ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಪಂದ್ಯ ರದ್ದಾದರೆ ಟಿಕೆಟ್​ ಹಣ ವಾಪಸ್​ ಪಡೆಯುವುದು ಹೇಗೆ: ಅದಕ್ಕಿರುವ ನಿಯಮಗಳೇನು?

ಮಳೆಯಿಂದ ಪಂದ್ಯ ರದ್ದಾದರೆ ಅಥವಾ ಸ್ಥಗಿತಗೊಂಡರೆ, ಸ್ಥಳಾಂತರಗೊಂಡರೆ ಟಿಕೆಟ್​ ಹಣ ಹಿಂಪಡೆಯುವುದು ಹೇಗೆ ಅನ್ನೋದರ ಮಾಹಿತಿ ಈ ಸುದ್ದಿಯಲ್ಲಿ ತಿಳಿಯೋಣ.

By ETV Bharat Sports Team

Published : 5 hours ago

ಕ್ರಿಕೆಟ್​ ಟಿಕೆಟ್​ ರಿಫಂಡ್​ ನಿಯಮ
ಕ್ರಿಕೆಟ್​ ಟಿಕೆಟ್​ ರಿಫಂಡ್​ ನಿಯಮ (IANS)

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಜನರಿಗೆ ಕ್ರಿಕೆಟ್ ಮೇಲಿನ ಕ್ರೇ​ಜ್​ ಹೆಚ್ಚಾಗುತ್ತಿದೆ. ಅದರಲ್ಲೂ ತಮ್ಮೂರಿನಲ್ಲೇ ಕ್ರಿಕೆಟ್​ ಪಂದ್ಯಗಳು ನಡೆಯಲಿವೆ ಎಂದು ಗೊತ್ತಾದರೇ ಸಾಕು, ಮೈದಾನಕ್ಕೆ ಹೋಗಿ ಮ್ಯಾಚ್​ ನೋಡಲು ಬಯಸುವವರೇ ಹೆಚ್ಚು. ಇದಕ್ಕಾಗಿ ಆನ್​ಲೈನ್​​ ಅಥವಾ ಆಫ್​ಲೈನಲ್ಲಿ ಸಾವಿರಾರು ರೂಪಾಯಿಗಳನ್ನು ಕೊಟ್ಟು ಟಿಕೆಟ್​ಗಳನ್ನೂ ಖರೀದಿ ಮಾಡುತ್ತಾರೆ.

ಆದರೇ ಕೆಲವೊಮ್ಮೆ ಮಳೆಯಿಂದಾಗಿಯೋ ಅಥವಾ ಇನ್ನ್ಯಾವುದೋ ಕಾರಣಗಳಿಂದ ಪಂದ್ಯ ರದ್ದಾದರೆ ನಾವು ಟಿಕೆಟ್​ಗಾಗಿ ಖರ್ಚು ಮಾಡಿದ ಹಣ ನೀರುಪಾಲಾದಂತೆ ಎಂದೇ ಅನೇಕರು ಭಾವಿಸಿದ್ದಾರೆ. ಆದರೆ ನಿಮಗೆ ಗೊತ್ತಾ ಪಂದ್ಯ ರದ್ದಾದರೆ ನಾವು ನಮ್ಮ ಹಣವನ್ನು ವಾಪಸ್​ ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಹಣ ವಾಪಸ್​ ಪಡೆಯಲು ಇರುವ ನಿಯಮಗಳೇನು ಮತ್ತು ಟಿಕೆಟ್​ನ ಎಷ್ಟು ಹಣವನ್ನು ನಾವು ವಾಪಸ್​ ಪಡೆಯಬಹುದು ಅನ್ನೋದನ್ನು ಇಲ್ಲಿ ತಿಳಿಯೋಣ.

