ಕರ್ನಾಟಕ

karnataka

ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಲು ಭಾರತ ಇನ್ನು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? - World Test Championship - WORLD TEST CHAMPIONSHIP

ಮುಂದಿನ ವರ್ಷ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟ್ರೋಫಿ ಫೈನಲ್​ ಪ್ರವೇಶಿಸಲು ಭಾರತ ಇನ್ನು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಭಾರತ ಕ್ರಿಕೆಟ್​ ತಂಡದ ಆಟಗಾರರು
ಭಾರತ ಕ್ರಿಕೆಟ್​ ತಂಡದ ಆಟಗಾರರು (IANS)

By ETV Bharat Sports Team

Published : Sep 13, 2024, 8:15 PM IST

ಹೈದರಾಬಾದ್​: ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು ಆಡಲು ಸಜ್ಜಾಗಿದೆ. ಇದೇ ತಿಂಗಳು 19 ರಂದು ಮೊದಲ ಪಂದ್ಯ ನಡೆಯಲಿದೆ. ಈಗಾಗಲೇ ಬಿಸಿಸಿಐ ಮೊದಲ ಪಂದ್ಯಕ್ಕಾಗಿ ತಂಡವನ್ನು ಪ್ರಕಟಿಸಿದೆ. ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ಗೆ ತಲುಪಲು ಟೀಮ್ ಇಂಡಿಯಾಗೆ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೇ ಮುಂದಿನ ವರ್ಷ ಜೂನ್​ ತಿಂಗಳಲ್ಲಿ ಇಂಗ್ಲೆಂಡ್​ನ ಲಾರ್ಡ್ಸ್​​ನಲ್ಲಿ ನಡೆಯಲಿರುವ ಫೈನಲ್​ ಪಂದ್ಯಕ್ಕೆ ಅರ್ಹತೆ ಪಡೆಯಲು ಭಾರತ ಇನ್ನೂ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಕುರಿತು ಈ ಸುದ್ಧಿಯಲ್ಲಿ ತಿಳಿಯಿರಿ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಸದ್ಯ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ಈ ತಂಡ ಇದುವರೆಗೆ ಒಟ್ಟು 9 ಪಂದ್ಯಗಳನ್ನು ಆಡಿ 6 ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಇದರ ಶೇಕಡವಾರು ಅಂಕ 68.52 ಆಗಿದೆ. ಮುಂದಿನ ಒಂಬತ್ತು ತಿಂಗಳಲ್ಲಿ ಭಾರತ ತಂಡ ಬಾಂಗ್ಲಾದೇಶ (2 ಟೆಸ್ಟ್), ನ್ಯೂಜಿಲೆಂಡ್ (3 ಟೆಸ್ಟ್) ಮತ್ತು ಆಸ್ಟ್ರೇಲಿಯಾ (5 ಟೆಸ್ಟ್) ವಿರುದ್ಧ ಒಟ್ಟು 10 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಒಂದು ವೇಳೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾದರೆ, ಅದರ ಶೇಕಡವಾರು ಅಂಕ 74.24 ಆಗಲಿದೆ. ಆದರೆ ಫೈನಲ್ ತಲುಪಲು ಇದು ಸಾಕಾಗುವುದಿಲ್ಲ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಲು, ಭಾರತ ತಂಡವು 10 ಟೆಸ್ಟ್‌ಗಳಲ್ಲಿ 6ರಲ್ಲಿ ಗೆಲುವು ಸಾಧಿಸಲೇ ಬೇಕಾಗಿದೆ. ಒಂದು ವೇಳೆ ಆರು ಟೆಸ್ಟ್‌ಗಳನ್ನು ಗೆದ್ದರೆ, ಅದರ ಶೇಕಡವಾರು ಅಂಕ 64.03 ಆಗಲಿದ್ದು ಫೈನಲ್‌ಗೆ ಪ್ರವೇಶ ಪಡೆಯಬಹುದಾಗಿದೆ. ಅಲ್ಲದೇ ಬಾಂಗ್ಲಾದೇಶ, ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್​ ಪಂದ್ಯಗಳಲ್ಲಿ ಭಾರತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕು. ಹೀಗಾದ್ರೆ ಮಾತ್ರ ಫೈನಲ್‌ನ ಬಾಗಿಲು ತೆರೆಯಲಿದೆ. ವಿಶೇಷವೆಂದರೇ ಭಾರತ ತವರಿನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್​ ಸರಣಿ ಆಡಲಿದ್ದು ಸರಣಿ ಗೆಲ್ಲುವ ಹೆಚ್ಚಿನ ಅವಕಾಶ ಹೊಂದಿದೆ. ಹಿಂದಿನೆಲ್ಲ ದಾಖಲೆಗಳನ್ನೋ ನೋಡಿದರೇ ಟೀಂ ಇಂಡಿಯಾ ತವರಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಎದುರಾಳಿ ತಂಡಗಳ ಮೇಲೆ ಪ್ರಾಬಲ್ಯ ಸಾಧಿಸಿದೆ.

ಇದೂವರೆಗೂ ನಡೆದ ಎರಡು ಬಾರಿ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ಗೆ ಪ್ರವೇಶ ಪಡೆದಿದ್ದ ಭಾರತ ಕಪ್​ ಗೆಲ್ಲದೇ ನಿರಾಸೆ ಅನುಭವಿಸಿದೆ. ಮೊದಲು ನ್ಯೂಜಿಲೆಂಡ್ ವಿರುದ್ಧ ಎರಡನೇ ಬಾರಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಬಾರಿಯೂ ಆಸ್ಟ್ರೇಲಿಯಾ ಪ್ರಬಲ ಸ್ಪರ್ಧಿಯಾಗಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೂವರೆಗೂ 12 ಟೆಸ್ಟ್‌ಗಳನ್ನು ಆಡಿರುವ ಕಾಂಗರೂ ಪಡೆ 8 ರಲ್ಲಿ ಗೆದ್ದು, 3ರಲ್ಲಿ ಸೋಲನುಭವಿಸಿದೆ. ಇದರ ಶೇಕಡವಾರು ಅಂಕ 62.50 ಆಗಿದೆ.

ಇದನ್ನೂ ಓದಿ:ಈ ದೇಶದಲ್ಲಿ ಕ್ರಿಕೆಟ್​ ನಿಷೇಧಿಸಲಾಗುತ್ತಿದೆ!: ವಿಶ್ವಕಪ್​​ನಲ್ಲಿ ಸೆಮಿಫೈನಲ್​ ತಲುಪಿದ್ದ ಈ ತಂಡ ಕ್ರಿಕೆಟ್​ನಿಂದಲೇ ದೂರಾಗಲಿದೆಯಾ? - Cricket Ban

ABOUT THE AUTHOR

...view details