Ind vs Pak IIT Baba Prediction:ಭಾನುವಾರ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು ಗೊತ್ತೇ ಇದೆ. ಆದರೆ ಪಂದ್ಯಕ್ಕೂ ಮುನ್ನ ಐಐಟಿ ಬಾಬಾ ನುಡಿದಿದ್ದ ಭವಿಷ್ಯ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಭಾರತ ಪಾಕ್ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಯಾರು ಗೆಲ್ಲಲಿದ್ದಾರೆ ಎಂದು ಐಐಟಿ ಬಾಬಾ ಅಭಯ್ ಸಿಂಗ್ ಭವಿಷ್ಯ ನುಡಿದಿದ್ದರು. ಈ ಪಂದ್ಯದಲ್ಲಿ ಭಾರತ ಗೆಲ್ಲಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಗೆಲ್ಲಲಿದೆ ಮತ್ತು ವಿರಾಟ್ ಕೊಹ್ಲಿ ರನ್ಗಳಿಸದೇ ಮತ್ತೆ ಫ್ಲಾಪ್ ಆಗಲಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವೆಡೆ ಭಾರಿ ವೈರಲ್ ಕೂಡ ಆಗಿತ್ತು. ಆದರೆ ಐಐಟಿ ಬಾಬಾ ಹೇಳಿದಂತೆ ಯಾವುದ ಆಗಲಿಲ್ಲ. ಈ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಈ ಗೆಲುವಿನ ಬೆನ್ನಲ್ಲೆ ಐಐಟಿ ಬಾಬಾ ಅವರ ಭವಿಷ್ಯವಾಣಿ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾದವು. ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಇದೀಗ ಈ ವಿಷಯವಾಗಿ ಐಐಟಿ ಬಾಬಾ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ.
ಯೂಟ್ಯೂಬರ್ ಇಬ್ಬರು ಐಐಟಿ ಬಾಬಾಗೆ ಕರೆ ಮಾಡಿ ಭಾರತ - ಪಾಕ್ ಪಂದ್ಯದ ಬಗ್ಗೆ ನೀವು ನುಡಿದಿದ್ದ ಭವಿಷ್ಯವಾಣಿ ಸುಳ್ಳಾಗಿದೆ. ಇದಕ್ಕೆ ಏನು ಹೇಳುವಿರಿ ಎಂದು ಪ್ರಶ್ನಿಸಿದ್ದಾರೆ. ಬಳಿಕ ಐಐಟಿ ಬಾಬಾ ಪ್ರತಿಕ್ರಿಯೆ ನೀಡಿದ್ದು ಕೇಳಿ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಐಟಿ ಬಾಬಾ, ಇಂತಹ ಯಾವುದೇ ಭವಿಷ್ಯವಾಣಿಗಳನ್ನು ನಂಬಬೇಡಿ. ಇಂತಹ ಕೆಟ್ಟ ಭವಿಷ್ಯವಾಣಿಗಳಿಂದ ನಿಮ್ಮ ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಿ ಮತ್ತು ನಿಮ್ಮ ಸ್ವಂತ ಬುದ್ಧಿ ಶಕ್ತಿಯನ್ನು ಉಪಯೋಗಿಸಿಕೊಳ್ಳಿ" ಎಂದು ತಿಳಿಸಿದ್ದಾರೆ. ಇದರ ಬೆನ್ನೆಲ್ಲೆ ನೆಟಿಜನ್ಸ್ ಬಾಬಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವರು ಬೇಗ ಫೇಮಸ್ ಆಗಲು ಈ ರೀತಿ ಹೇಳಿಕೆಗಳನ್ನು ನೀಡುತ್ತಾರೆ. ಇದು ಅವರ ಟ್ರಿಕ್ಸ್ ಎಂದಿದ್ದಾರೆ. ಮತ್ತೆ ಕೆಲವರು ಜನರನ್ನು ಯಾಮಾರಿಸಲು ಇಂತಹ ಬಾಬಾಗಳು ಕಾಯುತ್ತಿರುತ್ತಾರೆ ಎಂದಿದ್ದಾರೆ.
ಯಾರು ಈ ಐಐಟಿ ಬಾಬಾ:ಅಭಯ್ ಸಿಂಗ್ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವೀಧರರಾಗಿದ್ದಾರೆ. ಅವರು 2008-2012 ಬ್ಯಾಚ್‌ಗೆ ಸೇರಿದವರಾಗಿದ್ದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಬಾಬಾ ಅವತಾರದಲ್ಲಿ ಕಾಣಿಸಿಕೊಂಡಿದ್ದು ಭಾರೀ ವೈರಲ್ ಆಗಿದ್ದಾರೆ. ಇವರನ್ನು ಜನ ಐಐಟಿ ಬಾಬಾ ಎಂದೇ ಗುರುತಿಸುತ್ತಿದ್ದಾರೆ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಮತ್ತೊಂದು ಮೆಗಾ ಫೈಟ್: ಗೆದ್ದ ತಂಡ ಸೆಮಿಸ್ಗೆ ಪ್ರವೇಶ!