ಟಿಕೆಟ್​ ಹಣ ವಾಪಸ್​ ಪಡೆಯುವುದು ಹೇಗೆ:ಒಂದು ವೇಳೆ ಕ್ರಿಕೆಟ್​ ಪಂದ್ಯ ಸ್ಥಗಿತ ಅಥವಾ ರದ್ದಾದರೆ ಪಂದ್ಯ ಯಾವ ಹಂತದಲ್ಲಿ ರದ್ದಾಗಿದೆ ಅನ್ನೋದನ್ನು ಪರಿಶೀಲಿಸಿ ಬಳಿಕ ಹಣವನ್ನು ಹಿಂತಿರುಗಿಸಲಾಗುತ್ತದೆ.

ಟಾಸ್​ಗೂ ಮೊದಲು:ಟಾಸ್​ಗೂ ಮೊದಲೇ ಪಂದ್ಯ ರದ್ದಾದರೆ ಪೂರ್ಣ ಪ್ರಮಾಣದಲ್ಲಿ ಹಣವನ್ನು ವಾಪಸ್​​ ಕೊಡಲಾಗುತ್ತದೆ.

ಪಂದ್ಯ ಮರು ನಿಗದಿ:ಕಾರಣಾಂತರಗಳಿಂದಾಗಿ ಪಂದ್ಯವನ್ನು ಬೇರೆ ದಿನಾಂಕ ಅಥವಾ ಸ್ಥಳಾಂತರಗೊಂಡರೆ ಪೂರ್ಣ ಪ್ರಮಾಣದಲ್ಲಿ ಟಿಕೆಟ್​ ಹಣವನ್ನು ವಾಪಸ್​ ಪಡೆಯಬಹುದಾಗಿದೆ.

ಯಾವುದೇ ಎಸೆತ ಕಾಣದಿದ್ದರೆ:ನಿಗದಿಯಾಗಿರುವ ಪಂದ್ಯವೂ ಒಂದೇ ಒಂದು ಎಸೆತವಿಲ್ಲದೇ ರದ್ದಾದರೆ, ಇದಕ್ಕೂ ನಮ್ಮ ಟಿಕೆಟ್​ನ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುತ್ತದೆ.

ಓವರ್​ ಕಡಿತಗೊಂಡರೆ:ಮಳೆಯಿಂದಾಗಿ ಪಂದ್ಯದ ಓವರ್​ಗಳನ್ನು ಕಡಿತಗೊಳಿಸಿದ ಮೇಲೂ ಫಲಿತಾಂಶ ಕಾಣದಿದ್ದರೆ ಟಿಕೆಟ್​ನ ಭಾಗಶಃ ಹಣವನ್ನು ನಾವು ವಾಪಸ್​ ಪಡೆಯಬಹುದು. ಉದಾರಣೆಗೆ: 20 ಓವರ್​ಗಳ ಪಂದ್ಯವನ್ನು 10 ಓವರ್​ಗೆ ಕಡಿಗೊಳಿಸಿದರೆ ನೀವೂ ಟಿಕೆಟ್​ ಬೆಲೆಯ ಶೇ.50ರಷ್ಟು ಅಂದರೆ 5000 ರೂ. ಇದ್ದರೆ 2500 ರೂ.ಗಳಷ್ಟು ಹಿಂಪಡೆಯಬಹುದಾಗಿದೆ.

ಮೀಸಲು ದಿನ:ಕೆಲವೊಮ್ಮೆ ಹವಾಮಾನ ಕಾರಣದಿಂದಾಗಿ ಪಂದ್ಯವನ್ನು ರದ್ದುಗೊಳಿಸಿ ಮೀಸಲು ದಿನಕ್ಕೆ ನಿಗದಿಪಡೆಸಲಾಗುತ್ತದೆ. ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಅಥವಾ 10 ಓವರ್​ಗಿಂತಲೂ ಕಡಿಮೆ ಪಂದ್ಯ ನಡೆದರೂ ಸಂಪೂರ್ಣವಾಗಿ ಟಿಕೆಟ್​ ಹಣವನ್ನು ಹಿಂಪಡೆಯಬಹುದು. ಇದಷ್ಟೇ ಅಲ್ಲದೆ ಆನ್ಲೈನ್ ಅಲ್ಲಿ ಟಿಕೆಟ್ ಖರೀದಿ ಮಾಡುವಾಗ ನೀವು ಮಾನ್ಯುಯಲ್ ರೀಫಂಡ್ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಇದರ ಉಪಯೋಗ ಏನೆಂದರೆ ಯಾವುದೇ ಕಾರಣಾಂತರದಿಂದಾಗಿ ನಿಮಗೆ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ ಆಗ ಕಾರಣ ತಿಳಿಸಿ ಹಣ ಹಿಂಪಡೆಯಬಹುದಾಗಿದೆ.

