ಅಹಮದಾಬಾದ್: ಶುಕ್ರವಾರ ಸಂಜೆ ನಡೆದ ಐಪಿಎಲ್ನ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 35 ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ, ಗುಜರಾತ್ ತನ್ನ ಪ್ಲೇಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಮತ್ತೊಂದೆಡೆ ಗಾಯಕ್ವಾಡ್ ಪಡೆ ಪಂದ್ಯವನ್ನು ಕೈಚೆಲ್ಲುವ ಮೂಲಕ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನೀಡಿದ್ದ 231ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ನಷ್ಟಕ್ಕೆ 196ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟರ್ಗಳಾದ ರಹಾನೆ (1), ರಚಿನ್ (1), ಋತುರಾಜ್ (0) ಪವರ್ಪ್ಲೇನಲ್ಲೇ ನಿರ್ಗಮಿಸಿದ್ದರಿಂದ ತಂಡ ಬಾರಿ ಸಂಕಷ್ಟಕ್ಕೆ ಸಿಲುಕಿತು.
ನಂತರ ಡ್ಯಾರಿಲ್ ಮಿಚೆಲ್ (63) ಮತ್ತು ಮೊಯಿನ್ ಅಲಿ (56) 4ನೇ ವಿಕೆಟ್‌ಗೆ 109ರನ್‌ಗಳ ಜೊತೆಯಾಟವಾಡಿ ತಂಡದ ಸ್ಕೋರ್ ಸುಧಾರಿಸುವಲ್ಲಿ ಸಹಾಯ ಮಾಡಿ ಕ್ರಮವಾಗಿ ಮೋಹಿತ್ ಶರ್ಮಾರ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಬಳಿಕ ಬಂದ ಶಿವಂ ದುಬೆ (21), ಜಡೇಜಾ (18), ಧೋನಿ (26), ಶಾರ್ದುಲ್ ಠಾಕೂರ್ (3) ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಗುಜರಾತ್ ಪರ ಮೋಹಿತ್ ಶರ್ಮಾ ಮೂರು ಹಾಗೂ ರಶೀದ್ ಎರಡು ವಿಕೆಟ್ ಪಡೆದರು.
ಗಿಲ್, ಸುದರ್ಶನ್ ಅಬ್ಬರ:ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಗುಜರಾತ್ ಪರ ಸಾಯಿ ಸುದರ್ಶನ್ (103) ಮತ್ತು ಶುಭಮನ್ ಗಿಲ್ (104) ಚೆನ್ನೈ ಬೌಲರ್ಗಳಿಗೆ ಬೆಂಡೆತ್ತಿದರು. ಪವರ್ ಪ್ಲೇನಲ್ಲೇ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುಜರಾತ್ 58 ರನ್ ಪೇರಿಸಿ ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿತು. ಅದರಂತೆ ಗಿಲ್ ಮತ್ತು ಸೂದರ್ಶನ್ ಮೊದಲ ವಿಕೆಟ್‌ಗೆ 104 ಎಸೆತಗಳಲ್ಲಿ 210 ರನ್‌ಗಳ ಜೊತೆಯಾಟವಾಡಿದರು. ಗಿಲ್ 55 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 104 ರನ್ ಸಿಡಿಸಿದರೇ, ಸಾಯಿ ಸುದರ್ಶನ್ 51 ಎಸೆತಗಳಲ್ಲಿ 103 ರನ್ ಗಳಿಸಿ ಬಾರಿಸಿ ಶತಕ ಪೂರೈಸಿದರು. ತುಷಾರ್ ದೇಶಪಾಂಡೆ 18ನೇ ಓವರ್‌ನಲ್ಲಿ ಈ ಇಬ್ಬರ ಆಟಕ್ಕೆ ಬ್ರೇಕ್ ಹಾಕಿ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಬಂದ ಡೇವಿಡ್ ಮಿಲ್ಲರ್ (16) ಮತ್ತು ಶಾರುಖ್ (2) ತಂಡದ ಸ್ಕೋರ್ 23.ರ ಗಡಿ ತಲುಪಲು ಸಹಾಯಕವಾದರು.
ಇದನ್ನೂ ಓದಿ:ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್: ಗಿಲ್ - ಸುದರ್ಶನ್ ಸ್ಫೋಟಕ ಶತಕದಾಟ , ಸಿಎಸ್ಕೆಗೆ 232 ರನ್‌ಗಳ ಬಿಗ್ ಟಾರ್ಗೆಟ್ - gt titans vs csk match