ಕರ್ನಾಟಕ

karnataka

ETV Bharat / sports

ಮಹಿಳಾ ಆಟಗಾರರ ಸುರಕ್ಷೆತೆಗಾಗಿ ಕ್ರಿಕೆಟ್​ನಲ್ಲೂ AI ಟೂಲ್​​ ಬಳಕೆಗೆ ಮುಂದಾದ ಐಸಿಸಿ: ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ? - ICC HAS LAUNCHED AI TOOL - ICC HAS LAUNCHED AI TOOL

ಮಹಿಳಾ ಕ್ರಿಕೆಟಿಗರ ಸುರಕ್ಷಿತೆಗಾಗಿ ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಸೋಶಿಯಲ್​ ಮೀಡಿಯಾ ಮಾಡರೇಶನ್ ಹೆಸರಿನ AI ಟೂಲ್​ ಅನ್ನು ಪ್ರಾರಂಭಿಸಿದೆ.

ಮಹಿಳಾ ಕ್ರಿಕೆಟರ್​
ಮಹಿಳಾ ಕ್ರಿಕೆಟರ್​ (AP)

By ETV Bharat Sports Team

Published : Oct 3, 2024, 7:01 PM IST

ಹೈದರಾಬಾದ್​: ಮಹಿಳಾ ಕ್ರಿಕೆಟಿಗರ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಮತ್ತು ದ್ವೇಷಪೂರಿತ ಪೋಸ್ಟ್​ಗಳಿಂದ ಮಹಿಳಾ ಕ್ರಿಕೆಟಿಗರನ್ನು ರಕ್ಷಿಸಲು ಹೊಸ AI ಟೂಲ್​ ಅನ್ನು ಪ್ರಾರಂಭಿಸಿದೆ.

ಗುರುವಾರ, ಸಾಮಾಜಿಕ ಮಾಧ್ಯಮದಲ್ಲಿನ ಆಕ್ಷೇಪಾರ್ಹ ವಿಷಯಗಳಿಂದ ಮಹಿಳಾ ಕ್ರಿಕೆಟಿಗರನ್ನು ರಕ್ಷಿಸುವ ಉದ್ದೇಶದಿಂದಾಗಿ ಐಸಿಸಿ 'ಸೋಶಿಯಲ್​ ಮೀಡಿಯಾ ಮಾಡರೇಶನ್' ಎಂಬ ಹೆಸರಿನ AI ಸಾಧನವನ್ನು ಘೋಷಿಸಿತು. ಈಗಾಗಲೇ 60 ಮಹಿಳಾ ಕ್ರಿಕೆಟಿಗರು ಈ ಟೂಲ್​ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಮಹಿಳಾ ಆಟಗಾರ್ತಿಯರಿಗೆ ಸುರಕ್ಷಿತ ಡಿಜಿಟಲ್ ವಾತಾವರಣವನ್ನು ಒದಗಿಸಲು ಐಸಿಸಿ ಈ ನಿರ್ಧಾರ ಕೈಗೊಂಡಿದೆ. ಈ ಸಾಮಾಜಿಕ ಮಾಧ್ಯಮ ಮಾಡರೇಶನ್ AI ತಂತ್ರಜ್ಞಾನದಿಂದ ಕಾರ್ಯ ನಿರ್ವಹಿಸುತ್ತದೆ. GoBubble ಜೊತೆಗೆ ಸೇರಿ ಐಸಿಸಿ ಈ ಟೂಲ್​ ಅನ್ನು ಪ್ರಾರಂಭಿಸಿದೆ.

ಈ ಟೂಲ್​ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಆಟಗಾರರ ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಬರುವ ಕಾಮೆಂಟ್‌ಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಒಂದು ವೇಳೆ ಆಟಗಾರರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಕ್ಷೇಪಾರ್ಹ, ದ್ವೇಷಪೂರಿತದ ಕಾಮೆಂಟ್‌ಗಳ ಕಂಡು ಬಂದರೆ ಕೂಡಲೇ ಅದನ್ನು ತೆಗೆದು ಹಾಕಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ ಡಿಜಿಟಲ್ ಪ್ಲಾಟ್​ಫಾರ್ಮ್​ ಮುಖ್ಯಸ್ಥ ಫಿನ್ ಬ್ರಾಡ್‌ ಶಾ, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಸಕಾರಾತ್ಮಕ ವಾತಾವರಣವನ್ನು ಒದಗಿಸಲು ಈ ಉಪಕರಣವು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ ಇಂದಿನಿಂದ ಮಹಿಳಾ ಟಿ20 ವಿಶ್ವಕಪ್​ ಪಂದ್ಯಾವಳಿಗಳು ಆರಂಭಗೊಂಡಿವೆ. ಒಟ್ಟು 18 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಎ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ತಂಡಗಳಿದ್ದು, ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ.

ಇಂದು ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಲಿವೆ. ಭಾರತ ತನ್ನ ಅಭಿಯಾನವನ್ನು ಶುಕ್ರವಾರ (ನಾಳೆ)ಯಿಂದ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​​ ತಂಡದೊಂದಿಗೆ ಸೆಣಸಲಿದೆ.

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಳನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್​, ಶ್ರೇಯಾಂಕ ಪಾಟೀಲ್​, ಸಜನ.

ಇದನ್ನೂ ಓದಿ:ಇಂದಿನಿಂದ ಅರಬ್ಬರ ನಾಡಲ್ಲಿ ಮಹಿಳಾ ಟಿ20 ವಿಶ್ವಕಪ್​ ಕಲರವ: ಭಾರತದ ಮೊದಲ ಪಂದ್ಯ ಯಾರ ವಿರುದ್ಧ ಗೊತ್ತಾ? - Womens T20 World Cup

ABOUT THE AUTHOR

...view details