ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವಾಗ ತಮಗಾದ ಪ್ಯಾರಾನಾರ್ಮಲ್ ಆ್ಯಕ್ಟಿವಿಟಿ ಅನುಭವವನ್ನು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡರು.
ನಮ್ಮ ತಂಡ ದಕ್ಷಿಣ ಆಫ್ರಿಕಾದ ಸನ್ಸಿಟಿಯಲ್ಲಿ ವಾಸ್ತವ್ಯ ಹೂಡಿತ್ತು. ಮಧ್ಯರಾತ್ರಿ ನಾನು ತಂಗಿದ್ದ ಕೋಣೆಯಲ್ಲಿ ವಿಚಿತ್ರ ಮತ್ತು ವಿಲಕ್ಷಣವಾಗಿ ಚಲಿಸುತ್ತಿರುವ ಏನನ್ನೋ ಗಮನಿಸಿದೆ ಎಂದು ಅವರು ತಿಳಿಸಿದರು.
ಕ್ರಿಕ್‌ಬಜ್ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ತಿಕ್, "ಸನ್ ಸಿಟಿಯ ನನ್ನ ಕೋಣೆಯಲ್ಲಿ ತಂಗಿದ್ದೆ. ಮಧ್ಯರಾತ್ರಿ ಸುಮಾರಿಗೆ ವಿಚಿತ್ರದ ಅನುಭವವಾಯಿತು. ವಿಲಕ್ಷಣ ಆಕಾರವೊಂದು ನನ್ನ ಕೋಣೆಯಲ್ಲಿ ಚಲಿಸುತ್ತಿರುವುದನ್ನು ಕಣ್ಣಾರೆ ಕಂಡೆ. ಅದ್ರೆ ಅದೇನು ಎಂಬುದು ಇಂದಿಗೂ ನನ್ನ ಮನದಲ್ಲಿ ಹಾಗೆಯೇ ಉಳಿದಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ಅಂಥದ್ದೊಂದು ಭಯಾನಕ ಅನುಭವಾಗಿತ್ತು" ಎಂದರು.