ಹೈದರಾಬಾದ್:ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟ್ ಆಟಗಾರ, ಕೋಚ್ ಆಗಿದ್ದ ಅಂಶುಮನ್ ಗಾಯಕ್ವಾಡ್ ಜುಲೈ 31 ಬುಧವಾರ (ನಿನ್ನೆ) ನಿಧನರಾಗಿದ್ದಾರೆ. ಬರೋಡಾ ಕ್ರಿಕೆಟ್ ಅಸೋಸಿಯೇಷನ್ (BCA) ಹಿರಿಯ ಅಧಿಕಾರಿ ನಿಧನದ ವಿಚಾರವನ್ನು ಈಟಿವ್ ಭಾರತ್ಗೆ ಖಚಿತ ಪಡಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ ನಿಧನರಾಗಿರುವ ಅಂಶುಮನ್ ಗಾಯಕ್ವಾಡ್ ಅವರ ಅಂತ್ಯಕ್ರಿಯೆಯು ಇಂದು ಬೆಳಗ್ಗೆ ನಡೆಯಲಿದೆ.
71 ವರ್ಷ ತುಂಬಿದ್ದ ಅಂಶುಮಾನ್ ಗಾಯಕ್ವಾಡ್ ದಿವಂಗತ ದತ್ತಾಜಿರಾವ್ ಗಾಯಕ್ವಾಡ್ ಅವರ ಪುತ್ರ. ಭಾರತಕ್ಕಾಗಿ ಅಂಶುಮನ್ 40 ಟೆಸ್ಟ್ಗಳಲ್ಲಿ ಆಡಿದ್ದು, ಒಟ್ಟು 1985 ರನ್ ಗಳಿಸಿದ್ದರು. 15 ODI ಪಂದ್ಯಗಳಲ್ಲಿ 269 ರನ್ ಗಳಿಸಿದ್ದರು. 269 ಪಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 12,136 ರನ್ ಬಾರಿಸಿದ್ದರು. 225 ಅವರ ಅತ್ಯಧಿಕ ಸ್ಕೋರ್.
ಗಾಯಕ್ವಾಡ್ ಭಾರತ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮತ್ತು ನವದೆಹಲಿಯಲ್ಲಿ ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್ನಲ್ಲಿ ಸ್ಟಾರ್ ಸ್ಪಿನ್ನರ್ 10 ವಿಕೆಟ್ ಪಡೆದಾಗ, ಗಾಯಕ್ವಾಡ್ ಡ್ರೆಸ್ಸಿಂಗ್ ರೂಮ್ನಲ್ಲಿದ್ದರು. ಮಾಜಿ ಬ್ಯಾಟರ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಮತ್ತು ಮಾಜಿ ಮಹಿಳಾ ಕ್ರಿಕೆಟಿಗ ಶಾಂತಾ ರಂಗಸ್ವಾಮಿ ಅವರೊಂದಿಗೆ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಣೆ ಮಾಡಿದ್ದರು.