ಹೈದರಾಬಾದ್: ಅದೃಷ್ಟ ಒಲಿದರೇ ಒಂದೇ ರಾತ್ರಿಯಲ್ಲಿ ಶ್ರೀಮಂತನಾಗುಬಹುದು ಎಂಬುದಕ್ಕೆ ಕ್ರಿಕೆಟ್ ಪಂದ್ಯ ನೋಡಲು ಬಂದಿದ್ದ ವ್ಯಕ್ತಿಯೊಬ್ಬ ಸಾಕ್ಷಿಯಾಗಿದ್ದಾನೆ. ಮ್ಯಾಚ್ ನೋಡಲು ಮೈದಾನಕ್ಕೆ ತೆರಳಿದ್ದ ಈ ವ್ಯಕ್ತಿಯ ಅದೃಷ್ಟ ಖುಲಾಯಿಸಿದ್ದು ರಾತೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.
ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಬೆಸ್ಟ್ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಿರುವ ಮತ್ತು ಪಂದ್ಯದಲ್ಲಿ ಅತ್ಯುತ್ತಮ ಕ್ಯಾಚ್ ಪಡೆದಿರುವ ಆಟಗಾರರಿಗೆ ಪಂದ್ಯದ ನಂತರ ನಗದು ಬಹುಮಾನ ನೀಡುವುದನ್ನು ನಾವೆಲ್ಲ ನೋಡಿದ್ದೇವೆ. ಅದರೇ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್ಎ ಟಿ20 ಲೀಗ್ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗೆ ಅದೃಷ್ಟ ಒಲಿದಿದೆ.
ಇತ್ತೀಚೆಗೆ, ಡರ್ಬನ್ ಸೂಪರ್ ಜೈಂಟ್ಸ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ, ಡರ್ಬನ್ ತಂಡವನ್ನು ಪ್ರತಿನಿಧಿಸುತ್ತಿರುವ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ 17.3ನೇ ಓವರ್ನಲ್ಲಿ ಪುಲ್ ಶಾಟ್ ಮೂಲಕ ಸಿಕ್ಸರ್ ಬಾರಿಸಿದ್ದರು. ಚೆಂಡು ನೇರವಾಗಿ ಪ್ರೇಕ್ಷರ ಸ್ಟಾಂಡ್ ಕಡೆಗೆ ಅಪ್ಪಳಿಸಿತು. ಈ ವೇಳೆ ಅಲ್ಲೆ ಕುಳಿತಿದ್ದ ಪ್ರೇಕ್ಷಕನೊಬ್ಬ ತಮ್ಮ ಆಸನದಿಂದ ಎದ್ದು ಒಂದೇ ಕೈನಿಂದ ಅದ್ಭುತವಾದ ಕ್ಯಾಚ್ ಪಡೆದಿದ್ದರು. ಸದ್ಯ ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರೇಕ್ಷಕರಿಗೂ ಬಹುಮಾನ:ಎಸ್ಎ ಟಿ20ಯಲ್ಲಿ ಕ್ರಿಕೆಟಿಗರಿಗೆ ಮಾತ್ರವಲ್ಲದೆ ಪ್ರೇಕ್ಷಕರಿಗೂ ಬಹುಮಾನ ನೀಡಲಾಗುತ್ತಿದೆ. 'ಕ್ಯಾಚ್ ಎ ಮಿಲಿಯನ್' ಹೆಸರಿನಲ್ಲಿ ಕ್ರಿಕೆಟ್ ನೋಡಲು ಮೈದಾನಕ್ಕೆ ಬಂದಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರೇಕ್ಷಕರು ಒನ್ ಹ್ಯಾಂಡ್ ಕ್ಯಾಚ್ ಹಿಡಿದರೇ ಮಿಲಿಯನ್ ರಾಂಡ್ ಬಹುಮಾನವನ್ನು ನೀಡಲಾಗುತ್ತದೆ. ಒಂದು ವೇಳೆ ಪ್ರಾಯೋಜಕ ಕ್ಲೈಂಟ್ ಆಗಿದ್ದರೆ ಬಹುಮಾನದ ಹಣ ದ್ವಿಗುಣಗೊಳಿಸಲಾಗುತ್ತದೆ. ಈ ಹಿನ್ನೆಲೆ ಎಸ್ಎ ಟಿ20 ಲೀಗ್ ಪಂದ್ಯ ವೀಕ್ಷಿಸಲು ಪಂದಿದ್ದ ಪ್ರೇಕ್ಷಕ ಕೋಟ್ಯಾಧಿಪತಿಯಾಗಿ ಹಿಂತಿರುಗಿದ್ದಾನೆ.
ಪಂದ್ಯದ ಹೈಲೈಟ್:ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಡರ್ಬನ್ ಸೂಪರ್ ಜೈಂಟ್ಸ್ ನಿಗದಿತ 20 ಓವರ್ಗೆ 4 ವಿಕೆಟ್ ಕಳೆದುಕೊಂಡು 209 ರನ್ಗಳನ್ನು ಕಲೆಹಾಕಿತು. ತಂಡದ ಪರ ಬ್ರೇಸ್ (47), ಕೇನ್ ವಿಲಿಯಮ್ಸನ್ (60) ಅಧರ್ಶತಕ ಸಿಡಿಸಿದರು. ವಿಲಿಯಮ್ಸನ್ ತಮ್ಮ ಇನ್ನಿಂಗ್ಸ್ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಕಲೆಹಾಕಿದರು. ಸೆನುರನ್ ಮುಥುಸಾಮಿ 3 ವಿಕಟ್ ಪಡೆದರು.
ಈ ಗುರಿಯನ್ನು ಬೆನ್ನತ್ತಿದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ 2 ರನ್ಗಳಿಂದ ಸೋಲನುಭವಿಸಿತು. ವಿಲ್ ಜಾಕ್ ಮತ್ತು ಗುರ್ಭಾಜ್ ಇಬ್ಬರು ಅರ್ಧಶತಕ ಸಿಡಿಸದರು ಯಾವುದೇ ಪ್ರಯೋಜನವಾಗಲಿಲ್ಲ. 207 ರನ್ಗಳಿಗೆ ಕ್ಯಾಪಿಟಲ್ಸ್ ತಂಡ ತನ್ನ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿತು.
ಇದನ್ನೂ ಓದಿ:6,6,6,6,4,4,4,4,4,4!: ಕೊನೆಗೂ ಫಾರ್ಮ್ಗೆ ಮರಳಿದ RCB ಸ್ಪೋಟಕ ಬ್ಯಾಟರ್; ಬೆಚ್ಚಿಬಿದ್ದ ಬೌಲರ್ಸ್!