ETV Bharat / sports

ಏಷ್ಯನ್​ ಹಾಕಿ ಚಾಂಪಿಯನ್ಸ್​​ ಟ್ರೋಫಿ: ಕೊರಿಯಾ ವಿರುದ್ಧ ಭಾರತಕ್ಕೆ ಗೆಲುವು, ನಾಳೆ ಚೀನಾ ಎದುರು ಫೈನಲ್​ - ASIAN CHAMPIONS TROPHY - ASIAN CHAMPIONS TROPHY

ಹಾಲಿ ಚಾಂಪಿಯನ್​ ಭಾರತದ ಹಾಕಿ ತಂಡ ದಕ್ಷಿಣ ಕೊರಿಯಾವನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಫೈನಲ್​ ತಲುಪಿದೆ. ಚೀನಾ ಎದುರು ಸೆಪ್ಟೆಂಬರ್​ 17 ರಂದು (ಮಂಗಳವಾರ) ಮಧ್ಯಾಹ್ನ 3.30 ಕ್ಕೆ ಫೈನಲ್​ ನಡೆಯಲಿದೆ.

ಏಷ್ಯನ್​ ಹಾಕಿ ಚಾಂಪಿಯನ್ಸ್​​ ಟ್ರೋಫಿ
ಏಷ್ಯನ್​ ಹಾಕಿ ಚಾಂಪಿಯನ್ಸ್​​ ಟ್ರೋಫಿ (IANS)
author img

By ETV Bharat Karnataka Team

Published : Sep 16, 2024, 7:44 PM IST

ಮೋಕಿ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್​​ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳಿಂದ ಜಯಿಸುವ ಮೂಲಕ ಹಾಲಿ ಚಾಂಪಿಯನ್​ ಭಾರತ ದಾಖಲೆಯ ಐದನೇ ಬಾರಿಗೆ ಫೈನಲ್​ ತಲುಪಿತು.

ರೋಚಕ ಪಂದ್ಯದಲ್ಲಿ ವಿಶ್ವದ 14ನೇ ಶ್ರೇಯಾಂಕದ ಭಾರತ ತಂಡ, ದಕ್ಷಿಣ ಕೊರಿಯಾವನ್ನು ಯಾವುದೇ ಹಂತದಲ್ಲಿ ಮುನ್ನುಗ್ಗಲು ಬಿಡಲಿಲ್ಲ. ಟೀಂ ಇಂಡಿಯಾ ಪರ ಉತ್ತಮ್ ಸಿಂಗ್ (13ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (19, 45ನೇ ನಿಮಿಷ), ಜರ್ಮನ್‌ಪ್ರೀತ್ ಸಿಂಗ್ (32 ನೇ ನಿಮಿಷ) ಗೋಲು ಗಳಿಸಿದರು. ಕೊರಿಯಾ ಪರ ಯಾಂಗ್ ಜಿಹುನ್ (33ನೇ ನಿಮಿಷ) ಏಕೈಕ ಗೋಲು ಮಾತ್ರ ಗಳಿಸಿದರು.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ ಭಾರತವು, ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಕೊರಿಯಾದ ಮೇಲೆ ಪದೆ ಪದೇ ದಂಡೆತ್ತಿ ಹೋಗಿ, ಗೋಲು ಗಳಿಸಲು ಯತ್ನಿಸಿತು. ಎದುರಾಗಿ, ಕೊರಿಯಾ ಕೂಡ ರಕ್ಷಣಾ ವಿಭಾಗದಲ್ಲಿ ಉತ್ತಮ ಆಟವಾಡಿತು. ಪ್ರಥಮಾರ್ಧದ 13ನೇ ನಿಮಿಷದಲ್ಲಿ ಭಾರತದ ಸ್ಟಾರ್ ಆಟಗಾರ ಉತ್ತಮ್ ಸಿಂಗ್ ಕೊರಿಯಾದ ಕೋಟೆ ಭೇದಿಸಿ ಅದ್ಭುತವಾದ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದರು.

6 ನಿಮಿಷ ಕಳೆಯುಷ್ಟರದಲ್ಲಿ (19ನೇ ನಿಮಿಷ) ಕೊರಿಯಾ ಮಾಡಿದ ಎಡವಟ್ಟಿನಿಂದ ಭಾರತಕ್ಕೆ ಪೆನಾಲ್ಟಿ ಕಾರ್ನರ್​ ಅವಕಾಶ ಸಿಕ್ಕಿತು. ತಂಡದ ನಾಯಕ, ಪೆನಾಲ್ಟಿ ಕಾರ್ನರ್​ ತಜ್ಞ ಹರ್ಮನ್‌ಪ್ರೀತ್ ಸಿಂಗ್ ಚೆಂಡನ್ನು ಗೋಲ್ ಪೋಸ್ಟ್‌ಗೆ ತಳ್ಳುವ ಮೂಲಕ ಅಂಕವನ್ನು 2 ಕ್ಕೆ ಹಿಗ್ಗಿಸಿದರು. ಈ ಅವಧಿಯಲ್ಲಿ ಕೊರಿಯಾ ತಂಡ ಕೂಡ ಉತ್ತಮ ಆಟವಾಡಿದರೂ, ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಯಿತು. ವಿರಾಮದ ವೇಳೆಗೆ ಟೀಂ ಇಂಡಿಯಾ 2-0 ಗೋಲುಗಳಿಂದ ಮುನ್ನಡೆಯಲ್ಲಿತ್ತು.

