ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಪಂದ್ಯದ ನಡುವೆಯೇ ಮೈದಾನದಲ್ಲಿ 500 ರೂ. ನೋಟುಗಳ ಸುರಿಮಳೆ ! ವಿಡಿಯೋ ವೈರಲ್​ - CRICKETER SHOWERED WITH MONEY

ಕ್ರಿಕೆಟ್​ ಪಂದ್ಯದ ನಡುವೆಯೇ ಕ್ರಿಕೆಟ್​ ಮೈದಾನದಲ್ಲಿ ಆಟಗಾರನ ಮೇಲೆ ಪ್ರೇಕ್ಷಕನೊಬ್ಬ ಕಂತೆ ಕಂತೆ ಹಣವನ್ನು ಎಸೆದಿದ್ದಾನೆ.

CRICKETER SHOWERED 500 RUPEE NOTES  MONEY THROWN IN LIVE CRICKET MATCH  KALYAN CRICKET TOURNAMENT  CRICKET
ಕ್ರಿಟಿಗನ ಮೇಲೆ ನೋಟುಗಳ ಸುರಿಮಳೆ (ETV Bharat)

By ETV Bharat Sports Team

Published : Jan 6, 2025, 3:04 PM IST

ಥಾಣೆ (ಮಹಾರಾಷ್ಟ್ರ):ಕ್ರಿಕೆಟ್​ ಮೈದಾನದಲ್ಲಿ ಸಾಮಾನ್ಯವಾಗಿ ಬ್ಯಾಟರ್​ಗಳು ಸಿಕ್ಸರ್​, ಬೌಂಡರಿಗಳ ಮೂಲಕ ರನ್​ ಮಳೆ ಹರಿಸುವುದನ್ನು ನೋಡಿರುತ್ತೇವೆ. ಆದ್ರೆ ಥಾಣೆಯಲ್ಲಿ ನಡೆದ ಕ್ರಿಕೆಟ್​ ಪಂದ್ಯದ ವೇಳೆ ಪ್ರೇಕ್ಷಕನೊಬ್ಬ ಆಟಗಾರನ ಮೇಲೆ ಹಣದ ಸುರಿಮಳೆ ಸುರಿಸಿರುವುದು ಬೆಳಕಿಗೆ ಬಂದಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಮಹಾರಾಷ್ಟ್ರದ ಭಿವಂಡಿ ತಾಲೂಕಿನ ಛತ್ರಪತಿ ಶಿವಾಜಿ ಮಹಾರಾಜ ಮೈದಾನದಲ್ಲಿ 7 ಓವರ್​ಗಳ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​​ ಮಾಡಿದ ತಂಡ ಕೇವಲ 6 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 84 ರನ್​ಗಳನ್ನು ಕಲೆಹಾಕಿತು. ಈ ಸಂದರ್ಭದಲ್ಲಿ ಪವನ್​ ಎಂಬ ಆಟಗಾರ ಬೌಂಡರಿ ಸಿಕ್ಸರ್​ಗಳ ಮಳೆಯನ್ನು ಹರಿಸುತ್ತಿದ್ದರು. ಬಿರುಸಿನ ಬ್ಯಾಟಿಂಗ್​ ಮಾಡಿದ ಪವನ್​ ಕೇವಲ 9 ಎಸೆತಗಳಲ್ಲಿ 35 ರನ್​ ಚಚ್ಚಿದ್ದರು.

ನೋಟುಗಳ ಸುರಿಮಳೆ (ETV Bharat)

ಮೊದಲ ಎಸೆತದಿಂದಲೇ ಪವನ್ ಹೊಡಿಬಡಿ ಆಟವನ್ನು ಆಡಿ ನೆರೆದಿದ್ದವರ ಗಮನ ಸೆಳೆದಿದ್ದರು. ಈ ವೇಳೆ ಪವನ್​ ಬ್ಯಾಟಿಂಗ್​ನಿಂದ ಆಕರ್ಷಿತಗೊಂಡ ಪ್ರೇಕ್ಷಕನೊಬ್ಬ ಮೈದಾನ ಪ್ರವೇಶಿಸಿ ಪವನ್​ ಮೇಲೆ ಕಂತೆ ಕಂತೆ ನೋಟುಗಳನ್ನು ಎಸೆದಿದ್ದಾನೆ. ಆದ್ರೆ ಪ್ರೇಕ್ಷಕ ಎಸೆದಿದ್ದು ಹತ್ತು ಇಪ್ಪತ್ತು ರೂಪಾಯಿ ನೋಟುಗಳಲ್ಲ ಬದಲಾಗಿ ₹500 ರೂಪಾಯಿ ಮುಖಬೆಲೆಯ ನೋಟುಗಳನ್ನು ಎಸೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಹೀಗೆ ನೋಟ್​ಗಳನ್ನು ಎಸೆಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ ದುಡ್ಡನ್ನು ಆರಿಸಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಬಿಜೆಪಿ ಕಲ್ಯಾಣ ನಗರದ ಅಧ್ಯಕ್ಷ ವರುಣ್ ಪಾಟೀಲ್ ಅವರು ಈ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಈ ಪಂದ್ಯಾವಳಿಯನ್ನು ಕಲ್ಯಾಣ್​ ಲೋಕಸಭಾ ಸಂಸದ ಡಾ. ಶ್ರೀಕಾಂತ್​ ಶಿಂಧೆ ಉದ್ಘಾಟಿಸಿದ್ದರು. ವೈರಲ್​ ಆಗುತ್ತಿರುವ ವಿಡಿಯೋಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ನೋಟುಗಳಿಗೆ ಅಪಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಏಕದಿನ, ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್​ ಆಲ್‌ರೌಂಡರ್

ABOUT THE AUTHOR

...view details