Cricketers fitness Secret:ಇತ್ತೀಚಿನ ದಿನಗಳಲ್ಲಿ ಯುವಕರಿಂದ ಹಿಡಿದು ಹಿರಿಯರ ವರೆಗೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅದರಲ್ಲೂ ಕಿರಿಯ ವಯಸ್ಸಿನಲ್ಲೇ ಕೆಲವರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಆಗಿದೆ.
ಹೆಚ್ಚಿನ ಜನ ರುಚಿಯ ಆಸೆಗೆ ಬಿದ್ದು ಜಂಕ್ ಫುಡ್ಗಳನ್ನು ತಿನ್ನುವುದು, ಹೆಚ್ಚಿನ ಎಣ್ಣೆ ಪದಾರ್ಥಗಳ ಆಹಾರ ಸೇವನೆ ಮಾಡುವುದು ಇವು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತವೆ. ನೀವೂ ಸದಾ ಆರೋಗ್ಯವಾಗಿರುಲು ಬಯಸಿದರೇ ಅಥ್ಲೀಟ್ಗಳ ಈ ದಿನಚರಿ ಫಾಲೋ ಮಾಡಿದರೇ ಸಾಕು 100 ವರ್ಷಗಳ ಕಾಲ ಆರೋಗ್ಯವಾಗಿರುವಿರಿ. ಹಾಗಾದರೆ ಅದರ ಬಗ್ಗೆ ಇದೀಗ ತಿಳಿಯೋಣ ಬನ್ನಿ.
ಆರೋಗ್ಯಕರ ಆಹಾರ ಪದ್ಧತಿ:ಕ್ರಿಕೆಟರ್ಗಳ ಹಾಗೆ ಸದಾ ಫಿಟ್ ಆಗಿರಲು ಉತ್ತಮ ಆಹಾರ ಸೇವನೆ ಮಾಡಬೇಕು. ಮಸಾಲೆಯುಕ್ತ ಪದಾರ್ಥ ಮತ್ತು ಜಂಕ್ ಫುಡ್ಗಳನ್ನು ಆದಷ್ಟು ಕಡಿಮೆ ಮಾಡಿ ಮನೆಯಲ್ಲೇ ತಯಾರಿಸಿದ ಶುದ್ಧ ಆಹಾರ ಸೇವನೆ ಮಾಡುವುದು ಉತ್ತಮ. ದೈನಂದಿನ ಆಹಾರದಲ್ಲಿ ನಾರಿನಾಂಶ ಮತ್ತು ಪೌಷ್ಟಿಕಾಂಶ ಹೆಚ್ಚಿರುವ ಪದಾರ್ಥಗಳ ಸೇವನೆ ಮಾಡಿ. ಆದಷ್ಟು ಸಕ್ಕರೆ ಮತ್ತು ಉಪ್ಪಿನ ಅಂಶ ಕಡಿಮೆ ಮಾಡಿ. ದಿನವೂ ನಿಯಮಿತ ಪ್ರಮಾಣದಲ್ಲಿ ಡ್ರೈ ಫ್ರೂಟ್ಗಳ ಸೇವನೆ ಮಾಡಿ.
ಹಣ್ಣುಗಳ ಸೇವನೆ:ನಿತ್ಯ ತಾಜಾ ಹಣ್ಣುಗಳ ಸೇವನೆ ಮಾಡುವುದು ಉತ್ತಮ ಆರೋಗ್ಯಕ್ಕೆ ಸಹಾಕವಾಗಲಿದೆ. ಸಲಾಡ್ ರೂಪದಲ್ಲಿ ಹಣ್ಣುಗಳ ಸೇವನೆ ಮಾಡುವುದರಿಂದ ಹಸಿವೆಯೂ ಕಡಿಮೆ ಆಗಲಿದ್ದು ಹೆಚ್ಚಿನ ಎನರ್ಜಿ ಸಿಗಲಿದೆ.