ನವದೆಹಲಿ: ಮುಂಬರುವ 2024-25ರ ದೇಶೀಯ ಸೀಸನ್‌ಗಾಗಿ ಟೀಂ ಇಂಡಿಯಾದ ವೇಳಾಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಬದಲಾವಣೆ ಮಾಡಿದೆ. ಭಾರತ ಕ್ರಿಕೆಟ್ ತಂಡ ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧವೂ ಸರಣಿ ಆಡಲಿದೆ. ಬಿಸಿಸಿಐ ತನ್ನ ತವರು ಮೈದಾನದಲ್ಲಿ ನಡೆಯಲಿರುವ ಪಂದ್ಯಗಳ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಹೊಸ ಪಟ್ಟಿ ಬಿಡುಗಡೆಗೊಳಿಸಿದೆ.
ಭಾರತ-ಬಾಂಗ್ಲಾ ಸರಣಿ:ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯವು ಆರಂಭದಲ್ಲಿ 6 ಅಕ್ಟೋಬರ್ 2024ರಂದು ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಡ್ರೆಸ್ಸಿಂಗ್ ರೂಮ್ ಕಾಮಗಾರಿ ಕಾರಣ ಈಗ ಗ್ವಾಲಿಯರ್‌ನಲ್ಲಿ ನಡೆಯಲಿದೆ. ಈ ಪಂದ್ಯ ನಗರದ ಹೊಸ ಕ್ರೀಡಾಂಗಣವಾದ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು 2010ರ ನಂತರ ಈ ಕ್ರೀಡಾಂಗಣದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. 2010ರಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಐತಿಹಾಸಿಕ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಈ ಮೈದಾನದಲ್ಲಿ ಮೊದಲ ದ್ವಿಶತಕ ಸಿಡಿಸಿದ್ದರು.
ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಬದಲಾವಣೆ: ಇಂಗ್ಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟಿ 20ಗಳ ಸ್ಥಳಗಳನ್ನು ವಿನಿಮಯ ಮಾಡಿಕೊಳ್ಳುವುದಾಗಿ ಮಂಡಳಿಯು ಪ್ರಕಟಿಸಿದೆ. ಮೊದಲಿಗೆ ಮೊದಲ ಟಿ20ಐಗೆ ಆತಿಥ್ಯ ವಹಿಸಬೇಕಿದ್ದ ಚೆನ್ನೈ ಇದೀಗ ಎರಡನೇ ಟಿ20ಐಗೆ ಆತಿಥ್ಯ ವಹಿಸಲಿದ್ದು, ಈ ಹಿಂದೆ ಘೋಷಿಸಿದಂತೆ ಎರಡನೇ ಟಿ20ಐ ಬದಲಿಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೊದಲ ಪಂದ್ಯವನ್ನು ಆಯೋಜಿಸಲಿದೆ. ಜನವರಿ 22ರಂದು ಮೊದಲ ಟಿ20 ಮತ್ತು ಜನವರಿ 25ರಂದು ಎರಡನೇ ಟಿ20 ದಿನಾಂಕಗಳು ಒಂದೇ ಆಗಿರುತ್ತವೆ ಎಂದು ಬಿಸಿಸಿಐ ತಿಳಿಸಿದೆ.
ಭಾರತ ಮತ್ತು ಬಾಂಗ್ಲಾದೇಶ ಸರಣಿಯ ನೂತನ ವೇಳಾಪಟ್ಟಿ..
ಸಂಖ್ಯೆ | ದಿನಾಂಕ | ಪಂದ್ಯ | ಫಾರ್ಮೆಟ್ | ಸಮಯ | ಸ್ಥಳ |
1 | ಸೆಪ್ಟೆಂಬರ್ 19 ರಿಂದ 23 ರವರೆಗೆ | ಭಾರತ vs ಬಾಂಗ್ಲಾದೇಶ | ಟೆಸ್ಟ್ | 9.30 ಬೆಳಗ್ಗೆ | ಚಿದಂಬರಂ ಸ್ಟೇಡಿಯಂ, ಚೆನ್ನೈ |
2 | ಸೆ. 27 ರಿಂದ ಅಕ್ಟೋಬರ್ 01 ರವರೆಗೆ | ಭಾರತ vs ಬಾಂಗ್ಲಾದೇಶ | ಟೆಸ್ಟ್ | 9.30 ಬೆಳಗ್ಗೆ | ಗ್ರೀನ್ ಪಾರ್ಕ್, ಕಾನ್ಪುರ |
3 | ಅಕ್ಟೋಬರ್ 06 | ಭಾರತ vs ಬಾಂಗ್ಲಾದೇಶ | ಟಿ20 | ಸಂಜೆ 7.30ಕ್ಕೆ | ಶ್ರೀಮಂತ್ ಮಾಧವರಾವ್ ಸಿಂಧಿಯಾ |