ಕರ್ನಾಟಕ

karnataka

ETV Bharat / sports

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ; ಹೊಸ ಮುಖಗಳಿಗೆ ಅವಕಾಶ - BCCI Announced Indian Squad - BCCI ANNOUNCED INDIAN SQUAD

2 ಪಂದ್ಯಗಳ ಟೆಸ್ಟ್ ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ​ ಸರಣಿಯ ಮೊದಲ ಪಂದ್ಯಕ್ಕೆ ಬಿಸಿಸಿಐ ಭಾನುವಾರ ಟೀಂ ಇಂಡಿಯಾವನ್ನು ಪ್ರಕಟಿಸಿತು.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ (ANI)

By ETV Bharat Karnataka Team

Published : Sep 8, 2024, 11:01 PM IST

Updated : Sep 9, 2024, 9:40 AM IST

ನವದೆಹಲಿ:ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ರೋಹಿತ್​ ಶರ್ಮಾ ನಾಯಕತ್ವದ 15 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ. ತಂಡದಲ್ಲಿ ಹಲವು ಹೊಸಬರಿಗೆ ಅವಕಾಶ ನೀಡಲಾಗಿದೆ. ಜೊತೆಗೆ, ಹಿರಿಯ ಆಟಗಾರರಿಗೂ ಮಣೆ ಹಾಕಿದೆ.

ತಂಡದಲ್ಲಿ ಸ್ಥಾನ ಪಡೆದ ಪಂತ್, ಕೊಹ್ಲಿ: ಕಾರು ಅಪಘಾತದಲ್ಲಿ ಗಾಯಗೊಂಡ 20 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿದಿದ್ದ ವಿಕೆಟ್ ಕೀಪರ್ ರಿಷಬ್ ಪಂತ್​ಗೆ ಮೊದಲ ಅವಕಾಶ ನೀಡಲಾಗಿದೆ. ರೋಹಿತ್ ಶರ್ಮಾ ತಂಡದ ನಾಯಕ. ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ತಂಡದಲ್ಲಿ ಸೇರಿಸಲಾಗಿದೆ.

ಹೊಸಬರಿಗೆ ಅವಕಾಶ: ದುಲೀಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ್ದ ಆಕಾಶ್ ದೀಪ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ಯುವ ವೇಗಿ ಯಶ್ ದಯಾಳ್ ಚೊಚ್ಚಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯ ವೇಗಿ ಮೊಹಮ್ಮದ್ ಶಮಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಶ್ರೇಯಸ್ ಅಯ್ಯರ್, ಮುಖೇಶ್ ಕುಮಾರ್, ದೇವದತ್ ಪಡಿಕ್ಕಲ್, ಕೆ.ಎಲ್.ಭಾರತ್, ಅವೇಶ್ ಖಾನ್, ಋತುರಾಜ್​ ಗಾಯಕ್ವಾಡ್​​ ಅವರಿಗೆ ಅವಕಾಶ ಸಿಕ್ಕಿಲ್ಲ.

ಮುಖಾಮುಖಿ: ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ 11 ಪಂದ್ಯಗಳನ್ನು ಗೆದ್ದು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ 2-0 ಐತಿಹಾಸಿಕ ಜಯವನ್ನು ದಾಖಲಿಸಿದ ನಂತರ ಈ ಸರಣಿಯನ್ನು ಪ್ರವೇಶಿಸಲಿದೆ. ಆದರೆ, ಈ ವರ್ಷದ ಆರಂಭದಲ್ಲಿ ಜನವರಿ-ಮಾರ್ಚ್‌ನಲ್ಲಿ ತವರಿನಲ್ಲಿ ಇಂಗ್ಲೆಂಡ್ ಅನ್ನು 4-1ರಿಂದ ಸೋಲಿಸಿದ ನಂತರ ಇದು ಭಾರತದ ಮೊದಲ ಟೆಸ್ಟ್ ಆಗಿದೆ.

ಪಂದ್ಯಗಳು ಹೀಗಿವೆ:ಸೆಪ್ಟೆಂಬರ್ 19ರಂದು ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಆರಂಭವಾಗಲಿದೆ. ಈ ಮೂಲಕ ಭಾರತದ ಟೆಸ್ಟ್ ಋತುವು ಕೂಡ ಪ್ರಾರಂಭವಾಗುತ್ತದೆ. ಸರಣಿಯ ಎರಡನೇ ಟೆಸ್ಟ್ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 1 ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್, ಕುಲದೀಪ್ ಯಾದವ್.

ಇದನ್ನೂ ಓದಿ:ದುಲೀಪ್ ಟ್ರೋಫಿ: ಶುಭ್ಮನ್​ ಗಿಲ್​ ಪಡೆಗೆ ಸೋಲು; ಇಂಡಿಯಾ ಬಿ ಶುಭಾರಂಭ - Duleep Trophy

Last Updated : Sep 9, 2024, 9:40 AM IST

ABOUT THE AUTHOR

...view details