Cricket Cap Auction:ಕ್ರಿಕೆಟಿಗರಿಗೆ ಸಂಬಂಧಿಸಿದ ಜೆರ್ಸಿ, ಹೆಲ್ಮೆಟ್, ಬ್ಯಾಟ್, ಕ್ಯಾಪ್ ಇತ್ಯಾದಿಗಳನ್ನು ಹರಾಜು ಹಾಕುವುದನ್ನು ಆಗಾಗ್ಗೆ ನೋಡುತ್ತೇವೆ. ಹೀಗೆ ಹರಾಜಿಗಿಟ್ಟ ವಸ್ತುಗಳನ್ನು ಅವರ ಅಭಿಮಾನಿಗಳು ಕೋಟಿ ಬೆಲೆಗೆ ಖರೀದಿಸುತ್ತಾರೆ. ಇದೀಗ ಅಂಥದ್ದೇ ಬೆಳವಣಿಗೆಯೊಂದು ನಡೆದಿದೆ. ಆಸ್ಟ್ರೇಲಿಯಾದ ಪ್ರಸಿದ್ಧ ಬ್ಯಾಟರ್ ಸರ್ ಡಾನ್ ಬ್ಯಾಡ್ಮನ್ ಧರಿಸಿದ್ದ 80 ವರ್ಷ ಹಳೆಯ ಕ್ಯಾಪ್ ಸಿಡ್ನಿಯಲ್ಲಿ ಭಾರೀ ಮೊತ್ತಕ್ಕೆ ಇತ್ತೀಚೆಗೆ ಹರಾಜಾಯಿತು.
ಭಾರತ ಕ್ರಿಕೆಟ್ ತಂಡ 1947-48ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿತ್ತು. ಸ್ವಾತಂತ್ರ ಸಿಕ್ಕ ಬಳಿಕ ವಿದೇಶಿ ನೆಲದಲ್ಲಿ ಭಾರತಕ್ಕಿದು ಮೊದಲ ಟೆಸ್ಟ್ ಸರಣಿಯಾಗಿತ್ತು. ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಪಂದ್ಯಗಳು ನಡೆದಿದ್ದವು. ಇದರಲ್ಲಿ ಆಸ್ಟ್ರೇಲಿಯಾ 4-0 ಅಂತರದಿಂದ ಭಾರತ ತಂಡವನ್ನು ಮಣಿಸಿ ಸರಣಿ ವಶಪಡಿಸಿಕೊಂಡಿತ್ತು. ಈ ಸರಣಿಯಲ್ಲಿ ಡಾನ್ ಬ್ರಾಡ್ಮನ್ 178.75ರ ಸರಾಸರಿಯಲ್ಲಿ 715 ರನ್ ಗಳಿಸಿದ್ದರು. ಇದರಲ್ಲಿ ಒಂದು ದ್ವಿಶತಕ, 4 ಶತಕ ಮತ್ತು 1 ಅರ್ಧಶತಕ ಸೇರಿತ್ತು.