ETV Bharat / international

ಈ ನಗರದಲ್ಲಿ ಪ್ರಯಾಣಿಸಲು ಸಂಚಾರ ದಟ್ಟಣೆ ಶುಲ್ಕ ಪಾವತಿ ಕಡ್ಡಾಯ: ಎಲ್ಲಿ ಗೊತ್ತಾ? - TRAFFIC CONGESTION FEE

ಅಮೆರಿಕದ ನಗರವೊಂದರಲ್ಲಿ ಸಂಚಾರ ದಟ್ಟಣೆ ಶುಲ್ಕ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ನ್ಯೂಯಾರ್ಕ್ ಸಿಟಿ
ನ್ಯೂಯಾರ್ಕ್ ಸಿಟಿ (IANS)
author img

By ETV Bharat Karnataka Team

Published : Jan 5, 2025, 3:36 PM IST

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ಮಹಾನಗರದಲ್ಲಿ ಸಂಚಾರದಟ್ಟಣೆ ಶುಲ್ಕ ವಿಧಿಸುವ ಯೋಜನೆ ಭಾನುವಾರದಿಂದ ಜಾರಿಗೆ ಬಂದಿದೆ. ಲೋವರ್ ಮತ್ತು ಮಿಡ್ ಟೌನ್ ಮ್ಯಾನ್ ಹಟನ್ ಪ್ರದೇಶಗಳನ್ನು ಒಳಗೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಮೂಲಕ ಸಂಚಾರ ದಟ್ಟಣೆ ಶುಲ್ಕ ವಿಧಿಸುತ್ತಿರುವ ಮೊದಲ ಯುಎಸ್ ನಗರ ಎಂಬ ಹೆಗ್ಗಳಿಕೆಗೆ ನ್ಯೂಯಾರ್ಕ್ ಪಾತ್ರವಾಗಿದೆ.

ವಾಹನದ ಪ್ರಕಾರ, ದಿನದ ಸಮಯ, ಅನ್ವಯವಾಗುವ ಕ್ರಾಸಿಂಗ್ ಶುಲ್ಕ ಮತ್ತು ಕೆಲ ಚಾಲಕರು ಅಥವಾ ವಾಹನಗಳಿಗೆ ಅನ್ವಯವಾಗುವ ರಿಯಾಯಿತಿಗಳು ಮತ್ತು ವಿನಾಯಿತಿಗಳೊಂದಿಗೆ, ಶುಲ್ಕ ಪಾವತಿ ವಿಧಾನವನ್ನು ಅವಲಂಬಿಸಿ ದಟ್ಟಣೆ ರಹಿತ ರಸ್ತೆಗೆ ಪ್ರವೇಶಿಸಲು ವಾಹನಗಳಿಗೆ ಟೋಲ್ ವಿಧಿಸಲಾಗುವುದು ಎಂದು ಮೆಟ್ರೋಪಾಲಿಟನ್ ಸಾರಿಗೆ ಪ್ರಾಧಿಕಾರ (ಎಂಟಿಎ) ತಿಳಿಸಿದೆ.

ದಟ್ಟಣೆ ರಹಿತ ವಲಯವನ್ನು ಪ್ರವೇಶಿಸುವ ಪ್ರಯಾಣಿಕ ಮತ್ತು ಸಣ್ಣ ವಾಣಿಜ್ಯ ವಾಹನಗಳು, ಟ್ರಕ್​ಗಳು, ಬಸ್ಸುಗಳು ಮತ್ತು ಮೋಟಾರ್ ಸೈಕಲ್ ಗಳಿಗೆ ದಿನಕ್ಕೆ ಒಮ್ಮೆ ಮಾತ್ರ ಶುಲ್ಕ ವಿಧಿಸಲಾಗುವುದು ಮತ್ತು ಟ್ಯಾಕ್ಸಿಗಳು ಮತ್ತು ಬಾಡಿಗೆ ವಾಹನಗಳು ದಟ್ಟಣೆ ರಹಿತ ವಲಯಕ್ಕೆ ಪ್ರವೇಶಿಸುವ ಪ್ರತಿಯೊಂದು ಪ್ರಯಾಣಕ್ಕೂ ಶುಲ್ಕ ವಿಧಿಸಲಾಗುತ್ತದೆ.

