ಕರ್ನಾಟಕ

karnataka

ETV Bharat / sports

Border Gavaskar Trophy: ಚೇತೇಶ್ವರ ಪೂಜಾರಗೆ ಸಿಕ್ಕಿತು ಬಿಗ್​ ಆಫರ್​, ಆಸ್ಟ್ರೇಲಿಯಾಗೆ ಹಾರಿದ ಕ್ರಿಕೆಟರ್!​ - CHETESHWAR PUJARA

ಚೇತೇಶ್ವರ ಪೂಜಾರಗೆ ಬಿಗ್​ ಆಫರ್​ ಸಿಕ್ಕಿದ್ದು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.

ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ (Getty Images)

By ETV Bharat Sports Team

Published : Nov 19, 2024, 12:17 PM IST

Cheteshwar Pujara Border Gavaskar Trophy:ಇನ್ನು ಮೂರು ದಿನಗಳಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ನವೆಂಬರ್ 22 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಆದರೆ ಈ ಪ್ರತಿಷ್ಠಿತ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಟೆನ್ಶನ್​ ಶುರುವಾಗಿದೆ. ನಾಯಕ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತುದೆ.

ಜೊತೆಗೆ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್​ ಗಾಯದ ಕಾರಣ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಇದೇ ವೇಳೆ ಟೀಂ ಇಂಡಿಯಾ ಚೇತೇಶ್ವರ ಪೂಜಾರ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಪಂದ್ಯ ಆಡಲು ಪೂಜಾರ ತೆರಳುತ್ತಿಲ್ಲ.

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಟೀಂ ಇಂಡಿಯಾ ತಂಡದಲ್ಲಿ ಪೂಜಾರ ಅವರನ್ನು ಬಿಸಿಸಿಐ ಆಯ್ಕೆ ಮಾಡಿಲ್ಲದಿರುವುದು ಗೊತ್ತೆ ಇದೆ. ಆದರೆ ಹಿರಿಯ ಆಟಗಾರ ಪೂಜಾರಗೆ ಒಂದು ಅವಕಾಶ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ. ಇದೀಗ ಅವರು ಆಸ್ಟ್ರೇಲಿಯಾಗೆ ತೆರಳಿದ್ದಾರೆ ಎಂಬ ಸುದ್ದಿ ತಿಳಿದು ಬರುತ್ತಿದ್ದಂತೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಪೂಜಾರ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೇ ಪೂಜಾರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಗಿಲ್ ಬದಲಿಗೆ ಪೂಜಾರ ಕಣಕ್ಕಿಳಿಯಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಆದರೆ ಪೂಜಾರ ಪಂದ್ಯ ಆಡಲು ತೆರಳಿಲ್ಲ. ಬದಲಿಗೆ ಅವರು ಪಂದ್ಯವನ್ನು ನೇರ ಪ್ರಸಾರ ಮಾಡುವ ಚಾನೆಲ್​ನಲ್ಲಿ ಕಾಮೆಂಟರಿ ಮಾಡಲು ತೆರಳಿದ್ದಾರೆ ಎನ್ನಲಾಗುತ್ತಿದೆ. ಹೌದು, ಪೂಜಾರ ಹಿಂದಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಲಿದ್ದಾರಂತೆ. ಪೂಜಾರ ಪರ್ತ್‌ಗೆ ಹೋದರೂ ಮೈದಾನದ ಬದಲು ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ವರದಿಗಳಾಗಿವೆ.

ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಸರಣಿ ವೇಳಾಪಟ್ಟಿ

ಮೊದಲ ಟೆಸ್ಟ್​:ನ.22 ರಿಂದ 26ರ ವರೆಗೆ ಪರ್ತ್​ ಮೈದಾನದಲ್ಲಿ ನಡೆಯಲಿದೆ.

2ನೇ ಟೆಸ್ಟ್​:ಡಿ.6 ರಿಂದ 10ರ ವರೆಗೆ - ಅಡಿಲೆಡ್ ಮೈದಾನ​

3ನೇ ಟೆಸ್ಟ್​: ಡಿ.14 ರಿಂದ 18ರ ವರೆಗೆ - ಬ್ರಿಸ್​ಬೆನ್​ ಮೈದಾನ

4ನೇ ಟೆಸ್ಟ್​: ಡಿ.26 ನಿಂದ 30ರ ವರೆಗೆ - ಮೇಲ್ಬರ್ನ್​ ಮೈದಾನ

5ನೇ ಟೆಸ್ಟ್​: ಜ.3 ರಿಂದ 7ರ ವರೆಗೆ - ಸಿಡ್ನಿ ಮೈದಾನ

ಇದನ್ನೂ ಓದಿ:BGT: ಪರ್ತ್‌ನಲ್ಲಿ ಟೀಂ ಇಂಡಿಯಾ ಕೊನೆಯ ಟೆಸ್ಟ್​ ಆಡಿದ್ದು ಯಾವಾಗ, ಫಲಿತಾಂಶ ಏನಾಗಿತ್ತು?

ABOUT THE AUTHOR

...view details