ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಯುವ ವೇಗದ ಬೌಲರ್ ಹಸನ್ ಮಹ್ಮೂದ್ ದಾಖಲೆಯೊಂದನ್ನು ಬರೆದಿದ್ದಾರರೆ. ಮಹಮೂದ್ ಮೊದಲ ದಿನದಂದೇ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾದ ಅಗ್ರ ಕ್ರಮಾಂಕ ಬ್ಯಾಟರ್ಗಳ ವಿಕೆಟ್ ಪಡೆದು ಮಿಂಚುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಎರಡನೇ ದಿನವಾದ ಇಂದು ಹಸನ್ ಮಹ್ಮೂದ್ 5ನೇ ವಿಕೆಟ್ ಪಡೆಯುವ ಮೂಲಕ ಭಾರತದ ವಿರುದ್ಧ ಟೆಸ್ಟ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬಾಂಗ್ಲಾ ಬೌಲರ್ ಎನಿಸಿಕೊಂಡರು. ಈ ಯುವ ವೇಗಿಯ ಬೌಲಿಂಗ್ ದಾಳಿಯಿಂದ ಬಾಂಗ್ಲಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾವನ್ನು 376 ರನ್‌ಗಳಿಗೆ ಆಲೌಟ್ ಮಾಡಿತು.
ಟಾಸ್ ಸೋತು ಮೊದಲ ಬ್ಯಾಟ್ಗಿಳಿದ್ದ ಭಾರತಕ್ಕೆ, ಮಹ್ಮೂದ್ ತಮ್ಮ ಮಾರಕ ಬೌಲಿಂಗ್ನಿಂದ ಶಾಕ್ ನೀಡಿದ್ದರು. 22.2 ಓವರ್ ಬೌಲಿಂಗ್ ಮಾಡಿದ ಹಸನ್ 5 ವಿಕೆಟ್ ಪಡೆದು ಮಿಂಚಿದ್ದರು. ಇದರೊಂದಿಗೆ 2007ರ ಬಳಿಕ ಅಂದರೇ 17 ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ವಿರುದ್ಧ 5 ವಿಕೆಟ್‌ಗಳನ್ನು ಪಡೆದ ಏಷ್ಯನ್ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಒಟ್ಟು 22.2 ಓವರ್ ಬೌಲಿಂಗ್ ಮಾಡಿದ ಮಹ್ಮೂದ್ 83 ರನ್ಗಳನ್ನು ನೀಡಿ 5 ವಿಕೆಟಗಗಳನ್ನು ಉರುಳಿಸಿದ್ದಾರೆ. ಇದರಲ್ಲಿ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಬುಮ್ರಾರ ವಿಕೆಟ್ ಸೇರಿವೆ.
ಇದನ್ನೂ ಓದಿ:ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಟಾರ್ ಫುಟ್ಬಾಲರ್ ಬಂಧನ; ₹6 ಕೋಟಿ ಮೌಲ್ಯದ ಮಾಲು ವಶ - Star Footballer Arrested