ಕರ್ನಾಟಕ

karnataka

ETV Bharat / sports

ಐಪಿಎಲ್ 2024ರ​ ಪ್ರೋಮೋ ರಿಲೀಸ್​: ಪಂತ್​, ಅಯ್ಯರ್​, ಪಾಂಡ್ಯ, ರಾಹುಲ್​ ಮಿಂಚು

ಐಪಿಎಲ್​ 2024ರ ಪ್ರೋಮೋ ಬಿಡುಗಡೆಯಾಗಿದೆ. ಇದರಲ್ಲಿ ಪಂತ್​, ಅಯ್ಯರ್​, ಪಾಂಡ್ಯ, ರಾಹುಲ್​ ಕಾಣಿಸಿಕೊಂಡಿದ್ದಾರೆ.

Eಐಪಿಎಲ್ 2024ರ​ ಪ್ರೋಮೋ ರಿಲೀಸ್​: ಪಂತ್​, ಅಯ್ಯರ್​, ಪಾಂಡ್ಯ, ರಾಹುಲ್​ ಮಿಂಚು
ಐಪಿಎಲ್ 2024ರ​ ಪ್ರೋಮೋ ರಿಲೀಸ್​: ಪಂತ್​, ಅಯ್ಯರ್​, ಪಾಂಡ್ಯ, ರಾಹುಲ್​ ಮಿಂಚು

By ETV Bharat Karnataka Team

Published : Mar 3, 2024, 7:29 PM IST

ನವದೆಹಲಿ:ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) 17ನೇ ಸೀಸನ್​ಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು ಮಾ.22ರಿಂದ ಚುಟುಕು ಕ್ರಿಕೆಟ್​ ಹಬ್ಬ ಪ್ರಾರಂಭಗೊಳ್ಳಲಿದೆ. ಈಗಾಗಲೇ ದಿನಾಂಕವನ್ನು ಬಿಸಿಸಿಐ ಘೋಷಣೆ ಮಾಡಿದೆ. ಐಪಿಎಲ್ 2024ರ ಮಾಧ್ಯಮ ಪ್ರಸಾರ ಹಕ್ಕನ್ನು ಹೊಂದಿರುವ ಸ್ಟಾರ್​ ಸ್ಪೋರ್ಟ್ಸ್ ಲೀಗ್‌ನ ಮೊದಲ ಪ್ರೋಮೋವನ್ನು ಇಂದು ಬಿಡುಗಡೆ ಮಾಡಿದೆ.

ಈ ಪ್ರೋಮೋದಲ್ಲಿ ಹಾರ್ದಿಕ್ ಪಾಂಡ್ಯ ಸೇರಿದಂತೆ ಮೂರು ತಂಡಗಳ ನಾಯಕರು ಕಾಣಿಸಿಕೊಂಡಿದ್ದಾರೆ. ಆಶ್ವರ್ಯಕರ ವಿಷಯವೆಂದರೆ ಪ್ರೋಮೋದಲ್ಲಿ CSK ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಮುಂಬೈ ಇಂಡಿಯನ್ಸ್​ನ ಮಾಜಿ ನಾಯಕ ರೋಹಿತ್ ಶರ್ಮಾ ಕಾಣೆಯಾಗಿದ್ದು, ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಈ ಪ್ರೋಮೋವನ್ನು ಸ್ಟಾರ್​ ಸ್ಪೋರ್ಟ್ಸ್​ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಮಾಡಿದೆ. ಈ ಪ್ರೋಮೋದ ಆರಂಭದಲ್ಲಿ ರಿಷಬ್ ಪಂತ್ ಕಾಣಿಸಿಕೊಂಡಿದ್ದು, ಪಂಜಾಬಿ ಲುಕ್​ನಲ್ಲಿ ಢಾಬಾದಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ.

ಪಂತ್ ನಂತರ ಶ್ರೇಯಸ್ ಅಯ್ಯರ್ ಬೆಂಗಾಲಿ ಗೆಟಪ್​ನಲ್ಲಿ ಕುಟುಂಬದ ಜೊತೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ. ಇದಾದ ನಂತರ ಕೆಎಲ್ ರಾಹುಲ್ ಕೂಡ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ಪುಸ್ತಕವನ್ನು ಓದುತ್ತ ಪ್ರತಿಕ್ರಿಯೆಗಳನ್ನು ನೀಡುತ್ತಾ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಉಳಿದಂತೆ ಮುಂಬೈ ಇಂಡಿಯನ್ಸ್‌ನ ನೂತನ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಇದ್ದು ಬ್ಯುಸಿನೆಸ್ ಮ್ಯಾನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 1.31 ಸೆಕೆಂಡ್​ಗಳ ಪ್ರೋಮೋ ಇದಾಗಿದೆ.

ಉಳಿದಂತೆ ಲೀಗ್​ ಬಗ್ಗೆ ತಿಳಿಯುವುದಾದರೆ, ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿಲ್ಲ. ಭಾರತೀಯ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕವನ್ನು ಘೋಷಿಸಿದ ನಂತರವೇ IPLನ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಮಾ.22 ರಂದು ಆರಂಭಗೊಳ್ಳಲಿರುವ ಚುಟುಕು ಕ್ರಿಕೆಟ್​ ಹಬ್ಬದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೈನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಸೆಣಸಲಿವೆ.

ಇದನ್ನೂ ಓದಿ:ಅವರಿಲ್ಲದೇ ಭಾರತ ಗೆಲ್ಲುತ್ತಿರಲಿಲ್ಲ ಎಂದು ಭಾವಿಸುವವರಿಗೆ ಇದೊಂದು ಎಚ್ಚರಿಕೆ: ಸುನಿಲ್ ಗವಾಸ್ಕರ್

ABOUT THE AUTHOR

...view details