ಕರ್ನಾಟಕ

karnataka

ETV Bharat / sports

ನಿಧಾನಗತಿ ಬೌಲಿಂಗ್​: ರಾಹುಲ್​, ಋತುರಾಜ್​​ಗೆ ₹12 ಲಕ್ಷ ರೂ. ದಂಡ: ನಾಯಕರಿಬ್ಬರಿಗೆ ಪೆನಾಲ್ಟಿ ಇದೇ ಮೊದಲು - slow over rate fined - SLOW OVER RATE FINED

ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ ಮಾಡಿದ್ದರಿಂದ ಸಿಎಸ್​ಕೆ ಮತ್ತು ಲಖನೌ ತಂಡದ ನಾಯಕರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ನಿಧಾನಗತಿ ಬೌಲಿಂಗ್​
ನಿಧಾನಗತಿ ಬೌಲಿಂಗ್​

By ETV Bharat Karnataka Team

Published : Apr 20, 2024, 12:25 PM IST

ಹೈದರಾಬಾದ್:ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ಮತ್ತು ಲಖನೌ ಸೂಪರ್​ಜೈಂಟ್ಸ್​ ನಡುವಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್​ಗಾಗಿ ಉಭಯ ತಂಡಗಳ ನಾಯಕರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಒಂದೇ ಪಂದ್ಯದಲ್ಲಿ ಎರಡೂ ತಂಡಗಳ ನಾಯಕರಿಗೆ ದಂಡ ವಿಧಿಸಿದ್ದು, ಇದೇ ಮೊದಲಾಗಿದೆ.

ಲಖನೌನ ಏಕನಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಸಿಎಸ್​ಕೆ ವಿರುದ್ಧ ಲಖನೌ ಭರ್ಜರಿ ಜಯ ಸಾಧಿಸಿತು. ಆದರೆ, ಪಂದ್ಯವು ನಿಗದಿತ ಸಮಯಕ್ಕಿಂತ ತಡವಾಗಿ ಮುಗಿದಿದ್ದರಿಂದ ನಿಯಮಗಳ ಪ್ರಕಾರ ದಂಡ ವಿಧಿಸಲಾಗಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದು ಮೊದಲ ತಪ್ಪಿನ ಕಾರಣ ಕನಿಷ್ಠ ದಂಡ ಹಾಕಲಾಗಿದೆ. ಇದೇ ರೀತಿ ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಅವರಿಗೂ ಇಷ್ಟೇ ಪ್ರಮಾಣದ ಶಿಕ್ಷೆ ವಿಧಿಸಲಾಗಿದೆ ಎಂದು ತಿಳಿಸಿದೆ.

ಒಂದೇ ಪಂದ್ಯದಲ್ಲಿ ನಾಯಕರಿಗೆ ದಂಡ:ಪಂದ್ಯವೊಂದರಲ್ಲಿ ತಂಡದ ನಾಯಕ ಅಥವಾ ಆಟಗಾರರಿಗೆ ದಂಡದ ಹಾಕುವುದು ಸಹಜ. ಆದರೆ, ಸಿಎಸ್​ಕೆ- ಲಖನೌ ಪಂದ್ಯದಲ್ಲಿ ಉಭಯ ತಂಡಗಳ ನಾಯಕರಿಬ್ಬರಿಗೆ ದಂಡ ಹಾಕಲಾಗಿದೆ. ಇದು ಉಭಯ ತಂಡಗಳು ಮಾಡಿದ ಮೊದಲ ತಪ್ಪಾದ ಕಾರಣ, ಕನಿಷ್ಠ ದಂಡದ ಶಿಕ್ಷೆ ವಿಧಿಸಲಾಗಿದೆ. ಇದಕ್ಕೂ ಮುನ್ನ ಡೆಲ್ಲಿ ತಂಡದ ನಾಯಕ ರಿಷಬ್​​ ಪಂತ್​ಗೆ ಎರಡು ಬಾರಿ, ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಾಜಸ್ಥಾನ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಒಂದು ಬಾರಿ ದಂಡ ವಿಧಿಸಲಾಗಿದೆ.

ಸಿಎಸ್​​ಕೆ ಚೆಂಡಾಡಿದ ಲಖನೌ:ಇನ್ನೂ ಪಂದ್ಯದಲ್ಲಿ ಲಖನೌ ತಂಡ ಚೆನ್ನೈ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಕ್ವಿಂಟನ್​ ಡಿ ಕಾಕ್​ ಮತ್ತು ನಾಯಕ ಕೆಎಲ್​ ರಾಹುಲ್​ರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ತಂಡ 176 ರನ್​ ಗುರಿಯನ್ನು 19 ಓವರ್​ಗಳಲ್ಲೇ ದಾಟಿ ವಿಜಯದ ಕೇಕೆ ಹಾಕಿತು. ರಾಹುಲ್​ 53 ಎಸೆತಗಳಲ್ಲಿ 82, ಡಿ ಕಾಕ್​ 43 ಎಸೆತಗಳಲ್ಲಿ 54 ರನ್​ ಬಾರಿಸಿದರು. ನಿಕೋಲಸ್​ ಪೂರನ್​ 23 ರನ್ ಕಾಣಿಕೆ ನೀಡಿದರು. ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಸಿಎಸ್​ಕೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ರವೀಂದ್ರ ಜಡೇಜಾ 57, ಅಜಿಂಕ್ಯಾ ರಹಾನೆ 36, ಮೊಯೀನ್​ ಅಲಿ 30 ರನ್​ ನೆರವಿನಿಂದ 176 ರನ್​ಗಳ ಸಾಧಾರಣ ಗುರಿ ದಾಖಲಿಸಿತು. ಟೂರ್ನಿಯಲ್ಲಿ ಸಿಎಸ್​ಕೆಗಿದು 3ನೇ ಸೋಲಾಗಿದೆ. ಚೆನ್ನೈ ವಿರುದ್ಧದ ಗೆಲುವಿನೊಂದಿಗೆ ಲಖನೌ 8 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಸಿಎಸ್​ಕೆ ಇಷ್ಟೇ ಅಂಕಗಳೊಂದಿಗೆ ನೆಟ್​ ರನ್​ರೇಟ್‌ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ತವರಿನಲ್ಲಿ ರಾಹುಲ್​ ಪಡೆ ಘರ್ಜನೆ: ಚೆನ್ನೈ ಎದರು ಲಖನೌಗೆ 8 ವಿಕೆಟ್​ಗಳ ಭರ್ಜರಿ ಜಯ - LSG Beat CSK

ABOUT THE AUTHOR

...view details