ಬೆಂಗಳೂರು: ಕೀನ್ಯಾ ಪುರುಷರ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಕನ್ನಡಿಗ, ಭಾರತ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ನೇಮಕಗೊಂಡಿದ್ದಾರೆ. ಮಂಗಳವಾರ (ಆಗಸ್ಟ್ 13) ನೈರೋಬಿಯ ಸಿಖ್ ಯೂನಿಯನ್ ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ದೊಡ್ಡ ಗಣೇಶ್ ಅವರನ್ನು ತಮ್ಮ ಕೋಚ್ ಆಗಿರುವುದನ್ನು ಕ್ರಿಕೆಟ್ ಕೀನ್ಯಾ ಅಧಿಕೃತಗೊಳಿಸಿದೆ.
ಕೀನ್ಯಾ ತಂಡದ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡಿರುವುದರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಂತಸ ಹಂಚಿಕೊಂಡಿರುವ ದೊಡ್ಡ ಗಣೇಶ್, 'ಕೀನ್ಯಾವನ್ನು ಮತ್ತೆ ವಿಶ್ವಕಪ್ ಅರ್ಹತೆಗೆ ಕೊಂಡೊಯ್ಯುವುದು ನನ್ನ ಮುಂದಿರುವ ಗುರಿ. 1996,1999, 2003 ಮತ್ತು 2011ರಲ್ಲಿ ಕೀನ್ಯಾ ವಿಶ್ವಕಪ್‌ನಲ್ಲಿ ಆಡುವುದನ್ನು ನೋಡಿದ್ದೇನೆ. ನಂತರದ 10 ವರ್ಷಗಳ ಅವಧಿಯಲ್ಲಿ ಏನಾಯಿತು ಎಂದು ನನಗೆ ಗೊತ್ತಿಲ್ಲ. ಆದರೆ ಈಗ ಕೀನ್ಯಾ ತಂಡ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ನೆರವಾಗುವುದು ನನ್ನ ಮುಂದಿನ ಗುರಿ' ಎಂದು ತಿಳಿಸಿದ್ದಾರೆ.