ETV Bharat / sports

'ಕೊಹ್ಲಿಯನ್ನು ನೋಡಿ ಕ್ರಿಕೆಟ್​ ಕಲಿಯಿರಿ': ಬಾಬರ್​ಗೆ ಮಾಜಿ ಪಾಕ್ ಆಟಗಾರನಿಂದ ಛೀಮಾರಿ - Younus Khan - YOUNUS KHAN

ಬಾಬರ್​ ಅಜಾಮ್ ಮಾತು ಕಡಿಮೆ ಮಾಡಿ ಕೆಲಸದ ಮೇಲೆ ಹೆಚ್ಚು ಗಮನ ಹರಿಸಬೇಕು. ಅವರು ವಿರಾಟ್​ ಕೊಹ್ಲಿಯನ್ನು ನೋಡಿ ಕ್ರಿಕೆಟ್​ ಆಡುವುದನ್ನು ಕಲಿತುಕೊಳ್ಳಲಿ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಯೂನಸ್​ ಖಾನ್ ಸಲಹೆ ನೀಡಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಬಾಬರ್​ ಅಜಮ್​
ವಿರಾಟ್​ ಕೊಹ್ಲಿ ಮತ್ತು ಬಾಬರ್​ ಅಜಮ್​ (IANS)
author img

By ETV Bharat Sports Team

Published : Sep 16, 2024, 1:20 PM IST

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್​​ ಖಾನ್​ ತಮ್ಮದೇ ತಂಡದ ಆಟಗಾರ ಬಾಬರ್​ ಅಜಮ್​ ವಿರುದ್ಧ ಕಿಡಿಕಾರಿದ್ದಾರೆ. ವಿರಾಟ್​ ಕೊಹ್ಲಿಯನ್ನು ನೋಡಿ ಕ್ರಿಕೆಟ್​ ಆಡುವುದನ್ನು ಕಲಿತುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೂನಸ್​, "ಬಾಬರ್ ಆಟದ ಮೇಲೆ ಹೆಚ್ಚು ಗಮನ ಹರಿಸಬೇಕೇ ಹೊರತು ನಾಯಕನ ಸ್ಥಾನದ ಮೇಲಲ್ಲ. ಪಾಕಿಸ್ತಾನ ಏಕೆ ಬಾಬರ್​ನನ್ನು ನಾಯಕನನ್ನಾಗಿ ತಂಡಕ್ಕೆ ಆಯ್ಕೆ ಮಾಡಿತ್ತು ಗೊತ್ತೇ?. ಅವರು ಆ ಸಮಯದಲ್ಲಿ ಅತ್ಯುತ್ತಮ ಆಟಗಾರನಾಗಿದ್ದರು. ಹಾಗಾಗಿ ನಾಯಕತ್ವ ಪಟ್ಟ ನೀಡಲಾಯಿತು. ಈ ನಿರ್ಧಾರ ಕೈಗೊಳ್ಳುವಾಗ ನಾನೂ ಅಲ್ಲಿಯೇ ಇದ್ದೆ. ಬಾಬರ್ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ ನಿಜ. ಆದರೆ ಭವಿಷ್ಯದಲ್ಲಿ ಏನನ್ನು ಸಾಧಿಸಲು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ನಾಯಕತ್ವ ಎನ್ನುವುದು ಬಹಳ ಸಣ್ಣ ಜವಾಬ್ದಾರಿ ಅಷ್ಟೇ. ಆದ್ರೆ ತಂಡಕ್ಕೆ ಏನು ಕೊಡುಗೆ ನೀಡಬೇಕು ಮತ್ತು ಹೇಗೆ ಉತ್ತಮ ಪ್ರದರ್ಶನವನ್ನು ಮುಂದುವರಿಸಬೇಕು ಎಂಬುದು ಮುಖ್ಯ" ಎಂದರು.

"ವಯಸ್ಸಾದ ಬಳಿಕ ಮತ್ತೆ ಪಾಕಿಸ್ತಾನದಲ್ಲಿ ಆಡಬೇಕೆಂದರೆ ಅವಕಾಶ ಸಿಗದು. ಅಲ್ಲದೇ ನೀವು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಮಾತಿಗಿಂತ ನಿಮ್ಮ ಕಾರ್ಯಕ್ಷಮತೆಯ ಮೇಲೆ ಹೆಚ್ಚು ಗಮನಹರಿಸಬೇಕು. ಜೊತೆಗೆ ಫಿಟ್‌ನೆಸ್‌ಗಾಗಿಯೂ ಒತ್ತು ನೀಡಬೇಕು ಮತ್ತು ಮೈದಾನದಲ್ಲೂ ಉತ್ತಮ ಪ್ರದರ್ಶನ ತೋರಬೇಕು" ಎಂದು ಹೇಳಿದ್ದಾರೆ

ಮುಂದುವರೆದು, "ನೀವು ವಿರಾಟ್ ಕೊಹ್ಲಿಯನ್ನು ನೋಡಿ ಕಲಿತುಕೊಳ್ಳಿ. ಅವರು ನಾಯಕತ್ವದ ಕಾರಣದಿಂದ ಬ್ಯಾಟಿಂಗ್​ನಲ್ಲಿ ಮಿಂಚಲು ಆಗುತ್ತಿಲ್ಲ ಎಂದು ​ನಾಯಕತ್ವವನ್ನೇ ತೊರೆದರು. ಅದಾದ ಬಳಿಕ ವಿಶ್ವಾದ್ಯಂತ ಉತ್ತಮ ಪ್ರದರ್ಶನ ನೀಡಲಾರಂಭಿಸಿದ್ದಾರೆ. ಪ್ರತಿಯೊಂದು ಪಂದ್ಯದಲ್ಲಿಯೂ ದಾಖಲೆಗಳನ್ನು ಮುರಿಯುತ್ತಿದ್ದಾರೆ. ದೇಶಕ್ಕಾಗಿ ಆಡುವುದು ಮೊದಲ ಆದ್ಯತೆಯಾಗಬೇಕು ಎಂಬುದನ್ನು ಅವರ ಈ ಪ್ರದರ್ಶನ ತೋರಿಸುತ್ತದೆ" ಎಂದು ಯೂನಸ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.