ಕರ್ನಾಟಕ

karnataka

ETV Bharat / sports

ಅಖಿಲ ಭಾರತ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಗಳ ಕ್ರೀಡಾಕೂಟ: ರಾಜ್ಯ ತಂಡಕ್ಕೆ ಎಂಟು ಪದಕ - ಬೆಂಗಳೂರು

ಅಹಮದಾಬಾದ್‌ನಲ್ಲಿ ನಡೆದಿದ್ದ ರಾಷ್ಟ್ರ ಮಟ್ಟದ ಅಖಿಲ ಭಾರತ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಗಳ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಒಟ್ಟು 8 ಪದಕಗಳನ್ನು ಬಾಚಿಕೊಂಡಿದೆ.

bengaluru news
ಕರ್ನಾಟಕ ತಂಡ

By ETV Bharat Karnataka Team

Published : Feb 6, 2024, 2:29 PM IST

ಬೆಂಗಳೂರು:ಗುಜರಾತ್​ನ ಅಹಮದಾಬಾದ್‌ನಲ್ಲಿ ಫೆ.1ರಿಂದ 4ರ ವರೆಗೆ ನಡೆದ ರಾಷ್ಟ್ರ ಮಟ್ಟದ ಅಖಿಲ ಭಾರತ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಗಳ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ 5 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸಹಿತ 8 ಪದಕಗಳ ಸಾಧನೆ ಮಾಡಿದೆ. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗರಾಜ ಬಿ.ಹೆಚ್​ ನೇತೃತ್ವದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ತಂಡ ಟೂರ್ನಿಯಲ್ಲಿ ಭಾಗವಹಿಸಿತ್ತು.

ಚಿನ್ನದ ಪದಕ‌ ವಿಜೇತರು:

  • ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಕಬ್ಬಡ್ಡಿ ತಂಡ
  • ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗ - ದೀಪಕ್ ಪಟಗಾರ್,
  • ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗ - ದೀಪಕ್ ಪಟಗಾರ್, ಹಾಗೂ ಆದರ್ಶ್ ಎಮ್.ವಿ.
  • 100 ಮೀ ಓಟದಲ್ಲಿ - ಅಶ್ವಿನ್ ಸನೀಲ್,
  • ಹೈ ಜಂಪ್ - ಗೋಪಾಲ್ ಗೌಡ

ಬೆಳ್ಳಿ ಪದಕ ವಿಜೇತರು

  • 1500 ಮೀ ಓಟ (35 ವರ್ಷಕ್ಕಿಂತ ಹೆಚ್ಚು ವಯೋಮಿತಿ) - ದುಂಡಪ್ಪ ಅಪ್ಪಾಸಾಹೇಬ ಬಡೆಕರ್.

ಕಂಚಿನ ಪದಕ ವಿಜೇತರು

  • 5000 ಮೀ ಓಟ (35 ವರ್ಷಕ್ಕಿಂತ ಹೆಚ್ಚು ವಯೋಮಿತಿ) - ದುಂಡಪ್ಪ ಅಪ್ಪಾಸಾಹೇಬ ಬಡೆಕರ್
  • ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ 4x100 ರಿಲೇ ತಂಡ

ಇನ್ನು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳ ಸಾಧನೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ಮೂರನೇ ಟೆಸ್ಟ್​ಗೆ ವಿರಾಟ್​ ಬರುವರೇ?: ದ್ರಾವಿಡ್​ ಹೀಗೇಕೆ ಹೇಳಿದ್ರು!?

ABOUT THE AUTHOR

...view details