ಕರ್ನಾಟಕ

karnataka

ETV Bharat / sports

ಒಲಿಂಪಿಕ್ಸ್​​ ಪದಕ ವಿಜೇತನನ್ನೇ ಸೋಲಿಸಿ ಚಿನ್ನ ಗೆದ್ದ ಕರ್ನಾಟಕದ 15 ವರ್ಷದ ಬಾಲಕ!​ - NATIONAL GAMES 2025

ರಾಷ್ಟ್ರೀಯ ಕ್ರೀಡಾಕೂಟ: 10 ಮೀಟರ್​ ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಕರ್ನಾಟಕದ 15 ವರ್ಷದ ಬಾಲಕ ಚಿನ್ನದ ಪದಕ ಗೆದ್ದಿದ್ದಾರೆ.

UTTARAKHAND NATIONAL GAME 2025  KARNATAKA SHOOTER NATIONAL GAME  NATIONAL GAMES AIR PISTOL EVENT  KARNATAKA 15 YEAR OLD BOY WINS
ಜೊನಾಥನ್​ ಆ್ಯಂಟನಿ ಮತ್ತು ಸರಬ್ಜೋತ್​ ಸಿಂಗ್ (AP and Social Media)

By ETV Bharat Sports Team

Published : Feb 3, 2025, 8:18 PM IST

National Games 2025: ಉತ್ತರಾಖಂಡದಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟ ನಡೆಯುತ್ತಿದ್ದು ಕರ್ನಾಟಕ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಏರ್​ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಜ್ಯದ 15 ವರ್ಷದ ಬಾಲಕ ಜೊನಾಥನ್​ ಆ್ಯಂಟನಿ ಚಿನ್ನ ಗೆದ್ದರು.

ಇಂದು ನಡೆದ ಪುರುಷರ 10 ಮೀಟರ್​ ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಬೆಂಗಳೂರಿನ ಕಿರಿಯ ಶೂಟರ್ ಜೊನಾಥನ್​ ಆ್ಯಂಟನಿ ಇತಿಹಾಸ ಸೃಷ್ಟಿಸಿದರು. ಕಳೆದ ವರ್ಷ ಪ್ಯಾರಿಸ್​ನಲ್ಲಿ ನಡೆದ ಒಲಿಂಪಿಕ್ಸ್​ ಶೂಟಿಂಗ್​ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ ಸರಬ್ಜೋತ್ ಸಿಂಗ್ ಮತ್ತು ಅನುಭವಿ ಶೂಟರ್​ ಸೌರಭ್ ಚೌಧರಿ ಅವರನ್ನು ಸೋಲಿಸಿ ಈ ಸಾಧನೆ ಮಾಡಿದ್ದಾರೆ.

10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಜೊನಾಥನ್, 240.7 ಅಂಕಗಳೊಂದಿಗೆ ಚಿನ್ನ ಗೆದ್ದರೆ, ರವೀಂದ್ರ ಸಿಂಗ್ 240.3 ಅಂಕಗಳೊಂದಿಗೆ ಬೆಳ್ಳಿ ಮತ್ತು ಗುರುಪ್ರೀತ್ ಸಿಂಗ್ 220.1 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಒಲಿಂಪಿಕ್ಸ್​ ಪದಕ ವಿಜೆತ ಸರಬ್ಜೋತ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

8ನೇ ತರಗತಿಯಲ್ಲೇ ಶೂಟಿಂಗ್ ಶುರು​: ಜೊನಾಥನ್​ ಆ್ಯಂಟನಿ 2022ರಲ್ಲಿ ಸಿಬಿಎಸ್‌ಇ ದಕ್ಷಿಣ ವಲಯ ರೈಫಲ್ ಶೂಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶೂಟಿಂಗ್ ವೃತ್ತಿಜೀವನ ಪ್ರಾರಂಭಿಸಿದ್ದರು. ಆಗ ಎಂಟನೇ ತರಗತಿಯಲ್ಲಿ ಓದುತ್ತಿದ್ದರು.

ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಜೊನಾಥನ್​, "ಇದು ನನ್ನ ವೃತ್ತಿಜೀವನದ ಅತೀ ದೊಡ್ಡ ಗೆಲುವು. ಒಲಿಂಪಿಕ್ಸ್​ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರತಿಭಾವಂತ ಶೂಟರ್‌ಗಳ ವಿರುದ್ಧ ಸ್ಪರ್ಧಿಸಿ ಗೆದ್ದಿರುವುದು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆ ನೀಡುತ್ತದೆ. ಇಂದು ನನ್ನ ದಿನ. ಗೆದ್ದ ಹೆಮ್ಮೆ ಇದೆ" ಎಂದರು.

ಸರಬ್ಜೋತ್​ ಸಿಂಗ್​:ಕಳೆದ ವರ್ಷ ಪ್ಯಾರಿಸ್​ನಲ್ಲಿ ನಡೆದ ಒಲಿಂಪಿಕ್ಸ್​ 10 ಮೀಟರ್​ ಏರ್​ ಪಿಸ್ತೂಲ್​ ಮಿಶ್ರ ಸ್ಪರ್ಧೆಯಲ್ಲಿ ಮನು ಭಾಕರ್​ ಮತ್ತು ಸರಬ್ಜೋತ್​ ಸಿಂಗ್​ ಕಂಚಿನ ಪದಕ ಗೆದ್ದಿದ್ದರು. ಕೊರಿಯಾ ಸ್ಪರ್ಧಿಗಳ ವಿರುದ್ಧ ನಡೆದಿದ್ದ ಕಂಚಿನ ಪದಕ ಸುತ್ತಿನ ಫೈನಲ್​ ಪಂದ್ಯದಲ್ಲಿ ಭಾರತದ ಈ ಇಬ್ಬರು ಶೂಟರ್​ಗಳು 16-10 ಅಂತರದಿಂದ ಜಯಿಸಿದ್ದರು. ಇದರೊಂದಿಗೆ 2024ರ ಒಲಿಂಪಿಕ್ಸ್​ನಲ್ಲಿ ಶೂಟಿಂಗ್‌ನಲ್ಲಿ ಭಾರತ 3 ಕಂಚು ಗೆದ್ದುಕೊಂಡಿತ್ತು.

ಇದನ್ನೂ ಓದಿ:ಭಾರತ-ಇಂಗ್ಲೆಂಡ್​ ಏಕದಿನ ಸರಣಿ: 15 ತಿಂಗಳ ಬಳಿಕ ತಂಡ ಸೇರಿದ ಸ್ಪೋಟಕ ಬ್ಯಾಟರ್!

ABOUT THE AUTHOR

...view details