ಕರ್ನಾಟಕ

karnataka

ETV Bharat / sports

ಯುಟ್ಯೂಬ್​ನಲ್ಲಿ ದಾಖಲೆ ಸೃಷ್ಟಿಸಿದ ರೊನಾಲ್ಡೊ; ಫುಟ್ಬಾಲ್​ ದಿಗ್ಗಜನ ಚಾನಲ್​ಗೆ ಗಂಟೆಯೊಳಗೆ ಲಕ್ಷಾಂತರ ಚಂದಾದಾರರು - CRISTIANO RONALDO YOUTUBE

39 ವರ್ಷದ ಪೋರ್ಚುಗಲ್​ ಮೂಲದ ಪುಟ್ಬಾಲ್​ ತಾರೆಯ ಮೊದಲ ವಿಡಿಯೋವನ್ನು 13 ಗಂಟೆಗಳಲ್ಲಿ 7.95 ಮಿಲಿಯನ್​ ಜನರು ವೀಕ್ಷಿಸಿದ್ದಾರೆ.

cristiano-ronaldo-joins-youtube-gets-1-million-subscribers-in-90-mins-channel-name-ur-cristiano
ಕ್ರಿಸ್ಟಿಯನೋ ರೊನಾಲ್ಡೊ (ಈಟಿವಿ ಭಾರತ್​ (ಸಂಗ್ರಹ ಚಿತ್ರ))

By ETV Bharat Sports Team

Published : Aug 22, 2024, 1:49 PM IST

ಹೈದರಾಬಾದ್​:ಪೋರ್ಚುಗಲ್​ನ ಫುಟ್ಬಾಲ್​ ದಿಗ್ಗಜ ಕ್ರಿಸ್ಟಿಯನೋ ರೊನಾಲ್ಡೊ ಬುಧವಾರ ತಮ್ಮದೇ ಆದ ಹೊಸ ಯುಟ್ಯೂಬ್​ ಚಾನಲ್​ವೊಂದನ್ನು ಆರಂಭಿಸಿದ್ದಾರೆ. ಆಗಸ್ಟ್​ 21ರಂದು ಆರಂಭವಾದ ಈ ಯೂಟ್ಯೂಬ್​ ಚಾನಲ್​ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಚಾನಲ್​ ಆರಂಭವಾದ 90 ನಿಮಿಷದಲ್ಲೇ ರೋನಾಲ್ಡೊ 1 ಮಿಲಿಯನ್​ ಸಬ್​ಸ್ಕ್ರೈಬರ್​ಗಳಾಗಿದ್ದಾರೆ. ಈ ಚಾನಲ್​ ಮೂಲಕ ರೊನಾಲ್ಡೊ ಪುಟ್ಬಾಲ್​ ಆತದ ತೆರೆ ಹಿಂದಿನ ಕಥೆಗಳು ಸೇರಿದಂತೆ ಅವರ ಜೀವನದ ಸ್ವಾರಸ್ಯಕರ ವಿಚಾರಗಳನ್ನು ಅಭಿಮಾನಿಗಳ ಎದುರು ಅನಾವರಣಗೊಳಿಸಲಿದ್ದಾರೆ.

ಇತಿಹಾಸ ಸೃಷ್ಟಿಸಿದ ಫುಟ್ಬಾಲ್​ ದಿಗ್ಗಜ: ಇನ್ನು, ಚಾನಲ್​ ಆರಂಭವಾಗಿ ದಿನ ಕಳೆಯುವುದರೊಳಗೆ 11.5 ಮಿಲಿಯನ್​ ಸಬ್​ಸ್ಕ್ರೈಬರ್​ಗಳಾಗಿದ್ದಾರೆ. ಈ ಮೊದಲು ಫುಟ್ಬಾಲ್​ ಸ್ಟಾರ್​ ತಮ್ಮದೇ ಹೊಸ ಯುಟ್ಯೂಬ್​ ಚಾನಲ್​ವೊಂದನ್ನು ಶೀಘ್ರದಲ್ಲಿ ಪ್ರಾರಂಭಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದರು. ಈ ಚಾನಲ್​ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕಾತುರ ವ್ಯಕ್ತವಾಗಿತ್ತು. ಇನ್ನು, ರೊನಾಲ್ಡೊಗೆ ಎಕ್ಸ್​ನಲ್ಲಿ 112.6 ಮಿಲಿಯನ್​ ಬೆಂಬಲಿಗರಿದ್ದರೆ, ಫೇಸ್​ಬುಕ್​ನಲ್ಲಿ 170 ಮಿಲಿಯನ್​ ಮತ್ತು ಇನ್ಸ್​ಟಾಗ್ರಾಂನಲ್ಲಿ 636 ಮಿಲಿಯನ್​ ಬೆಂಬಲಿಗರಿದ್ದಾರೆ.