ಹೆಚ್ಚಿದ ರೋಚಕತೆ, ಭಾರತಕ್ಕೇ ಗೆಲುವು: ದ್ವಿತೀಯಾರ್ಧದಲ್ಲಿ ಇತ್ತಂಡಗಳು ಭರ್ಜರಿ ಆಟಕ್ಕಿಳಿದವು. ಗೋಲು ಬಾರಿಸಲು ನಡೆದ ಯತ್ನದಲ್ಲಿ ಭಾರತ ತಂಡದ ಸ್ಟಾರ್ ಪ್ಲೇಯರ್​​ ಜರ್ಮನ್‌ಪ್ರೀತ್ ಸಿಂಗ್ 32ನೇ ನಿಮಿಷದಲ್ಲಿ ಅದ್ಭುತ ಫೀಲ್ಡ್ ಗೋಲು ಗಳಿಸಿ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಆದರೆ, ಮರು ನಿಮಿಷದಲ್ಲಿ ಕೊರಿಯಾಗೆ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಯಾಂಗ್ ಜಿಹುನ್ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಗೋಲು ಬಾರಿಸಿದರು. ಇದರಿಂದ ಅಂತರ 3-1 ಕ್ಕೆ ತಗ್ಗಿತು. ಇದೇ ವೇಳೆ 45 ನೇ ನಿಮಿಷದಲ್ಲಿ ಕೊರಿಯಾದ ಗೋಲ್‌ಕೀಪರ್‌ಗೆ ಹಳದಿ ಕಾರ್ಡ್ ನೀಡಲಾಯಿತು. ಈ ಮೂಲಕ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್ ಸಿಕ್ಕಿತು. ತಂಡದ 'ಸರಪಂಚ್​' ಎಂದೇ ಖ್ಯಾತಿಯಾದ ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಗೋಲು ಬಾರಿಸಿದರು. ಕೊನೆಯಲ್ಲಿ ಭಾರತ 4-1 ರಿಂದ ಪಂದ್ಯ ಗೆದ್ದು ಐದನೇ ಬಾರಿಗೆ ಫೈನಲ್​ ತಲುಪಿತು.

ಚೀನಾ ವಿರುದ್ಧ ಪ್ರಶಸ್ತಿ ಫೈಟ್​: 4 ಬಾರಿಯ ಏಷ್ಯನ್ ಹಾಕಿ ಟ್ರೋಫಿಯ ಚಾಂಪಿಯನ್​ ಆಗಿರುವ ಭಾರತ ಐದನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಆತಿಥೇಯ ಚೀನಾ ನೆಲದಲ್ಲಿ ಅದೇ ತಂಡವನ್ನು ಎದುರಿಸಲಿದೆ. ಇದಕ್ಕೂ ಮೊದಲು ನಡೆದ ಪ್ರಥಮ ಸೆಮಿಫೈನಲ್​​ನಲ್ಲಿ ಆತಿಥೇಯ ಚೀನಾ ಪಾಕಿಸ್ತಾನವನ್ನು ಬಗ್ಗುಬಡಿಯುವ ಮೂಲಕ ಇದೇ ಮೊದಲ ಬಾರಿಗೆ ಫೈನಲ್​ ತಲುಪಿದೆ. 1-1 ರಲ್ಲಿ ಸಮಬಲಗೊಂಡಿದ್ದ ಪಂದ್ಯದಲ್ಲಿ ಶೂಟೌಟ್​​ ಮೂಲಕ ಗೆದ್ದ ಚೀನಾ, ಬಲಿಷ್ಠ ಭಾರತದ ವಿರುದ್ಧ ಮೊದಲ ಪ್ರಶಸ್ತಿ ಎತ್ತಿಹಿಡಿಯುವ ಕನಸು ಕಂಡಿದೆ.

ಇದನ್ನೂ ಓದಿ: ಅಬ್ಬಾ.. ವಿರಾಟ್​ ಕೊಹ್ಲಿ ಹೊಡೆದ ಪವರ್​ಫುಲ್​ ಶಾಟ್​ಗೆ ಪುಡಿಯಾದ ಚೆಪಾಕ್​ ಮೈದಾನದ ಗೋಡೆ - Virat Kohli Powefull Shot

ETV Bharat Logo

Copyright © 2025 Ushodaya Enterprises Pvt. Ltd., All Rights Reserved.