ಕರ್ನಾಟಕ

karnataka

ETV Bharat / sports

ಜಿಂಬಾಬ್ವೆ ವಿರುದ್ಧ ಭಾರತಕ್ಕೆ 100 ರನ್​ ಜಯ; ಟಿ20 ಸರಣಿ 1-1 ಸಮಬಲ - India Beats Zimbabwe - INDIA BEATS ZIMBABWE

2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

india-beat-zimbabwe
ಜಿಂಬಾಬ್ವೆ - ಭಾರತ ಪಂದ್ಯ (IANS)

By ANI

Published : Jul 7, 2024, 8:49 PM IST

ಹರಾರೆ (ಜಿಂಬಾಬ್ವೆ):ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಂದು ಭಾರತ ತಂಡವು 100 ರನ್​ಗಳ ಅಂತರದ ಜಯ ದಾಖಲಿಸಿದೆ. ಈ ಮೂಲಕ ಭಾರತವು ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 234 ರನ್​ಗಳ ಬೃಹತ್​ ಮೊತ್ತ ಗಳಿಸಿತ್ತು. ಯುವ ಬ್ಯಾಟರ್​​ ಅಭಿಷೇಕ್​ ಶರ್ಮಾ ಚೊಚ್ಚಲ ಶತಕ (100), ರುತುರಾಜ್​ ಗಾಯಕ್ವಾಡ್​ ಅಜೇಯ ಅರ್ಧಶತಕ (77 ರನ್​) ಹಾಗೂ ರಿಂಕು ಸಿಂಗ್​ ಅವರು ಅಬ್ಬರದ 48* ರನ್​ ಸಿಡಿಸಿದರು. ಇವರಿಬ್ಬರ ಜೋಡಿಯು ಅಂತಿಮ ಓವರ್​ಗಳಲ್ಲಿ ಜಿಂಬಾಬ್ವೆ ಬೌಲರ್​ಗಳ ಬೆವರಿಳಿಸಿತು.

235 ರನ್​ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಭಾರತದ ಬಿಗುವಿನ ಬೌಲಿಂಗ್​ ದಾಳಿಗೆ ಸಿಲುಕಿ ಮೊದಲ ಓವರ್​ನಿಂದಲೇ ವಿಕೆಟ್​ ಕಳೆದುಕೊಳ್ಳುತ್ತ ಸಾಗಿತು. ಆರಂಭಿಕ ವೆಸ್ಲಿ ಮಾಧೆವೆರೆ 43, ಬ್ರಿಯಾನ್​ ಬೆನ್ನೆಟ್​ 26, ಲುಕ್​ ಜೊಂಗ್ವೆ 33 ಹಾಗೂ ಜೊನಾಥನ್​ ಕ್ಯಾಂಪ್ಬೆಲ್​ 10 ರನ್​ ಹೊರತುಪಡಿಸಿ ಉಳಿದ ಬ್ಯಾಟರ್​ಗಳು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ.

ನಾಯಕ ಸಿಕಂದರ್​ ರಾಜಾ ಕೇವಲ 4 ರನ್​ಗೆ ವಿಕೆಟ್​ ಒಪ್ಪಿಸಿದರು. ಇನ್ನುಳಿದಂತೆ ಇನ್ನೋಸೆಂಟ್​ ಕೈಯಾ 4, ಡಿಯೋನ್​ ಬೆನ್ನೆಟ್ 0, ಕ್ಲಿವ್​ ಮಡಂಡೆ 0 ಹಾಗೂ ವೆಲ್ಲಿಂಗ್ಟನ್​ ಮಸಕಡ್ಜ 1 ರನ್​ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ತಂಡವು 18.4 ಓವರ್​ಗಳಲ್ಲೇ 134 ರನ್​ಗಳಿಗೆ ಸರ್ವಪತನ ಕಂಡಿತು.

ಟೀಂ ಇಂಡಿಯಾ ಪರ ಮುಖೇಶ್​ ಕುಮಾರ್​ ಹಾಗೂ ಆವೇಶ್​ ಖಾನ್​ ತಲಾ ಮೂರು, ರವಿ ಬಿಷ್ಣೋಯ್​ 2 ಮತ್ತು ವಾಷಿಂಗ್ಟನ್​ ಸುಂದರ್​ ಒಂದು ವಿಕೆಟ್​ ಪಡೆದರು. ಮೊದಲ ಪಂದ್ಯದಲ್ಲಿ ಸೋತಿದ್ದ ಶುಭ್ಮನ್​ ಗಿಲ್​ ಪಡೆ, ಎರಡನೇ ಮ್ಯಾಚ್​ ಗೆದ್ದು ಸರಣಿಯಲ್ಲಿ 1-1ರ ಸಮಬಲ ಸಾಧನೆ ಮಾಡಿದೆ.

ಇದನ್ನೂ ಓದಿ:2ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲೇ ಅಭಿಷೇಕ್​ ಶರ್ಮಾ ಶತಕ: ಜಿಂಬಾಬ್ವೆಗೆ 235 ರನ್​ ಗೆಲುವಿನ ಗುರಿ! - IND VS ZIM T20I Series

ABOUT THE AUTHOR

...view details