BCCI New Rules: ಭಾರತ ತಂಡ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿರುವ ಹಿನ್ನೆಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಂಡದಲ್ಲಿ ಶಿಸ್ತು, ಏಕತೆ ಮತ್ತು ಸಕಾರಾತ್ಮಕ ವಾತಾವರಣ ಸೃಷ್ಟಿಸಲು 10 ಹೊಸ ನಿಯಮಗಳನ್ನು ಜಾರಿ ಮಾಡಿದೆ.
ಈ ನಿಯಮಗಳನ್ನು ಚಾಚುತಪ್ಪದೇ ಪ್ರತಿಯೊಬ್ಬ ಆಟಗಾರ ಪಾಲಿಸೆಬೇಕು ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದೆ. ಒಂದು ವೇಳೆ ಪಾಲಿಸದಿದ್ದರೇ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ. ಹಾಗಾದರೆ ಆ ಹತ್ತು ನಿಯಮಗಳು ಯಾರೂ ಪಾಲಿಸದಿದ್ದರೇ ಆಟಗಾರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇದೀಗ ತಿಳಿಯಿರಿ.
ಬಿಸಿಸಿಐ ಜಾರಿಗೆ ತಂದ ಹತ್ತು ನಿಯಮಗಳು
1. ದೇಶಿಯ ಪಂದ್ಯ ಕಡ್ಡಾಯ:ಇನ್ಮುಂದೆ ಪ್ರತಿಯೊಬ್ಬ ಆಟಗಾರರು ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಮತ್ತು ಕೇಂದ್ರೀಯ ಗುತ್ತಿಗೆ ಪಡೆಯಲು ಬಯಸಿದರೇ ಕಡ್ಢಾಯವಾಗಿ ದೇಶೀಯ ಪಂದ್ಯಗಳಲ್ಲಿ ಆಡಲೇಬೇಕು. ಇದರಿಂದಾಗಿ ಸ್ಥಳೀಯ ಯುವಕರಿಗೆ ಸ್ಟಾರ್ ಕ್ರಿಕೆಟಿಗರೊಂದಿಗೆ ಆಡುವ ಅವಕಾಶ ಸಿಗುತ್ತದೆ ಮತ್ತು ಅವರ ಭವಿಷ್ಯಕ್ಕೆ ಸಹಾಯಕವಾಗಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
2. ತಂಡದೊಂದಿಗೆ ಪ್ರಯಾಣ:ಪಂದ್ಯಗಳು ಮತ್ತು ಪ್ರವಾಸದ ಸಮಯದಲ್ಲಿ ಆಯ್ಕೆಯಾದ ಎಲ್ಲಾ ಆಟಗಾರರು ತಂಡದೊಂದಿಗೆ ಒಟ್ಟಿಗೆ ಪ್ರಯಾಣ ಬೆಳೆಸಬೇಕು ಪ್ರತ್ಯೇಕ ಪ್ರಯಾಣಕ್ಕೆ ಅನುಮತಿ ಇಲ್ಲ. ಇದರಿಂದ ಆಟಗಾರರ ನಡುವಿನ ಸಂಬಂಧ ಮತ್ತಷು ಸುಧಾರಿಸುತ್ತದೆ. ಒಂದು ವೇಳೆ ಆಟಗಾರರು ತಮ್ಮ ಕುಟುಂಬದೊಂದಿಗೆ ಪ್ರಯಾಣ ಮಾಡಲು ಬಯಸಿದರೆ ಮುಖ್ಯ ಕೋಚ್ ಮತ್ತು ಆಯ್ಕೆ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ.
3. ಹೆಚ್ಚಿನ ಲಗೇಜ್ಗೆ ಬ್ರೇಕ್:ಇನ್ಮುಂದೆ ದೇಶಿ ಮತ್ತು ವಿದೇಶಿ ಪ್ರವಾಸಕ್ಕೆ ಅನುಗುಣವಾಗಿ ಆಟಗಾರರು ಲಗೇಜ್ ತೆಗೆದುಕೊಂಡು ಹೋಗಬೇಕು. ದೇಶಿ ಪಂದ್ಯಗಳಲ್ಲಿ ಆಡುವುದಾದರೇ ಒಬ್ಬ ಆಟಗಾರ ತನ್ನೊಂದಿಗೆ 120 ಕೆಜಿ ಯಷ್ಟು ಲಗೇಜ್ ತೆಗೆದುಕೊಂಡು ಹೋಗಬೇಕು. 30 ದಿನಗಳಿಗಿಂತಲೂ ಹೆಚ್ಚಿನ ದಿನ ನಡೆಯುವ ವಿದೇಶಿ ಪಂದ್ಯಗಳಿಗೆ 150 ಕೆಜಿ ಲಗೇಜ್ಗೆ ಅನುಮತಿ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಲಗೇಜ್ ಇದ್ದರೆ, ಅದನ್ನು ಆಟಗಾರರೇ ಬರಿಸಬೇಕು ಎಂದು ತಿಳಿಸಿದೆ.
4. ವೈಯಕ್ತಿಕ ಸಿಬ್ಬಂದಿ ನಿಷೇಧ:ಆಟಗಾರರು ಪಂದ್ಯಗಳಿಗಾಗಿ ವಿದೇಶ ಪ್ರವಾಸಕ್ಕೆ ಹೋಗುವಾಗ ಅವರೊಂದಿಗೆ ಬಾಣಸಿಗರು, ಪರ್ಸನಲ್ ಮ್ಯಾನೇಜರ್, ಭದ್ರತಾ ಸಿಬ್ಬಂದಿಗಳನ್ನು ಜೊತೆಗೆ ಕರೆದುಕೊಂಡು ಹೋಗುವುದಕ್ಕೆ ನಿಷೇಧಿಸಲಾಗಿದೆ. ಕರೆದುಕೊಂಡು ಹೋಗಲು ಬಯಸಿದರೇ ಬಿಸಿಸಿಐ ಅನುಮತಿ ಕಡ್ಡಾಯವಾಗಿದೆ.