ಕರ್ನಾಟಕ

karnataka

ETV Bharat / sports

2ನೇ ಏಕದಿನ ಪಂದ್ಯ: ಜೆಫ್ರಿ ವಾಂಡೆರ್ಸೆ ಸ್ಪಿನ್​ ಬಲೆಗೆ ಬಿದ್ದ ಭಾರತ, ಲಂಕಾಗೆ 32 ರನ್​ ಗೆಲುವು - India vs Sri Lanka Second ODI

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡು ಸರಣಿ ಹಿನ್ನಡೆ ಅನುಭವಿಸಿತು.

ಎರಡನೇ ಏಕದಿನ ಪಂದ್ಯ
ಎರಡನೇ ಏಕದಿನ ಪಂದ್ಯ (AP)

By ETV Bharat Karnataka Team

Published : Aug 4, 2024, 10:57 PM IST

ಕೊಲಂಬೊ (ಶ್ರೀಲಂಕಾ):ಕೊಲಂಬೊದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ಲಂಕಾದ ಜೆಫ್ರಿ ವಾಂಡರ್ಸೆ ಅವರ ಸ್ಪಿನ್​ ದಾಳಿಗೆ ನಲುಗಿದ ಭಾರತ ತಂಡ ಎರಡನೇ ಏಕದಿನದಲ್ಲಿ 32 ರನ್​ಗಳ ಸೋಲು ಕಂಡಿದೆ. ಗೆಲ್ಲಬೇಕಿದ್ದ ಮೊದಲ ಪಂದ್ಯವನ್ನು ಕೈಚೆಲ್ಲಿದ್ದ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಹಿನ್ನಡೆ ಅನುಭವಿಸಿತು.

ಜೆಫ್ರಿ ವಾಂಡರ್ಸೆ ಅವರ ಸ್ಪಿನ್​ ದಾಳಿಗೆ ರೋಹಿತ್​ ಶರ್ಮಾ, ಅಕ್ಷರ್​ ಪಟೇಲ್​​, ಶುಭ್​​ಮನ್​ ಗಿಲ್​​ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್​ಗಳು ನಿರುತ್ತರವಾದರು. ಶಿವಂ ದುಬೆ, ಕೆಎಲ್​​ ರಾಹುಲ್​ ಸೊನ್ನೆಗೆ ಔಟಾದರೆ, ವಿರಾಟ್​ ಕೊಹ್ಲಿ 14, ಶ್ರೇಯಸ್​ ಅಯ್ಯರ್​ 7 ವಾಷಿಂಗ್ಟನ್​ ಸುಂದರ್​ 15 ರನ್​ ಗಳಿಸುವಷ್ಟರಲ್ಲಿ ಸುಸ್ತಾದರು. ಟಾಸ್​ ಗೆದ್ದ ಮೊದಲು ಬ್ಯಾಟ್​ ಮಾಡಿದ ಲಂಕಾ ಪಡೆ 9 ವಿಕೆಟ್​ಗೆ 240 ರನ್​ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಭಾರತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ 42.2 ಓವರ್​ಗಳಲ್ಲಿ 208 ರನ್​ಗೆ ಸರ್ವಪತನ ಕಂಡಿತು.

ಉತ್ತಮ ಆರಂಭ, ದಿಢೀರ್​ ಕುಸಿತ:ಸಾಧಾರಣ ಗುರಿ ಬೆನ್ನತ್ತಿದ ತಂಡಕ್ಕೆ ನಾಯಕ ರೋಹಿತ್​ ಶರ್ಮಾ ಎಂದಿನಂತೆ ಕಿಕ್​ ಸ್ಟಾರ್ಟ್​ ನೀಡಿದರು. 10 ಓವರ್​ಗಳ ಪವರ್​ಪ್ಲೇನಲ್ಲಿ 76 ರನ್​ ಗಳಿಸಿತು. ಗಿಲ್​ ಮತ್ತು ಶರ್ಮಾ ಜೋಡಿ ಮೊದಲ ವಿಕೆಟ್​ಗೆ 97 ರನ್​ ಗಳಿಸಿತು. 44 ಎಸೆತಗಳಲ್ಲಿ 64 ಗಳಿಸಿದ್ದಾಗ ಶರ್ಮಾ ವಾಂಡೆರ್ಸಿ ಬೌಲಿಂಗ್​ನಲ್ಲಿ ಔಟಾದರು. ಅದಾದ ಬಳಿಕ ತಂಡ ದಿಢೀರ್​ ಕುಸಿತ ಕಾಣಲು ಶುರು ಮಾಡಿತು. ಇದರ ಬೆನ್ನಲ್ಲೇ ಶುಭ್​ಮನ್​ಗಿಲ್​ 35 ರನ್​ಗೆ ವಿಕೆಟ್​ ಅದೇ ಸ್ಪಿನ್ನರ್​ಗೆ ಬಲಿಯಾದರು.

97 ರನ್​ಗೆ 1 ವಿಕೆಟ್​ ಕಳೆದುಕೊಂಡಿದ್ದ ಭಾರತ ತಂಡ, ಉಳಿದ 9 ವಿಕೆಟ್​ಗೆ ಗಳಿಸಿದ್ದು ಕೇವಲ 101 ರನ್​. ತೀವ್ರ ಕುಸಿತ ಅನುಭವಿಸಿದ ತಂಡಕ್ಕೆ ಅಕ್ಷರ್​ ಪಟೇಲ್​ (44) ಕೊಂಚ ನೆರವಾದರು. ಅಸಲಂಕಾ ಬೌಲಿಂಗ್​ನಲ್ಲಿ ಅಕ್ಷರ್​ ಔಟಾದ ಬಳಿಕ ತಂಡ ಕೆಲವೇ ನಿಮಿಷಗಳಲ್ಲಿ ಆಲೌಟ್​ ಆಯಿತು.

ವಾಂಡೆರ್ಸೆ ಸ್ಪಿನ್​ ಜಾದು:34 ವರ್ಷದ ಜೆಫ್ರಿ ವಾಂಡೆರ್ಸೆ ಭಾರತ ತಂಡಕ್ಕೆ ಅಕ್ಷರಶಃ ಕಂಟಕವಾಗಿ ಕಾಡಿದರು. 10 ಓವರ್​ಗಳಲ್ಲಿ 33 ರನ್​ ಬಿಟ್ಟುಕೊಟ್ಟು 6 ವಿಕೆಟ್​ ಕಿತ್ತರು. ನಾಯಕ ಚರಿತ ಅಸಲಂಕಾ ಕೊನೆಯಲ್ಲಿ 3 ವಿಕೆಟ್​ ಗಳಿಸಿ ಭಾರತ ತಂಡಕ್ಕೆ ಸೋಲಿನ ರುಚಿ ಉಣಿಸಿದರು. ಮೂರನೇ ಮತ್ತು ಕೊನೆಯ ಪಂದ್ಯ ಇದೇ ಮೈದಾನದಲ್ಲಿ ಆಗಸ್ಟ್ 7 ರಂದು ನಡೆಯಲಿದೆ.

ಇದನ್ನೂ ಓದಿ:ಹಾಕಿ ಕ್ವಾರ್ಟರ್​ ಫೈನಲ್​ನಲ್ಲಿ ಬ್ರಿಟನ್​ ಮಣಿಸಿದ ಭಾರತ: ಸೆಮಿ ಫೈನಲ್​ ಪ್ರವೇಶ - paris olympics 2024

ABOUT THE AUTHOR

...view details