ಕರ್ನಾಟಕ

karnataka

ETV Bharat / spiritual

ಪ್ರಣಯ ಸಂಗಾತಿಯಿಂದ ಅಚ್ಚರಿಯ ಉಡುಗೊರೆ: ಈ ವಾರ ನಿಮ್ಮ ರಾಶಿಯಲ್ಲೇನಿದೆ? - Weekly Horoscope - WEEKLY HOROSCOPE

ಆಗಸ್ಟ್ 4ರಿಂದ 10ರವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ...

ವಾರದ ರಾಶಿ ಭವಿಷ್ಯ
ವಾರದ ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Aug 4, 2024, 7:13 AM IST

ಮೇಷ:ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ನಿಮ್ಮ ಸಾಪ್ತಾಹಿಕ ಕೆಲಸಗಳು ವೇಳಾಪಟ್ಟಿಯಂತೆಯೇ ನಡೆಯಲಿವೆ. ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಅಗತ್ಯ ಯಶಸ್ಸನ್ನು ಸಾಧಿಸಲಿದ್ದೀರಿ. ವಾರದ ನಡುವೆ ಏನಾದರೂ ಧನಾತ್ಮಕ ಸುದ್ದಿ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಕಿರಿಯರಿಂದ ಸಂಪೂರ್ಣ ನೆರವು ದೊರೆಯಲಿದೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಈ ಅವಧಿಯಲ್ಲಿ ನಿಮ್ಮ ಹಣಕಾಸಿನ ಕುರಿತು ಎಚ್ಚರಿಕೆ ವಹಿಸಿ. ಯಾವುದೇ ಯೋಜನೆ ಅಥವಾ ವ್ಯವಹಾರದಲ್ಲಿ ಜಾಣ್ಮೆಯಿಂದ ಹೂಡಿಕೆ ಮಾಡಿ. ಈ ಸವಾಲಿನ ಸಂದರ್ಭಗಳಲ್ಲಿ ಪ್ರೀತಿಪಾತ್ರರು ಮತ್ತು ಅಪರಿಚಿತರ ನಡುವಿನ ಅಂತರವನ್ನು ಸುಲಭವಾಗಿ ಗುರುತಿಸಲಿದ್ದೀರಿ. ಉದ್ಯೋಗ, ವ್ಯವಹಾರ, ಅಥವಾ ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಸವಾಲು ಎದುರಾದರೂ ಸಹ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿಮ್ಮ ಜೀವನ ಸಂಗಾತಿಯ ನೆರವು ನಿಮಗೆ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ಪ್ರೇಮ ಸಂಬಂಧವನ್ನು ಗಂಭೀರವಾಗಿ ಪರಿಗಣಿಸಿ ಹಾಗೂ ನಿಮ್ಮ ಸಂಗಾತಿಯ ಅನಿವಾರ್ಯತೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ.

ವೃಷಭ:ಈ ವಾರವು ಮಂಗಳದಾಯಕ ಎನಿಸಲಿದೆ. ಮನೆಯಲ್ಲಿ ಮಂಗಳದಾಯಕ ಕೆಲಸವು ಜರುಗುವ ಮೂಲಕ ಪ್ರಾರಂಭಗೊಳ್ಳಲಿದ್ದು, ನಿಮ್ಮ ಸಂಬಂಧಿಗಳಿಂದಲೂ ಇದಕ್ಕೆ ಒಳ್ಳೆಯ ನೆರವು ದೊರೆಯಲಿದೆ. ನಿಮ್ಮ ಆರೋಗ್ಯವು ಸಹಜ ಸ್ಥಿತಿಯಲ್ಲಿ ಇರಲಿದೆ. ನೀವು ಚೈತನ್ಯದಿಂದ ಮುಂದುವರಿಯಲಿದ್ದೀರಿ. ಈ ಅವಧಿಯಲ್ಲಿ ನೀವು ಪುಣ್ಯಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ವಾರದ ಆರಂಭಿಕ ದಿನದಿಂದಲೇ ನೀವು ಸಂತಸದಾಯಕ ಚಟುವಟಿಕೆಗಳಿಗಾಗಿ ಖರ್ಚುವೆಚ್ಚ ಉಂಟಾಗಬಹುದು. ನೀವು ದೀರ್ಘ ಕಾಲದಿಂದ ಭೂಮಿ, ಕಟ್ಟಡ ಅಥವಾ ವಾಹನವನ್ನು ಖರೀದಿಸಲು ಯೋಜಸಿದ್ದರೆ, ಈ ವಾರದಲ್ಲಿ ನಿಮ್ಮ ಕನಸು ನನಸಾಗಲಿದೆ. ಪ್ರಣಯ ಸಂಬಂಧದಲ್ಲಿರುವವರಿಗೆ ಈ ವಾರವು ಅದೃಷ್ಟದಿಂದ ಕೂಡಿದೆ. ನಿಮ್ಮ ಪ್ರಣಯ ಸಂಗಾತಿಯ ಜೊತೆಗೆ ಆಳವಾದ ಸಂಬಂಧವನ್ನು ಬೆಸೆಯಲಿದ್ದೀರಿ. ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳ ಕಾರಣ ವಾರದ ದ್ವಿತೀಯಾರ್ಧದಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ನಿಮ್ಮ ಹಿರಿಯರು ನಿಮ್ಮನ್ನು ಅಭಿನಂದಿಸಲಿದ್ದಾರೆ.

