ETV Bharat / state

'ಬೆಳ್ಳೂಡಿ ಕಾಳಿ' ಇನ್ನಿಲ್ಲ: ಹೋರಾಟಕ್ಕೆ ನಿಂತರೆ ಹಿಂದೆ ಸರಿದಿದ್ದೇ ಇಲ್ಲ, ಆದರೆ ವಿಜಯ ವೀರ ಈಗಿಲ್ಲ!

ಕರ್ನಾಟಕದಲ್ಲಿ ಖ್ಯಾತಿ ಗಳಿಸಿದ್ದ ಬೆಳ್ಳೂಡಿ ಕಾಳಿ ಟಗರು ಅಕಾಲಿಕವಾಗಿ ಮೃತಪಟ್ಟಿದೆ.

belludi-kali
ಬೆಳ್ಳೂಡಿ ಕಾಳಿ (ETV Bharat)
author img

By ETV Bharat Karnataka Team

Published : Nov 25, 2024, 3:12 PM IST

ದಾವಣಗೆರೆ : ಟಗರು ಪ್ರೇಮಿಗಳ ಪ್ರೀತಿಯ 'ಬೆಳ್ಳೂಡಿ ಕಾಳಿ' ಟಗರು ಅಭಿಮಾನಿಗಳನ್ನು ಅಗಲಿದೆ. ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕವಾಗಿ ಸಾವನಪ್ಪಿರುವ ಬೆಳ್ಳೂಡಿ ಕಾಳಿ ಟಗರು ಕಣದಲ್ಲಿ ಸೋತಿರುವ ಇತಿಹಾಸವೇ ಇಲ್ಲ, ದಾವಣಗೆರೆ ಜಿಲ್ಲೆಯ ಬೆಳ್ಳೂಡಿ ಗ್ರಾಮದ ಬೆಳ್ಳೂಡಿ ಕಾಳಿ ಟಗರು ಸಾವಿರಾರು ಕುರಿಗಳನ್ನು ಕಣದಲ್ಲಿ ಸೋಲಿಸಿರುವ ಇತಿಹಾಸ ಇದೆ. ಬೆಳ್ಳೂಡಿ ಗ್ರಾಮ‌ ನಿವಾಸಿ ರಾಘವೇಂದ್ರ ಹಾಗೂ ಮೋಹನ್ ಅವರಿಗೆ ಟಗರು ಸೇರಿದೆ.

ಈ ಬಗ್ಗೆ ಮಾಲೀಕ ರಾಘವೇಂದ್ರ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಬೆಳ್ಳೂಡಿ ಕಾಳಿಗೆ ದಾವಣಗೆರೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಇಂದು ಕಾಳಿಯ ರಕ್ತದ ಪರೀಕ್ಷೆಯ ವರದಿ ಬರಬೇಕಾಗಿತ್ತು. ಆದರೆ, ಇಂದು ಬೆಳಗ್ಗೆ 9:30ರ ಸುಮಾರಿಗೆ ಟಗರು ಮೃತಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

26-30 ಕಣ ಮಾಡಿರುವ ಬೆಳ್ಳೂಡಿ ಕಾಳಿ ಇಲ್ಲಿ ತನಕ ಸೋತಿರುವ ಇತಿಹಾಸ ಇಲ್ಲ. ಬೆಳ್ಳೂಡಿ ಕಾಳಿ ಹುಡ್ಡಿಯ ಕಣಕ್ಕೆ ಬರುತ್ತಿದೆ ಎಂದರೆ ಅದರ ಆಟವನ್ನು ಕಣ್ತುಂಬಿಕೊಳ್ಳಲು ಗುಂಪುಗುಂಪಾಗಿ ಅಭಿಮಾನಿಗಳು ಜಮಾಯಿಸುತ್ತಿದ್ದರು. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿಯೂ ಅದರದ್ದೇ ಆದ ಅಭಿಮಾನಿಗಳನ್ನು ಬೆಳ್ಳೂಡಿ ಕಾಳಿ ಟಗರು ಹೊಂದಿತ್ತು ಎಂದು ಹೇಳಿದ್ದಾರೆ.

'ಬೆಳ್ಳೂಡಿ ಕಾಳಿ' ಗತ್ತು ಗಾಂಭೀರ್ಯದಿಂದಲೇ ಹುಡ್ಡಿಯ ಕಣಕ್ಕೆ ಎಂಟ್ರಿಕೊಡ್ತಿತ್ತು. ಕಣದಲ್ಲಿದ್ದ ಎದುರಾಳಿ ಟಗರನ್ನು ಹೊಡೆದುರುಳಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿರುವ ಇತಿಹಾಸ ಇನ್ನೂ ಮರೆಯುವಂತಿಲ್ಲ. ಬೆಳ್ಳೂಡಿ ಕಾಳಿಯನ್ನು ನಮ್ಮ ಜಮೀನಿನಲ್ಲಿಯೇ ಮಣ್ಣು ಮಾಡುತ್ತೇವೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ : ಕೀಟನಾಶಕ ಸಿಂಪಡಿಸಿದ ಬೆಳೆ ತಿಂದು 100ಕ್ಕೂ ಹೆಚ್ಚು ಕುರಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.