ಹೈದರಾಬಾದ್: ಆಧುನಿಕ ಕ್ರಿಕೆಟ್ನಲ್ಲಿ ದಾಖಲೆಗಳನ್ನು ನಿರ್ಮಿಸುವುದು ಮತ್ತು ಅದನ್ನು ಮುರಿಯುವುದು ಆಟಗಾರರಿಗೆ ಸಾಮಾನ್ಯವಾಗಿದೆ. 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿರುವುದು ಮತ್ತು ಇನ್ನಿಂಗ್ಸ್ ಒಂದರಲ್ಲೆ ಬೌಲರ್ ಒಬ್ಬನೇ 10 ವಿಕೆಟ್ಗಳನ್ನು ಪಡೆದು ದಾಖಲೆ ನಿರ್ಮಿಸಿರುವಂತಹ ಹಲವಾರು ಪಂದ್ಯಗಳ ಬಗ್ಗೆ ನಾವೆಲ್ಲ ಕೇಳಿದ್ದೇವೆ ಮತ್ತು ನೋಡಿದ್ದೇವೆ.
ಆದ್ರೆ ಕ್ರಿಕೆಟ್ ಇತಿಹಾಸದಲ್ಲಿ ಎಂದು ಕಂಡು ಕೇಳರಿಯದಂತಹ ಮತ್ತು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗದಂತಹ ದಾಖಲೆಗಳು ಕೂಡ ನಿರ್ಮಾಣವಾಗಿವೆ. ಅದರಲ್ಲಿ 1 ಎಸೆತದಲ್ಲಿ 286ರನ್ ದಾಖಲೆ ಕೂಡ ಒಂದಾಗಿದೆ.
ಹೌದು ಬ್ಯಾಟರ್ವೊಬ್ಬ ಯಾವುದೇ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸದೇ ಕೇವಲ ಒಂದೇ ಒಂದು ಎಸೆತದಲ್ಲಿ ದ್ವಿಶತಕ ಸಿಡಿಸಿದ್ದ. ಇದು ಅಚ್ಚರಿ ಎನಿಸಿದರೂ ನಿಜ. ಆದರೆ ಈ ದಾಖಲೆ ನಿನ್ನೆ ಮೊನ್ನೆಯದಲ್ಲ 130 ವರ್ಷಗಳಷ್ಟು ಹಳೆಯದ್ದಾಗಿದೆ.
1894ರಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಈ ವಿಚಿತ್ರ ಘಟನೆ ನಡೆದಿತ್ತು. ESPNcricinfo ಪ್ರಕಾರ, 1894ರಲ್ಲಿ ಲಂಡನ್ 'ಪಾಲ್-ಮಾಲ್ ಗೆಜೆಟ್' ಪತ್ರಿಕೆಯಲ್ಲೂ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಇದು ಹೇಗೆ ಸಾಧ್ಯವಾಯಿತು ಎಂದು ಇದೀಗ ತಿಳಿದುಕೊಳ್ಳಿ.
ಘಟನೆ ವಿವರ: ವಾಸ್ತವಾಗಿ ಈ ಘಟನೆಯು 15 ಜನವರಿ 1894 ರಂದು ಸಂಭವಿಸಿತು. ವಿಕ್ಟೋರಿಯಾ ಮತ್ತು 'ಸ್ಕ್ರ್ಯಾಚ್-ಇಲೆವೆನ್' ಹೆಸರಿನ ಎರಡು ತಂಡಗಳ ನಡುವೆ ಪಶ್ಚಿಮ ಆಸ್ಟ್ರೇಲಿಯಾದ ಬಾನ್ಬರಿ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಲಾಗಿತ್ತು. ವಿಕ್ಟೋರಿಯಾ ತಂಡ ಬ್ಯಾಟಿಂಗ್ ಮಾಡುತ್ತಿತ್ತು.
ಈ ವೇಳೆ ಬ್ಯಾಟ್ಸ್ಮನ್ವೊಬ್ಬ ಹೊಡೆದ ಚೆಂಡು ಮೈದಾನದಲ್ಲಿದ್ದ ಮರದಲ್ಲಿ ಸಿಲುಕಿಕೊಂಡಿತ್ತು. ನಂತರ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಆರಂಭಿಸಿದರು. ಚೆಂಡು ಎತ್ತರದ ಮರದಲ್ಲಿ ಸಿಲುಕಿಕೊಂಡ ಕಾರಣ ಆ ಮರವನ್ನು ಹತ್ತಲು ಮತ್ತು ಚೆಂಡನ್ನು ಹೊರ ತೆಗೆಯಲು ಯಾವೊಬ್ಬ ಆಟಗಾರಿನಿಗೂ ಸಾಧ್ಯವಾಗಲಿಲ್ಲ. ಇದರ ಲಾಭ ಪಡೆದ ಎದುರಾಳಿ ತಂಡವು ನಿರಂತರ ರನ್ಗಳನ್ನು ಕಲೆ ಹಾಕತೊಡಗಿತು.
ನಂತರ ಫೀಲ್ಡಿಂಗ್ ತಂಡವು ಮರವನ್ನು ಕಡಿಯಲು ನಿರ್ಧರಿಸಿತು ಆದರೆ ಅದಕ್ಕೆ ಬೇಕಾದ ಪರಿಕರಗಳು ಅಲ್ಲಿ ಇರಲಿಲ್ಲ ಎಂದು ವರದಿಗಳು ಹೇಳುತ್ತವೆ. ಆದಾಗ್ಯೂ, ಕೆಲವು ಗಂಟೆಗಳ ನಂತರ, ರೈಫಲ್ನಿಂದ ಚೆಂಡನ್ನು ಮರದಿಂದ ಕೆಳ ಬೀಳಿಸಲಾಯಿತು. ಅದಾಗಲೇ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು 286ರನ್ಗಳನ್ನು ಕಲೆ ಹಾಕಿದ್ದರು. ಒಟ್ಟು 6 ಕಿಲೋಮೀಟರ್ನಷ್ಟು ಪಿಚ್‌ನಲ್ಲಿ ಬ್ಯಾಟರ್ಗಳು ಓಡಾಡಿ ರನ್ ಗಳಿಸಿದ್ದರು. ಈ ಘಟನೆಯನ್ನು ಇಂದಿನ ನಂಬುವದಿಲ್ಲವಾದರೂ ಇದು ಸತ್ಯವೆಂದು ವಿವರಿಸಲಾಗಿದೆ.
ಇದನ್ನೂ ಓದಿ:ಒಲಿಂಪಿಕ್ಸ್ನಲ್ಲಿ ಮನು ಭಾಕರ್ ಬಳಸಿದ ಪಿಸ್ತೂಲ್ನ ಬೆಲೆ ಎಷ್ಟು ಗೊತ್ತಾ: ಕೇಳಿದ್ರೆ ಶಾಕ್ ಆಗ್ತೀರಿ! - MANU BHAKAR PISTOL PRICE