ಪ್ಯಾರಿಸ್ (ಫ್ರಾನ್ಸ್): ಭಾರತದ ಪುರುಷರ ಹಾಕಿ ತಂಡವು ಬಿಲ್ಲುಗಾರಿಕೆ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಸೋಲನುಭವಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ತರುಣದೀಪ್ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರಿದ್ದ ಟೀಂ ಇಂಡಿಯಾ ಟರ್ಕಿ ವಿರುದ್ಧ 6-2 ಅಂತರದ ಗೋಲುಗಳಿಂದ ಪರಾಭವಗೊಂಡಿತು. ಇದರೊಂದಿಗೆ ಒಲಿಂಪಿಕ್ ಅಭಿಯಾನವನ್ನು ಕೊನೆಗೊಳಿಸಿತು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಆರ್ಚರಿ ತಂಡವು ನಿರಾಶಾದಾಯಕ ಪ್ರದರ್ಶನ ತೋರಿತು. ತರುಣ್‌ದೀಪ್ ರೈ, ಪ್ರವೀಣ್ ಜಾಧವ್ ಮತ್ತು ಬೊಮ್ಮದೇವರ ಧೀರಜ್ ಮೊದಲ ಎರಡು ಸೆಟ್‌ಗಳಲ್ಲಿ 57-53 ಮತ್ತು 55-52 ರಿಂದ ಹಿನ್ನಡೆ ಅನುಭವಿಸಿದರು. ಆದರೆ, ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡಿದ್ದ ಭಾರತ ತಂಡ ಟರ್ಕಿ ವಿರುದ್ಧ ಮೂರನೇ ಸೆಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಚೇತರಿಕೆ ಕಂಡಿತ್ತು.
ನಾಲ್ಕನೇ ಸೆಟ್‌ನಲ್ಲಿ ಮತ್ತೆ ವೈಫಲ್ಯವನ್ನು ಎದುರಿಸಿತು. ಇದರ ಪರಿಣಾಮವಾಗಿ, ಸೆಮಿ-ಫೈನಲ್ಗೇರಲು ಭಾರತ ವಿಫಲವಾಯಿತು. ಪಂದ್ಯದ ಆರಂಭದಿಂದಲೇ ಟರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿತು. ಮೊದಲೆರಡು ಸೆಟ್‌ಗಳನ್ನು ಗೆದ್ದ ನಂತರ ಮೂರನೇ ಸೆಟ್ ಕೂಡ ಟರ್ಕಿಯ ಪರವಾಗಿಯೇ ಇತ್ತು. ಆದರೆ, ಬಾರ್ಕಿಮ್ ತುಮರ್ ಅವರ ಕೊನೆಯ ಹೊಡೆತದಲ್ಲಿ ಸ್ಕೋರ್ 7 ಗಳಿಸಿದರು, ಇದರಿಂದಾಗಿ ಭಾರತ ಸೆಟ್ ಗೆದ್ದುಕೊಂಡಿತು.