ಹೈದರಾಬಾದ್:ರನ್ ಮಷಿನ್ ವಿರಾಟ್ ಕೊಹ್ಲಿಗೆ ಸಂಖ್ಯೆ '18' ರೊಂದಿಗೆ ವಿಶೇಷವಾದ ಬಾಂಧವ್ಯವಿದೆ. ಇದು ಅವರ ಜರ್ಸಿ ನಂಬರ್. ವಿರಾಟ್ ಈಗಾಗಲೇ ಹಲವು ಬಾರಿ ಈ ಸಂಖ್ಯೆಯೊಂದಿಗೆ ತಮ್ಮ ಒಡನಾಟ ಹಂಚಿಕೊಂಡಿರುವುದು ಗೊತ್ತಿರುವ ಸಂಗತಿ. ಐಪಿಎಲ್ ಪ್ಲೇ ಆಫ್‌ನಲ್ಲಿ ಈ ಸಂಖ್ಯೆ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ. ಇದರ ಹಿಂದಿರುವ ಸ್ವಾರಸ್ಯಕರ ಸಂಗತಿಗಳು ಹೀಗಿವೆ.
ಮೂರು ತಂಡಗಳು (ಕೋಲ್ಕತ್ತಾ, ರಾಜಸ್ಥಾನ, ಹೈದರಾಬಾದ್) ಈಗಾಗಲೇ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಅಗ್ರ 4ರಲ್ಲಿ ಸ್ಥಾನ ಪಡೆಯುವ ನಾಲ್ಕನೇ ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ.. ಆ ಅವಕಾಶ ಎರಡು ತಂಡಗಳಿಗೆ ಮಾತ್ರ ಇರುವುದು ಗಮನಾರ್ಹ. ಚೆನ್ನೈ ಮತ್ತು ಬೆಂಗಳೂರು ನಡುವಿನ ಅಂತಿಮ ಲೀಗ್ ಪಂದ್ಯ ನಾಲ್ಕನೇ ತಂಡವನ್ನು ನಿರ್ಧರಿಸಲಿದೆ. ಈ ಪಂದ್ಯ ಮೇ 18ರಂದು (ಶನಿವಾರ) ನಡೆಯಲಿದೆ.
ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೂ ಪ್ಲೇಆಫ್ ತಲುಪಲು ಹಲವು ಸಮೀಕರಣಗಳಿವೆ. ಆರ್‌ಸಿಬಿ ಮೊದಲು ಬ್ಯಾಟ್ ಮಾಡಿದರೆ 18 ರನ್, ಎರಡನೇ ಬ್ಯಾಟಿಂಗ್ ಮಾಡಿದರೆ 18 ಓವರ್ಗಳಲ್ಲಿ ಟಾರ್ಗೆಟ್ ರೀಚ್ ಆಗಬೇಕು. ಆಗ ಮಾತ್ರ ಕೊಹ್ಲಿ ಪಡೆ ಅಗ್ರ 4ರೊಳಗೆ ಪ್ರವೇಶಿಸಲಿದೆ.