ಟಿಕೆಟ್​ ಹಣ ಹಿಂಪಡೆಯುವುದು ಹೇಗೆ?

  • ಆಫ್​ಲೈನ್​ ಮೂಲಕ ಟಿಕೆಟ್​ ಖರೀದಿ ಮಾಡಿದ್ದರೆ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅದನ್ನು ಹಾಗೆಯೇ ಇರಿಸಿ.
  • ನಿಮ್ಮ ಮರುಪಾವತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ WhatsApp ಮೂಲಕ ಅಪ್ಡೇಟ್​ ನೀಡಲಾಗುತ್ತದೆ.
  • ನೀವು ಆಫ್ಲೈನ್ ಮೂಲಕ ಟಿಕೆಟ್ ಖರೀದಿ ಮಾಡಿದ್ದಾರೆ Box office ನಲ್ಲಿ ಟಿಕೆಟ್ ಜೊತೆಗೆ ನಿಮ್ಮ ಗುರುತಿನ ಚೀಟಿ (ಆಧಾರ್ ಕಾರ್ಡ್) ತೋರಿಸಿ ಮರುಪಾವತಿ ಪಡೆಯಬಹುದು.
  • ಆನ್ಲೈನ್ ಅಲ್ಲಿ ಟಿಕೆಟ್ ಪಡೆದಿದ್ದರೆ, 10 ರಿಂದ 20 ದಿನಗಳಲ್ಲಿ ಸ್ವಯಂಚಾಲಿತವಾಗಿ ರೀಫಂಡ್ ಆಗಲಿದೆ.

ವಿಶೇಷ ಸೂಚನೆ: ಎಲ್ಲದಕ್ಕೂ ಮುಖ್ಯವಾಗಿ ನೀವೂ ಯಾವುದೇ ಸೈಟ್​ ಅಥವಾ ಸಂಸ್ಥೆ ಮೂಲಕ ಟಿಕೆಟ್​ ಖರೀದಿಸಲು ಬಯಸಿದ್ದರೆ ಅಲ್ಲಿಯ ಮರುಪಾತಿಯ ನಿಯಮ ಮತ್ತು ಷರತ್ತುಗಳು ಏನೆಂದು ತಿಳಿಯಿರಿ. ಈ ಮೇಲೆ ತಿಳಿಸಿರುವುದು ನಿಮ್ಮ ಮಾಹಿತಿಗಾಗಿ ಮಾತ್ರ. ಏಕೆಂದರೆ ಆಯಾ ಸೈಟ್ ಮತ್ತು ಸಂಸ್ಥೆಗಳ ಮರುಪಾವತಿ ನಿಯಮ ಮತ್ತು ಷರತ್ತುಗಳು ಬದಲಾಗುತ್ತಿರುತ್ತವೆ.

ಇದನ್ನೂ ಓದಿ:ಸೂಪರ್​ ಓವರ್​ನಲ್ಲಿ ಒಂದೇ ಒಂದು ರನ್​ ಬಿಟ್ಟುಕೊಡದೆ ವಿಶ್ವದಾಖಲೆ ಬರೆದ ಬೌಲರ್​ ಯಾರು ಗೊತ್ತಾ?

ABOUT THE AUTHOR

...view details