ETV Bharat / state

'ಲ್ಯಾಂಡ್ ಬೀಟ್' ಆ್ಯಪ್‌ನಲ್ಲಿ ಕಂದಾಯ ಸೇರಿ ವಿವಿಧ ಇಲಾಖೆಗಳಲ್ಲಿ ಗುರುತಿಸಿದ ಆಸ್ತಿ ಎಷ್ಟು? - Land Beat App - LAND BEAT APP

ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಕಂದಾಯ ಸೇರಿ ವಿವಿಧ ಇಲಾಖೆಗಳಲ್ಲಿ ಆಸ್ತಿ ಗುರುತಿಸಲಾಗಿದ್ದು, ರಾಜ್ಯ ಸರ್ಕಾರ ಒತ್ತುವರಿ ಕಾರ್ಯ ಕೈಗೊಂಡಿದೆ. ಈ ಮೂಲಕ ಒತ್ತುವರಿದಾರರಿಗೆ ಬಿಸಿ ಮುಟ್ಟಿಸುತ್ತಿದೆ.

PROPERTIES IDENTIFIED  REVENUE DEPARTMENT  LAND BEAT APP DETAILS  BENGALURU
ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಕಂದಾಯ ಸೇರಿ ವಿವಿಧ ಇಲಾಖೆಗಳ ಆಸ್ತಿ ಗುರುತಿಸುವಿಕೆ ಕಾರ್ಯ (ETV Bharat)
author img

By ETV Bharat Karnataka Team

Published : Sep 17, 2024, 7:21 AM IST

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಜಾಗಗಳ ಸಂರಕ್ಷಣೆಗಾಗಿ 'ಲ್ಯಾಂಡ್ ಬೀಟ್ ಆ್ಯಪ್' ವ್ಯವಸ್ಥೆ ತಂದಿರುವ ರಾಜ್ಯ ಸರ್ಕಾರ, ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಕಂದಾಯ ಇಲಾಖೆ ಸೇರಿ ಹಲವು ಇಲಾಖೆಗಳ 1.1 ಕೋಟಿ ಎಕರೆ ವಿಸ್ತೀರ್ಣದ ಜಾಗ ಗುರುತಿಸಿದೆ. ಇದರಲ್ಲಿ 26 ಲಕ್ಷ ಎಕರೆ ಕಂದಾಯ ಇಲಾಖೆಗೆ ಸೇರಿದೆ‌. ಇದೀಗ ಈ ಜಮೀನನ್ನು ರಕ್ಷಣೆ ಮಾಡಲು ಇಲಾಖೆ ಮುಂದಾಗಿದ್ದು, ಒತ್ತುವರಿದಾರರಿಗೆ ನಡುಕ ಪ್ರಾರಂಭವಾಗಿದೆ.

ಕಂದಾಯ ಇಲಾಖೆಯ ಜಮೀನಿನಲ್ಲಿ 13.7 ಲಕ್ಷ ಎಕರೆ ಒತ್ತುವರಿಯಾಗಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ಗುರುತಿಸಿದ್ದಾರೆ. ಇದರಲ್ಲಿ ಅರ್ಜಿ ನಮೂನೆ 50, 53 ಮತ್ತು 57ರಡಿ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳಿಗೆ ಸಂಬಂಧಿಸಿದ ಆಸ್ತಿಯಾಗಿರುವುದು ಗೊತ್ತಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ‌ ಮಹಜರು ನಡೆಸಿ, ಒತ್ತುವರಿಯಾಗಿದ್ದರೆ ಅವುಗಳ ವಿವರಗಳನ್ನು ಆ್ಯಪ್​ನಲ್ಲಿ ಹಂಚಿಕೊಳ್ಳಲಿದ್ದಾರೆ. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಲಿದ್ದಾರೆ. ಸದ್ಯ ರಾಜ್ಯಾದ್ಯಂತ 5.90 ಲಕ್ಷ ಸ್ಥಳಗಳನ್ನು ಮಹಜರು ಮಾಡಲಾಗಿದೆ. ಸರ್ಕಾರಿ ಜಾಗಗಳ‌ ಮಹಜರು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಲಿದೆ.

