಾಂಗಣದಲ್ಲಿ ಕ್ಲಬ್​, ಹೋಟೆಲ್​, ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರೊಂದಿಗೆ ಏರ್ಪಡಿಸಲಾಗಿದ್ದ ಸಭೆ ನಡೆಸಿ ಅವರು ಸೂಚನೆಗಳನ್ನು ನೀಡಿದರು.

ಎಸ್​ಪಿ ಮಿಥುನ್‌ಕುಮಾರ್ (ETV Bharat)

ಎಸ್​ಪಿ ಕೊಟ್ಟ ಸೂಚನೆಗಳು:

  • ಹೊಸ ವರ್ಷ ಆಚರಣೆಯ ಹಿನ್ನೆಲೆ ಯಾವುದೇ ಕಾರ್ಯಕ್ರಮ ಆಯೋಜಿಸುವಾಗ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೆ ಮತ್ತು ಅನುಮತಿ ಪಡೆಯದೆ ಯಾವುದೇ ರೀತಿಯ ಕಾರ್ಯಕ್ರಮ ಆಯೋಜಿಸುವಂತಿಲ್ಲ.
  • ಕಾರ್ಯಕ್ರಮ ಆಯೋಜಿಸುವವರು ಸ್ಥಳಾವಕಾಶವನ್ನು ಗಮನದಲ್ಲಿಟ್ಟುಕೊಂಡು, ಅಷ್ಟೇ ಜನರಿಗೆ ಅನುಮತಿ ನೀಡಬೇಕು. ಆಯೋಜಿಸಲಾಗುವ ಕಾರ್ಯಕ್ರಮಕ್ಕೆ ಎಷ್ಟು ಜನ ಸೇರುತ್ತಾರೆ ಮತ್ತು ಸಂಖ್ಯೆಗೆ ಅನುಗುಣವಾಗಿ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು.
  • ಕಾರ್ಯಕ್ರಮದ ಆಯೋಜಕರು ಸಂಭ್ರಮಾಚರಣೆಯಲ್ಲಿ ಮದ್ಯಪಾನಕ್ಕೆ ಅವಕಾಶ ಇದ್ದಲ್ಲಿ, ಅಬಕಾರಿ ಇಲಾಖೆಯ ಷರತ್ತು ಹಾಗೂ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದಲ್ಲಿ ಬೇರೆ ಚಾಲಕರ ಏರ್ಪಾಡು ಮಾಡಿ ಕಳುಹಿಸಬೇಕು. ಇಲ್ಲವಾದಲ್ಲಿ ಅಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು.
  • ಹೊಸ ವರ್ಷದ ಆಚರಣೆಯನ್ನು ಮಧ್ಯರಾತ್ರಿ 12 ಗಂಟೆಗೆ ಆಚರಿಸಿ, ರಾತ್ರಿ 1 ಗಂಟೆಯ ಒಳಗೆ ಎಲ್ಲಾ ರೀತಿಯ ಹೊರಾಂಗಣ ಕಾರ್ಯಕ್ರಮ ಮುಕ್ತಾಯ ಮಾಡಬೇಕು.
ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರೊಂದಿಗೆ ಏರ್ಪಡಿಸಲಾಗಿದ್ದ ಸಭೆ
ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರೊಂದಿಗೆ ಏರ್ಪಡಿಸಲಾಗಿದ್ದ ಸಭೆ (ETV Bharat)
  • ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. 200ಕ್ಕಿಂತ ಹೆಚ್ಚಿನ ಸಾರ್ವಜನಿಕರು ಸೇರುವ ಸ್ಥಳದಲ್ಲಿ, ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸಬೇಕು. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮತ್ತು ಅತಿಥಿಗಳ ಹೆಸರು, ವಿವರವನ್ನು ಬರೆದುಕೊಂಡು, ಒಂದು ಗುರುತಿನ ಚೀಟಿಯನ್ನು ಪಡೆಯಬೇಕು.
  • ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮ ಆಯೋಜಿಸಿದ ಸ್ಥಳದಲ್ಲಿ ಒಳ ಬರುವ ಮತ್ತು ಹೊರ ಹೋಗುವ ದ್ವಾರದಲ್ಲಿ ತಮ್ಮ ಸಿಬ್ಬಂದಿ ನೇಮಿಸಬೇಕು. ಸಾರ್ವಜನಿಕರ ಸುರಕ್ಷತೆ ಬಗ್ಗೆ ನಿಗಾವಹಿಸಬೇಕು.
  • ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ. ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಎಚ್ಚರದಿಂದಿ ಇರಬೇಕು. ಯಾವುದೇ ಅಹಿತಕರ ಘಟನೆ ಜರುಗಿದಾಗ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಬೇಕು.
  • ಕಾರ್ಯಕ್ರಮದಲ್ಲಿ ಅಳವಡಿಸುವ ಧ್ವನಿವರ್ಧಕ, ಪಟಾಕಿ ಸಿಡಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಅಥವಾ ತೊಂದರೆಯಾಗದ ರೀತಿ ನೋಡಿಕೊಳ್ಳಬೇಕು. ಕಾರ್ಯಕ್ರಮ ಆಯೋಜನೆಯ ಸ್ಥಳದಲ್ಲಿ ಸ್ವಿಮ್ಮಿಂಗ್ ಪೂಲ್ ಇದ್ದಲ್ಲಿ, ಹೆಚ್ಚಿನ ಗಮನ ಹರಿಸಬೇಕು. ಈಜುಕೊಳಕ್ಕೆ ಸಾರ್ವಜನಿಕರಿಗೆ ಅವಕಾಶವಿದ್ದಲ್ಲಿ ನುರಿತ ಈಜು ತಜ್ಞರನ್ನು ನೇಮಕ ಮಾಡಬೇಕು.

ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು: ಪೊಲೀಸ್, ಸಿವಿಲ್ ಡಿಫೆನ್ಸ್, ಗೃಹರಕ್ಷಕ ದಳ 11,830 ಸಿಬ್ಬಂದಿಯಿಂದ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.