ದಾಖಲೆ ವೀಕ್ಷಣೆ: ಚಾನಲ್​ ಬಿಡುಗಡೆಗೆ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದ ಕ್ರಿಸ್ಟಿಯನೋ ರೊನಾಲ್ಡೊ, ಕಾಯುವಿಕೆ ಅಂತ್ಯಗೊಂಡಿದೆ. ನನ್ನ ಯುಟ್ಯೂಬ್​​ ಚಾನಲ್​ ಅಂತಿಮವಾಗಿ ಹೊರಬಂದಿದೆ. ನನ್ನ ಹೊಸ ಪ್ರಯಾಣಕ್ಕೆ ಸೇರಲು ಚಂದಾದಾರರಾಗಿ ಎಂದು ತಿಳಿಸಿದ್ದರು. ಈ ಯುಟ್ಯೂಬ್​ ಚಾನಲ್​ಗೆ 'ಯುಆರ್​ ಕ್ರಿಸ್ಟಿಯನೋ' ಎಂದು ಹೆಸರಿಡಲಾಗಿದೆ. 39 ವರ್ಷದ ಪೋರ್ಚುಗಲ್​ ಮೂಲದ ಪುಟ್ಬಾಲ್​ ತಾರೆಯ ಮೊದಲ ವಿಡಿಯೋವನ್ನು 13 ಗಂಟೆಗಳಲ್ಲಿ 7.95 ಮಿಲಿಯನ್​ ಜನರು ವೀಕ್ಷಿಸಿದ್ದಾರೆ.

ಫುಟ್ಬಾಲ್​ ಜಗತ್ತಿನ ದಿಗ್ಗಜನಾಗಿರುವ ರೊನಾಲ್ಡೊ ಸದ್ಯ ಸೌದಿ ಪ್ರೊ ಲೀಗ್​ನಲ್ಲಿ ಅಲ್​ ನಸ್ಸರ್​ಗೆ ಆಟವಾಡುತ್ತಿದ್ದಾರೆ. ಇತ್ತೀಚೆಗೆ ಅವರು ಯುರೋ 2024ರಲ್ಲಿ ಭಾಗಿಯಾಗಿದ್ದರು. ಆದರೂ ಅವರ ತಂಡದ ಶೀರ್ಷಿಕೆಯೊಂದಿಗೆ ಆಟವನ್ನು ಮುನ್ನಡೆಸಲಿಲ್ಲ. ಅಲ್ಲದೇ ತಮ್ಮ ಕಡೆಯ ಯುರೋ ಚಾಂಪಿಯನ್​ ಇದಾಗಿರಲಿದೆ ಎಂದು ಕೂಡ ಅವರು ಘೋಷಿಸಿದ್ದರು. ಅವರ ನಿವೃತ್ತಿ ನಿರೀಕ್ಷಿತವಾಗಿತ್ತು. ರೊನಾಲ್ಡೊ ಕಂಟೆಟ್​ ಕ್ರಿಯೇಷನ್​ ಮತ್ತು ಇತರೆ ಉದ್ಯಮಗಳ ಮೂಲಕ ಮುಂದಿನ ದಿನಗಳಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ದುಬಾರಿ ಕಾರುಗಳ ಒಡೆಯ.. ಕಾಲ್ಚೆಂಡಿನ ದಾಖಲೆ ಸರದಾರ ರೊನಾಲ್ಡೊ: ಇಲ್ಲಿದೆ ಅವರ ಕಾರುಗಳ ಕಲೆಕ್ಷನ್​ ಮಾಹಿತಿ

ABOUT THE AUTHOR

...view details