ಕರ್ನಾಟಕ

karnataka

ETV Bharat / sports

ಜಾಮ್​ನಗರ ರಾಜಮನೆತನದ ಮುಂದಿನ ವಾರಸುದಾರನಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನ ಹೆಸರು ಘೋಷಣೆ! - AJAY JADEJA

ಜಾಮ್​ನಗರ ರಾಜಮನೆತನಕ್ಕೆ ವಾರುಸುದಾರನಾಗಿ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್​ ಹೆಸರು ಘೋಷಣೆ ಮಾಡಲಾಗಿದೆ.

ಅಜಯ್​ ಜಡೇಜಾ
ಅಜಯ್​ ಜಡೇಜಾ (IANS AND ANI)

By ETV Bharat Sports Team

Published : Oct 12, 2024, 2:06 PM IST

ನವದೆಹಲಿ: ಗುಜರಾತ್​ ರಾಜ್ಯದ ಜಾಮ್‌ನಗರ ರಾಜಮನೆತನವು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ತಮ್ಮ ಮುಂದಿನ ವಾರಸುದಾರರನ್ನಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಮಹಾರಾಜ ಜಾಮ್ ಸಾಹೇಬ್ ಶತ್ರುಸಲ್ಯಸಿಂಹಜಿ ದಿಗ್ವಿಜಯ್ ಸಿನ್ಹಜಿ ಜಡೇಜಾ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಅಜಯ್ ಜಡೇಜಾ ತಮ್ಮ ರಾಜಮನೆತನದ ಮುಂದಿನ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಮಹಾರಾಜ ಘೋಷಣೆ ಮಾಡಿದ್ದಾರೆ.

ಪಾಂಡವರು ತಮ್ಮ 14 ವರ್ಷಗಳ ವನವಾಸ ಮತ್ತು ಅಜ್ಞಾತ ಜೀವನವನ್ನು ಯಶಸ್ವಿಯಾಗಿ ಪೂರೈಸಿದ ದಿನ ದಸರಾ. ಹಾಗಾಗಿ ಇಂದು ನಾವು ಅಜಯ್ ಜಡೇಜಾ ಅವರನ್ನು ರಾಜಮನೆತನದ ಉತ್ತರಾಧಿಕಾರಿ ಮತ್ತು ನವನಗರದ ಮುಂದಿನ ಜಾಮ್ ಸಾಹೇಬ್ ಎಂದು ಘೋಷಿಸುತ್ತೇವೆ. ಇದು ಜಾಮ್‌ನಗರದ ಜನರಿಗೆ ದೊಡ್ಡ ವರವಾಗಿದೆ ಎಂದು ನಾನು ನಂಬಿದ್ದೇನೆ ಧನ್ಯವಾದಗಳು' ಎಂದು ಮಹಾರಾಜ ಶತ್ರುಸಲ್ಯಸಿಂಹಜಿ ಹೇಳಿದ್ದಾರೆ. ಹಿಂದಿನ ನವನಗರ ಸಂಸ್ಥೆಯನ್ನು ಈಗ ಜಾಮ್‌ನಗರ ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯದ ನಂತರ ದೇಶದಲ್ಲಿ ರಾಜಪ್ರಭುತ್ವವನ್ನು ರದ್ದುಪಡಿಸಲಾಯಿತು ಮತ್ತು ಸಂಸ್ಥೆಗಳನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು. ಆದರೆ, ಗುಜರಾತ್‌ನ ಈ ಭಾಗದಲ್ಲಿ ರಾಜಮನೆತನದ ಆಡಳಿತವು ಇನ್ನೂ ಮುಂದುವರೆದಿದೆ.

ಅಜಯ್​ ಜಡೇಜಾ (Getty Images)

ಜಾಮ್‌ನಗರದ ರಾಜಮನೆತನಕ್ಕೆ ಸೇರಿದ ಅಜಯ್ ಜಡೇಜಾ ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ಮೈದಾನಕ್ಕಿಳಿದರು. ಕ್ರಿಕೆಟ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 1992-2000ರವರೆಗೆ 15 ಟೆಸ್ಟ್ ಪಂದ್ಯಗಳು ಮತ್ತು 196 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ, ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಮುಖವಾದ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿ ಪಂದ್ಯಗಳಿಗೆ ಅವರ ಕುಟುಂಬದ ಸದಸ್ಯರಾದ ಕೆ.ಎಸ್.ರಣಜಿತ್​ ಸಿನ್ಹ ಮತ್ತು ಕೆ.ಎಸ್.ದುಲೀಪ್‌ ಸಿನ್ಹ ಅವರ ಹೆಸರನ್ನು ಇಡಲಾಗಿದೆ.

ಶತ್ರುಶಾಲಿಸಿಂಗ್ಜಿ ಜಡೇಜಾ ಮತ್ತು ಅಜಯ್ ಜಡೇಜಾ (Getty Images)

ಭಾರತ ಆತಿಥ್ಯ ವಹಿಸಿದ್ದ 1996ರ ವಿಶ್ವಕಪ್ ಟೂರ್ನಿಯಲ್ಲಿ ಅಜಯ್ ಜಡೇಜಾ ನಾಯಕತ್ವದ ಭಾರತ ತಂಡ ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕ್ವಾರ್ಟರ್ - ಫೈನಲ್ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿತು. ಆ ಪಂದ್ಯದಲ್ಲಿ ಅಜಯ್ ಜಡೇಜಾ 25 ಎಸೆತಗಳಲ್ಲಿ 45ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇಂದಿಗೂ ಆ ಇನ್ನಿಂಗ್ಸ್ ಕ್ರೀಡಾಲೋಕ ಮರೆಯಲು ಸಾಧ್ಯವಿಲ್ಲ.

ಇದನ್ನೂ ಓದಿ:'ಕೊಹ್ಲಿ ಬ್ಯಾಟ್ ನನ್ನ ಇಮೇಜ್ ಡ್ಯಾಮೇಜ್ ಮಾಡಿತು, ಇನ್ಮುಂದೆ ಯಾರಿಗೂ ಬ್ಯಾಟ್ ಕೇಳಲ್ಲ': ರಿಂಕು ಹೀಗೆ ಹೇಳಿದ್ದು ಏಕೆ?​

ABOUT THE AUTHOR

...view details