ನವದೆಹಲಿ:ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಸೆಪ್ಟೆಂಬರ್ 27ರಿಂದ ಉತ್ತರ ಪ್ರದೇಶದ ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಆರಂಭಗೊಳ್ಳಲಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 280 ರನ್‌ಗಳಿಂದ ಗೆದ್ದಿರುವ ಟೀಂ ಇಂಡಿಯಾ ಇದೀಗ ಕಾನ್ಪುರ ಟೆಸ್ಟ್‌ನಲ್ಲೂ ಜಯಭೇರಿ ಬಾರಿಸಿ ಕ್ಲೀನ್ ಸ್ವೀಪ್ ಯೋಜನೆ ರೂಪಿಸಿದೆ. ಏತನ್ಮಧ್ಯೆ, 2ನೇ ಟೆಸ್ಟ್‌ಗಾಗಿ ಬಿಸಿಸಿಐ ಇಂದು ತಂಡವನ್ನು ಪ್ರಕಟಿಸಿತು.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿರುವ ಅದೇ ತಂಡ ಎರಡನೇ ಟೆಸ್ಟ್‌ನಲ್ಲೂ ಮುಂದುವರೆಯಲಿದೆ. ಇದರೊಂದಿಗೆ 16 ಸದಸ್ಯರ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿ.ಕೀ), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಯಶ್ ದಯಾಳ್.
ತವರಿನಲ್ಲಿ ಭಾರತದ ದಾಖಲೆ:2012ರಿಂದಲೂ ಟೀಂ ಇಂಡಿಯಾ ತವರಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಅಂದಿನಿಂದ ಇದುವರೆಗೂ ಒಂದೇ ಒಂದು ಟೆಸ್ಟ್ ಸರಣಿಯನ್ನೂ ಕಳೆದುಕೊಂಡಿಲ್ಲ. 2012ರಿಂದ ದೇಶದಲ್ಲಿ ನಡೆದ 17 ಟೆಸ್ಟ್ ಸರಣಿಗಳಲ್ಲಿ ಭಾರತ ಅಜೇಯ ಗೆಲುವಿನ ಓಟ ಮುಂದುವರೆಸಿದೆ.
ಇದನ್ನೂ ಓದಿ:280 ರನ್‌ಗಳಿಂದ ಬಾಂಗ್ಲಾ ಬಗ್ಗುಬಡಿದು ಮೊದಲ ಟೆಸ್ಟ್ ಗೆದ್ದ ಭಾರತ: ಅಶ್ವಿನ್ ಪಂದ್ಯಶ್ರೇಷ್ಠ ಪ್ರದರ್ಶನ - India vs Bangladesh 1st Test