ಮಿಥುನ: ಈ ವಾರದಲ್ಲಿ ಮಿಥುನ ರಾಶಿಯವರ ಬದುಕಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ದೊರೆಯಲಿದೆ. ನಿಮ್ಮ ಕೆಲಸ, ವ್ಯವಹಾರ ಅಥವಾ ಬದುಕಿನ ಇತರ ಯಾವುದೇ ಪ್ರಮುಖ ಗುರಿ ಇರಲಿ, ಮನೆಯಲ್ಲಿ ಮತ್ತು ಹೊರಗೆ ಎಲ್ಲರ ಬೆಂಬಲವು ನಿಮಗೆ ದೊರೆಯಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಆದರೆ ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ವಾರದ ಆರಂಭದಲ್ಲಿ ಉದ್ಯೋಗದಲ್ಲಿರುವವರಿಗೆ ಸಾಕಷ್ಟು ಅವಕಾಶ ಲಭಿಸಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ನಿಮ್ಮ ಪ್ರಣಯ ಸಂಗಾತಿಯಿಂದ ಅಚ್ಚರಿಯ ಉಡುಗೊರೆಯೊಂದು ನಿಮಗೆ ದೊರೆಯಲಿದೆ. ವೈವಾಹಿಕ ಜೀವನವು ಸಂತಸದಿಂದ ಮುಂದುವರಿಯಲಿದೆ. ವಾರದ ಕೊನೆಗೆ ಮಕ್ಕಳ ಕುರಿತು ಏನಾದರೂ ಶುಭ ಸುದ್ದಿ ದೊರೆಯಲಿದೆ. ಇದು ನಿಮ್ಮ ಸಂತಸವನ್ನು ಇಮ್ಮಡಿಗೊಳಿಸಲಿದೆ. ಬಾಕಿ ಉಳಿದಿರುವ ಅಥವಾ ದೀರ್ಘ ಕಾಲಕ್ಕೆ ಮುಂದೂಡಲಾದ ಯೋಜನೆಗಳು ಹಿತೈಷಿಗಳ ನೆರವಿನಿಂದ ಮುಂದುವರಿಯಲಿವೆ.

ಕರ್ಕಾಟಕ: ಈ ವಾರದಲ್ಲಿ ನಿರೀಕ್ಷಿತ ಸಾಧನೆಯನ್ನು ಮಾಡುವುದಕ್ಕಾಗಿ, ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರು ತಮ್ಮ ಆಲಸ್ಯವನ್ನು ದೂರ ಮಾಡಿ ಕಠಿಣ ಶ್ರಮ ಪಡಬೇಕು. ಇಲ್ಲದಿದ್ದರೆ ಅವಕಾಶವು ಕೈತಪ್ಪಿ ಹೋಗಬಹುದು. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಪ್ರೇಮಿಯ ಜತೆಗಿನ ಸಂಬಂಧವು ಚೆನ್ನಾಗಿರಲಿದೆ. ನಿಮ್ಮ ಕುಟುಂಬದ ಸದಸ್ಯರ ನಡುವಿನ ಸಂಬಂಧದಲ್ಲಿ ಸಾಕಷ್ಟು ಸುಧಾರಣೆ ಉಂಟಾಗಲಿದೆ. ನಿಮ್ಮ ಪ್ರೇಮಿಯ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವನ್ನು ಹೊಂದಿದ್ದಲ್ಲಿ, ಯಾರಾದರೂ ಗೆಳತಿಯ ಸಹಾಯದಿಂದ ಈ ಭಿನ್ನಾಭಿಪ್ರಾಯವನ್ನು ನೀವು ಬಗೆಹರಿಸಬಹುದು. ನಿಮ್ಮ ಪ್ರೇಮ ಸಂಬಂಧದಲ್ಲಿ ಇನ್ನೊಮ್ಮೆ ಬಲ ಕಾಣಿಸಿಕೊಳ್ಳಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ. ಋತುಮಾನಕ್ಕೆ ಸಂಬಂಧಿಸಿದ ರೋಗಗಳ ಕುರಿತು ಎಚ್ಚರಿಕೆ ವಹಿಸಿ. ಈ ಅವಧಿಯಲ್ಲಿ ಗೆಳೆಯ, ಹಿತೈಷಿ ಅಥವಾ ಪ್ರಣಯ ಸಂಗಾತಿಯ ನೆರವಿನಿಂದ ಯಾವುದಾದರೂ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ನಿಮಗೆ ಸಾಧ್ಯವಾಗಲಿದೆ.