ಸೆಪ್ಟಂಬರ್ 2ರಿಂದಲೇ ಒತ್ತುವರಿ ತೆರವು ಆರಂಭವಾಗಿದ್ದು, ಅಸಲಿ ಬಗರ್‌ಹುಕುಂ ಸಾಗುವಳಿದಾರರು, ಒತ್ತುವರಿ ಪ್ರಮಾಣವೆಷ್ಟು ಎಂಬುದು ಪತ್ತೆ ಹಚ್ಚಿ ಪೋಡಿ ಮಾಡಿಕೊಡುವ ಕಾರ್ಯಕ್ಕೂ ಚಾಲನೆ ಸಿಕ್ಕಿದೆ. ಇದಲ್ಲದೆ, ಜಿಯೋ ಫೆನ್ಸಿಂಗ್ ಮೂಲಕ ಆಸ್ತಿಗಳ ಸಂರಕ್ಷಣೆ ಜೊತೆಗೆ ಒತ್ತುವರಿ ತೆರವು ಅಪ್‌ಡೇಟ್‌ಗೆ ಡ್ಯಾಶ್‌ಬೋರ್ಡ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸುವ ಚಿಂತನೆಯೂ ಇದೆ. ಹಾಗೆಯೇ ಪೋಡಿ ದುರಸ್ತಿಯು ಅಭಿಯಾನ ಮಾದರಿಯಲ್ಲಿ ಆರಂಭವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ-ಸಕ್ರಮದಡಿ ಜಮೀನು ಮಂಜೂರು ಮಾಡಿಕೊಂಡ 10 ಲಕ್ಷ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕಂದಾಯ ಇಲಾಖೆ ಮುಂದಾಗಿದ್ದು, ಇದರಿಂದ ಸರ್ಕಾರದ ಆಸ್ತಿಯ ಸಂರಕ್ಷಣೆ ಕಾರ್ಯ ಅನುಷ್ಠಾನವಾಗಲಿದೆ. ನಮೂನೆ 1-5 ಪೋಡಿ ದುರಸ್ತಿಗೆ ಡಿಜಿಟಲ್ ಆ್ಯಪ್ ಬಳಸಿಕೊಳ್ಳಲಾಗುತ್ತಿದೆ. ಡಿಜಿಟಲ್ ಕಡತಗಳು ಸ್ವಯಂ ತಯಾರಾಗಲಿದ್ದು, ರೈತರ ಅರ್ಜಿಗೆ ಕಾಯುವ ಅಗತ್ಯ ಇಲ್ಲ.

ಡಿಜಿಟಲ್ ಕಡತ 1-5 ನಮೂನೆ ತಯಾರಾದ ಬಳಿಕ ಮುಂದೆ 6-10 ಮಾಡಿ ಅಂತಹವರಿಗೆ ಸಮೀಕ್ಷೆಯೊಂದಿಗೆ ದುರಸ್ತಿ ಮಾಡಿದ ನಂತರ ಹೊಸ ಸರ್ವೇ ನಂಬರ್ ಪಹಣಿಯಲ್ಲಿ ದಾಖಲೆ ಮಾಡಿ ಕೊಳ್ಳಲಾಗುತ್ತದೆ. ಪ್ರಾಯೋಗಿಕವಾಗಿ 1-5 ನಮೂನೆ ಡಿಜಿಟಲ್ ಕಡತ ತಯಾರಿಯನ್ನು ಹಾಸನ ಜಿಲ್ಲೆಯಲ್ಲಿ ಜಾರಿಗೆ ತಂದು ಯಶಸ್ವಿಗೊಳಿಸಿದ್ದು, ಪೋಡಿ ದುರಸ್ತಿ ಹಾಗೂ ಡಿಜಿಟಲ್ ಕಡತ ತಯಾರಿಯು ರಾಜ್ಯಾದ್ಯಂತ ವಿಸ್ತರಣೆಯಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭೂ ಕಬಳಿಕೆದಾರರಿಗೆ ಕಡಿವಾಣ: ಕಂದಾಯ ಇಲಾಖೆಯ ಆಸ್ತಿಯನ್ನು ಒತ್ತುವರಿ ಮಾಡಿರುವ ಭೂ ಕಬಳಿಕೆದಾರರ ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಹಳ್ಳಿ ಹಳ್ಳಿಯಲ್ಲಿ ಸರ್ಕಾರದ ಯೋಜನೆಗಳನ್ನು ಕೈಗೊಳ್ಳಲು ಜಮೀನು ಲಭ್ಯವಾಗುತ್ತದೆ. ಆಸ್ಪತ್ರೆ, ಶಾಲಾ, ಕಾಲೇಜು ಇನ್ನಿತರ ಯೋಜನೆಗಳಿಗೆ ಜಮೀನು ಬಳಕೆ ಆಗಲಿದೆ. ಅಲ್ಲದೆ, ಒತ್ತುವರಿ ಮಾಡಿದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಅಮಾಯಕರಿಗೆ ಮಾರಾಟ ಮಾಡುವ ಭೂಗಳ್ಳರಿಗೂ ಕಡಿವಾಣ ಹಾಕಿದಂತೆ ಆಗುತ್ತದೆ.

"ಮೊದಲ ಬಾರಿಗೆ ಸರ್ಕಾರಿ ಜಾಗಗಳನ್ನು ರಕ್ಷಿಸಲು ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈಗಾಗಲೇ 14 ಲಕ್ಷ ಸರ್ಕಾರಿ ಜಾಗವನ್ನು ಆ್ಯಪ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ" ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರ ಜಾರಿ ಮಾಡಿರುವ 'ಲ್ಯಾಂಡ್ ಬೀಟ್ ಯೋಜನೆ'ಯ ಅನುಕೂಲಗಳೇನು? - Land Beat Scheme

ETV Bharat Logo

Copyright © 2025 Ushodaya Enterprises Pvt. Ltd., All Rights Reserved.