ಸದ್ಯ ಶುಲ್ಕ ವಿಧಿಸಲು ಸ್ಥಾಪಿಸಲಾಗಿರುವ ನಿಯಂತ್ರಕ ಪ್ರಾಧಿಕಾರವು ಶೇ 40 ರಷ್ಟು ರಿಯಾಯಿತಿ ನೀಡುತ್ತಿದ್ದು, ಈ ರಿಯಾಯಿತಿಗಳನ್ನು 2028 ಮತ್ತು 2031 ರಲ್ಲಿ ಹಂತ ಹಂತವಾಗಿ ತೆಗೆದು ಹಾಕಲಾಗುವುದು ಮತ್ತು ಶುಲ್ಕಗಳನ್ನು ಹೆಚ್ಚಿಸಲಾಗುವುದು.

ಸಂಚಾರ ದಟ್ಟಣೆ ಶುಲ್ಕ ಜಾರಿಗೊಳಿಸಿದ ನಂತರ ದಟ್ಟಣೆ ರಹಿತ ವಲಯಕ್ಕೆ ಪ್ರವೇಶಿಸುವ ವಾಹನಗಳ ಸಂಖ್ಯೆ ಮತ್ತು ವಲಯದಲ್ಲಿ ವಾಹನ ಸಂಚಾರದ ದೂರ ಕ್ರಮವಾಗಿ ಶೇಕಡಾ 10 ಮತ್ತು 5 ರಷ್ಟು ಕಡಿಮೆಯಾಗಲಿವೆ ಎಂದು ಅಂದಾಜಿಸಲಾಗಿದೆ. ಈ ಶುಲ್ಕದಿಂದ ಎಂಟಿಎ ವಾರ್ಷಿಕ 1 ಬಿಲಿಯನ್ ಡಾಲರ್ ಆದಾಯ ಗಳಿಸುವ ನಿರೀಕ್ಷೆಯಿದೆ. ಎಂಟಿಎದ ವಾರ್ಷಿಕ ಬಂಡವಾಳ ವೆಚ್ಚ 15 ಬಿಲಿಯನ್ ಡಾಲರ್ ಆಗಿದ್ದು, ಹೆಚ್ಚುವರಿ ಆದಾಯವು ಈ ಯೋಜನೆಗೆ ಸಹಕಾರಿಯಾಗಲಿದೆ.

ಸಂಚಾರ ದಟ್ಟಣೆ ಶುಲ್ಕ ವಿರೋಧಿಸಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಅನೇಕರು ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿದ್ದಾರೆ. ಆದಾಗ್ಯೂ ಈ ಯೋಜನೆಯ ಜಾರಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

2007 ರಲ್ಲಿ ಆಗಿನ ಮೇಯರ್ ಮೈಕೆಲ್ ಆರ್ ಬ್ಲೂಮ್ ಬರ್ಗ್ ಸಂಚಾರ ದಟ್ಟಣೆ ಶುಲ್ಕದ ಯೋಜನೆಯನ್ನು ಜಾರಿಗೊಳಿಸಿದಾಗ ಈ ಪರಿಕಲ್ಪನೆಯು ನ್ಯೂಯಾರ್ಕ್​ನಲ್ಲಿ ಎಲ್ಲರ ಗಮನ ಸೆಳೆದಿತ್ತು. ಆದರೆ ಇದು ಅಂತಿಮವಾಗಿ ರಾಜ್ಯ ಶಾಸಕಾಂಗದ ಅನುಮೋದನೆ ಪಡೆಯವಲ್ಲಿ ವಿಫಲವಾಗಿತ್ತು. ಒಂದು ದಶಕದ ನಂತರ, ಸುರಂಗಮಾರ್ಗ ಸೇವೆಗಳ ಮೇಲೆ ಪರಿಣಾಮ ಬೀರುವ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಗವರ್ನರ್ ಆಂಡ್ರ್ಯೂ ಎಂ ಕ್ಯುಮೊ ಈ ಪ್ರಸ್ತಾಪವನ್ನು ಮರುಪರಿಶೀಲಿಸಿದರು. ಟೋಲ್ ಯೋಜನೆಯನ್ನು ಅಂತಿಮವಾಗಿ 2019 ರಲ್ಲಿ ರಾಜ್ಯ ಬಜೆಟ್​ನ ಭಾಗವಾಗಿ ಅನುಮೋದಿಸಲಾಯಿತು.

ಇದನ್ನೂ ಓದಿ : ಪಾಕಿಸ್ತಾನ: ಖೈಬರ್ ಪಖ್ತುಂಖ್ವಾದಲ್ಲಿ ನಿಲ್ಲದ ಹಿಂಸಾಚಾರ, ಜಿಲ್ಲಾಧಿಕಾರಿಗೆ ಗುಂಡೇಟು - KHYBER PAKHTUNKHWA VIOLENCE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.