ಪೆನ್ಸಿಲ್ವೇನಿಯಾ (ಅಮೆರಿಕ): ಪೆನ್ಸಿಲ್ವೇನಿಯಾದ ಅತಿದೊಡ್ಡ ನಗರವಾದ ಫಿಲಡೆಲ್ಫಿಯಾದ ಸ್ಯಾಮ್ಯುಯೆಲ್ ಫೆಲ್ಸ್ ಹೈಸ್ಕೂಲ್‌ನಲ್ಲಿ 17 ಬಾಸ್ಕೆಟ್‌ಬಾಲ್ ಆಟಗಾರ ನೋಹ್ ಸ್ಕರ್ರಿ ಎಂಬುವವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆ ಜನವರಿ 14, ಮಂಗಳವಾರ ಬೆಳಗ್ಗೆ 7:15ಕ್ಕೆ ಟ್ಯಾಕ್ನಿ ಕ್ರೀಕ್ ಪಾರ್ಕ್ ಬಳಿ ಸಂಭವಿಸಿದೆ.
ನೋಹ್ ಸ್ಕರ್ರಿ ತನ್ನ ತಾಯಿಯೊಂದಿಗೆ ಶಾಲೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರ ಮೇಳೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಸ್ಕರ್ರಿಯ ತಾಯಿಯ ಕಿರುಚಾಟವನ್ನು ಕೇಳಿದ ಜನರು ಸ್ಥಳಕ್ಕಾಗಮಿಸಿದ್ದಾರೆ. ಅಷ್ಟೊತ್ತಿಗೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನೋಹ್ ಸ್ಕರ್ರಿ ಬಾಸ್ಕೇಟ್ ಬಾಲ್ ಆಟಗಾರ ಮಾತ್ರವಲ್ಲದೇ ರ‍್ಯಾಪ್ ಹಾಡುಗಳನ್ನು ಹಾಡುತ್ತಿದ್ದರು. ಆಶ್ಚರ್ಯ ಎಂದರೆ ಸ್ಕರ್ರಿ ಮುಖದ ಮೇಲೆ ಜೋಕರ್ ಮುಖವಾಡವಿರುವ ಮಾಸ್ಕ ಧರಿಸಿ ರ‍್ಯಾಪ್ ಸಾಂಗ್ವೊಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋ ಬಿಡುಗಡೆ ಮಾಡಿದ 24 ಗಂಟೆಗಳ ನಂತರ ಸರ್ರಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ.
ಸ್ಕರ್ರಿಯನ್ನು ಕೊಂದಿರುವ ದುಷ್ಕರ್ಮಿಗಳು ಕಪ್ಪು ಬಣ್ಣದ ನಂಬರ್ ಪ್ಲೇಟ್, ಮುರಿದ ಸನ್‌ರೂಫ್ ಮತ್ತು ವಿಂಡ್‌ಶೀಲ್ಡ್‌ನಲ್ಲಿ ವಿವಿಧ ಸ್ಟಿಕ್ಕರ್‌ಗಳನ್ನು ಹೊಂದಿದ್ದ ಬಿಳಿ ಜೀಪ್ನಲ್ಲಿ ಬಂದಿದ್ದರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆ ಬಳಿಕ ಈ ಜೀಪ್ ಈಶಾನ್ಯ ಫಿಲಡೆಲ್ಫಿಯಾದಲ್ಲಿರುವುದಾಗಿ ಪೊಲೀಸರು ವಿವರಗಳನ್ನು ಕಲೆಹಾಕಿದ್ದಾರೆ.
ಘಟನೆ ಬಗ್ಗೆ ಶಾಲಾ ಮಂಡಳಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ಕರ್ರಿ ಘಟನೆಗೆ ಪ್ರಾಂಶುಪಾಲರು, ತರಬೇತುದಾರರು, ಆಟಗಾರರು, ಸಹಪಾಠಿಗಳು, ಸಹೋದ್ಯೋಗಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ಸದಸ್ಯರು, ಸ್ಕರ್ರಿ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದರು. ಜೊತೆಗೆ ಹಾಡುಗಳನ್ನು ಹೇಳುತ್ತಿದ್ದರು. ಅವರ ವಿರುದ್ಧ ದುಷ್ಕರ್ಮಿಗಳು ಈ ರೀತಿ ಕೃತ್ಯ ಎಸಗಿದ್ದಾರೆ. ಅಲ್ಲದೇ ಈತ ಪದವಿ ಪಡೆಯಲು ಸಿದ್ಧತೆ ನಡೆಸಿದ್ದ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಮ್ಯುಯೆಲ್ ಫೆಲ್ಸ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ನೋಹ್ ಸ್ಕರ್ರಿ ಬಾಸ್ಕೇಟ್ ಬಾಲ್ನಲ್ಲಿ ಬೆಸ್ಟ್ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಇದರೊಂದಿಗೆ ಓದುವದರಲ್ಲೂ ಮುಂದಿದ್ದ ಅತಿ ಹೆಚ್ಚು ಅಂಕ ಪಡೆಯುತ್ತಿದ್ದರು. ಈ ಘಟನೆಯ ನಂತರ, ಶಾಲೆಯಲ್ಲಿ ಒಂದು ವಾರದ ಕಾಲ ಎಲ್ಲ ಕ್ರೀಡೆಗಳನ್ನು ರದ್ದುಗೊಳಿಸಲಾಗಿದೆ. ಮತ್ತೊಂದೆಡೆ ಪೊಲೀಸರು ದುಷ್ಕೃತ್ಯ ಎಸಗಿದ ಕಿಡಿಗೇಡಿಗಳ ಶೋಧಕಾರ್ಯ ಕೈಗೊಂಡಿದ್ದಾರೆ. ಆದ್ರೆ ಸ್ಕರ್ರಿ ಕೊಲೆಗೆ ಕಾರಣ ಏನು ಎಂದು ಇನ್ನು ತಿಳಿದು ಬಂದಿಲ್ಲ. ಅವರ ಹಾಡು ಬಿಡುಗಡೆ ಆದ ಬಳಿಕವೇ ಹತ್ಯೆ ಮಾಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾ ಆಟಗಾರರಿಗೆ ಶಾಕ್ ಕೊಟ್ಟ ಬಿಸಿಸಿಐ: 10 ಹೊಸ ರೂಲ್ಸ್ ಜಾರಿ; ತಪ್ಪಿದರೇ ಅತ್ಯಂತ ಕಠಿಣ ಕ್ರಮ!