ಕರ್ನಾಟಕ

karnataka

ETV Bharat / sports

'ವಿರಾಟ್ ಕೊಹ್ಲಿ​, ರೋಹಿತ್ ಶರ್ಮಾ​ ಟೆಸ್ಟ್​ಗೆ ನಿವೃತ್ತಿ ಘೋಷಿಸಲಿ': ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಆಕ್ರೋಶ

ನ್ಯೂಜಿಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಕಳಪೆ ಪ್ರದರ್ಶನ ತೋರಿರುವ ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್​ಗೆ ನಿವೃತ್ತಿ ಘೋಷಿಸಬೇಕು ಎಂದು ಕೆಲವು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ​

ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ
ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ (IANS)

By ETV Bharat Sports Team

Published : Oct 27, 2024, 10:22 AM IST

ಹೈದರಾಬಾದ್​: ಪುಣೆಯಲ್ಲಿ ನಡೆದ ನ್ಯೂಜಿಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ತೋರಿ 113 ರನ್​ಗಳಿಂದ ಸೋಲನುಭವಿಸಿ ಸರಣಿ ಸೋತಿದೆ. ಇದರ ಬೆನ್ನಲ್ಲೇ ಕ್ರಿಕೆಟ್​ ಅಭಿಮಾನಿಗಳು ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದು 'ಟೆಸ್ಟ್​ಗೆ ನಿವೃತ್ತಿ ಘೋಷಿಸಿ' ಎಂದು ಆಗ್ರಹಿಸಿದ್ದಾರೆ.

ತವರಿನಲ್ಲಿ ಸತತ 18 ಟೆಸ್ಟ್​ ಸರಣಿಗಳನ್ನು ಗೆದ್ದಿದ್ದ ಭಾರತ 12 ವರ್ಷಗಳ ಬಳಿಕ ಶನಿವಾರ ನ್ಯೂಜಿಲೆಂಡ್​ ವಿರುದ್ಧ ಸರಣಿ ಸೋಲು ಕಂಡಿತು. ಇದರೊಂದಿಗೆ ಭಾರತ ನೆಲದಲ್ಲಿ ನ್ಯೂಜಿಲೆಂಡ್​ 67 ವರ್ಷಗಳ ಬಳಿಕ ಸರಣಿ ಜಯಿಸಿದೆ.

ಎರಡನೇ ಟೆಸ್ಟ್​ನಲ್ಲಿ 359 ರನ್​ಗಳ ಸಾಮಾನ್ಯ ಗುರಿ ಪಡೆದಿದ್ದ ಭಾರತ, ಮಿಚೆಲ್​ ಸ್ಯಾಂಟ್ನರ್​ ಸ್ಪಿನ್​ ಬಲೆಗೆ ಬಿದ್ದು ಹೀನಾಯ ಸೋಲು ಅನುಭವಿಸಿತು. ಭಾರತದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್​ (77), ಜಡೇಜಾ (42) ಹೊರತುಪಡಿಸಿ ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಭಾರತ 245 ರನ್​ಗಳಿ ಸರ್ವಪತನ ಕಂಡಿತು.

ಇದರ ಬೆನ್ನಲ್ಲೇ ದಿಗ್ಗಜ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ತವರಿನಲ್ಲಿ ನಡೆದ ಟೆಸ್ಟ್​ನಲ್ಲಿ ಈ ಇಬ್ಬರು ಬ್ಯಾಟರ್​ಗಳು ಕಳಪೆ ಪ್ರದರ್ಶನ ಪ್ರದರ್ಶಿದ ಕಾರಣ ಟೆಸ್ಟ್​ಗೆ ನಿವೃತ್ತಿ ಹೇಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ನಿಮ್ಮಿಬ್ಬರ​ ಟೆಸ್ಟ್​ ಸಮಯ ಮುಗಿದಿದೆ, ನಿವೃತ್ತಿ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ವಿರಾಟ್ ಮತ್ತು ಶರ್ಮಾ ಇಬ್ಬರ ಬ್ಯಾಟ್​ನಿಂದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ತಲಾ ಒಂದು ಅರ್ಧಶತಕ ಬಂದಿದ್ದು ಬಿಟ್ಟರೆ ಹೇಳಿಕೊಳ್ಳುವ ಇನ್ನಿಂಗ್ಸ್​​ ಮೂಡಿಬರಲಿಲ್ಲ. ಎರಡೂ ಪಂದ್ಯಗಳಲ್ಲಿ ರೋಹಿತ್​ ಬ್ಯಾಟ್​ನಿಂದ ಬಂದ ರನ್​ 52, 2, 0, 8 ಆಗಿದ್ದರೆ, ವಿರಾಟ್​ ಕೊಹ್ಲಿ, 0, 70, 17, 1 ರನ್​ ಮಾತ್ರ ಕಲೆಹಾಕಿದ್ದಾರೆ.

ತಂಡ ಈಗಾಗಲೇ ಮೊದಲ ಪಂದ್ಯ ಸೋತು ಸರಣಿಯಲ್ಲಿ 0-1 ಹಿನ್ನಡೆಯಲ್ಲಿದ್ದಾಗ ರೋಹಿತ್​ ಮತ್ತು ಕೊಹ್ಲಿ ಅಮೂಲ್ಯ ಕೊಡುಗೆ ನೀಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆಗಳು ಹುಸಿಯಾದವು ಎಂದು ಆಕ್ರೋಶ ಹೊರಹಾಕಿ, ಇಬ್ಬರೂ ಟಿ20ಯಂತೆ ಟೆಸ್ಟ್​ಗೂ ನಿವೃತ್ತಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ನೀವೇನಂತೀರಿ?.

ಇದನ್ನೂ ಓದಿ:ಭಾರತದ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು: ಮಾಸ್ಟರ್ ಪ್ಲಾನ್ ಬಹಿರಂಗಪಡಿಸಿದ ಕಿವೀಸ್​ ನಾಯಕ

ABOUT THE AUTHOR

...view details