ಸಿಂಹ: ಈ ಅವಧಿಯಲ್ಲಿ ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಾಹಸಗಳನ್ನು ನೀವು ಆನಂದಿಸಲಿದ್ದು ಈ ನಿಟ್ಟಿನಲ್ಲಿ ಯಶಸ್ಸನ್ನೂ ಗಳಿಸಲಿದ್ದೀರಿ. ಕುಟುಂಬದ ಜೊತೆಗೆ ಉಂಟಾಗಿರುವ ಭಿನ್ನಾಭಿಪ್ರಾಯವು ನಿಮ್ಮ ಗೆಳೆಯರ ಸಹಾಯದಿಂದ ವಾರದ ನಡುವೆ ಬಗೆಹರಿಯಲಿದೆ. ಅವರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ಈ ಅವಧಿಯಲ್ಲಿ ಕೌಟುಂಬಿಕ ಜವಾಬ್ದಾರಿಯು ನಿಮ್ಮ ಹೆಗಲ ಮೇಲೆ ಬರಬಹುದು. ಇದೆಲ್ಲದರ ನಡುವೆ ಋತುಮಾನದ ಬದಲಾವಣೆಗಳು ಅಥವಾ ದೀರ್ಘಕಾಲೀನ ರೋಗವೊಂದು ಉಲ್ಬಣಗೊಳ್ಳುವ ಕಾರಣ ದೈಹಿಕ ನೋವು ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ಈ ವಾರದಲ್ಲಿ ನಿಮ್ಮ ಪ್ರಣಯ ಸಂಬಂಧಿಯೊಂದಿಗೆ ಗಟ್ಟಿಯಾದ ಬಂಧವನ್ನು ಆನಂದಿಸಲಿದ್ದೀರಿ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಪೋಷಕರು ಸೇರಿದಂತೆ ನಿಮ್ಮ ಎಲ್ಲಾ ಹಿರಿಯರ ಸಂಪೂರ್ಣ ಆಶೀರ್ವಾದವು ನಿಮಗೆ ದೊರೆಯಲಿದೆ. ಯುವಜನರು ತಮ್ಮ ಹೆಚ್ಚಿನ ಸಮಯವನ್ನು ಇತರ ಚಟುವಟಿಕೆಗಳ ಜೊತೆಗೆ ಮೋಜು ಮತ್ತು ವಿಹಾರದಲ್ಲಿ ಕಳೆಯಲಿದ್ದಾರೆ. ದ್ವಿತೀಯಾರ್ಧವು ಅಸ್ತವ್ಯಸ್ಥತೆ ಮತ್ತು ದಣಿವಿನಿಂದ ಕೂಡಿರಲಿದೆ.

ಕನ್ಯಾ: ಈ ವಾರದಲ್ಲಿ ಸಹೋದ್ಯೋಗಿಗಳೊಂದಿಗೆ ವರ್ತಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ನಿಮ್ಮ ಹಿರಿಯರು ಮತ್ತು ಕಿರಿಯರೊಂದಿಗೆ ಸೇರಿಕೊಂಡು ನಿಮ್ಮ ವಿರುದ್ಧ ಅವರು ಪ್ರಚೋದಿಸಬಹುದು. ಅಥವಾ ನಿಮ್ಮ ಗುರಿಯಿಂದ ಗಮನವನ್ನು ಬೇರೆಡೆ ಸೆಳೆಯಲು ಅವರು ಯತ್ನಿಸಬಹುದು. ಈ ಸಮಸ್ಯೆಯನ್ನು ಬಗೆಹರಿಸಲು ಮನೆಯ ಹಿರಿಯ ವ್ಯಕ್ತಿಯೊಬ್ಬರ ನೆರವಿನ ಅಗತ್ಯವಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದಿಂದ ಬೇರೆಡೆಗೆ ಗಮನ ಹರಿಸಬಹುದು. ಯಾವುದಾದರೂ ಹುದ್ದೆ ಅಥವಾ ಉನ್ನತ ಜವಾಬ್ದಾರಿಗಾಗಿ ಕಾಯುತ್ತಿರುವ ರಾಜಕಾರಣಿಗಳಿಗೆ ಹೊಸ ಅವಕಾಶ ಲಭಿಸಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಪ್ರಣಯ ಸಂಬಂಧದಲ್ಲಿ ಪ್ರೀತಿ ಮತ್ತು ಸಾಮರಸ್ಯ ನೆಲೆಸಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಬದುಕಿನ ಜಂಜಾಟದ ನಡುವೆ ನಿಮ್ಮ ಆರೋಗ್ಯದ ಕುರಿತು ನೀವು ಸಾಕಷ್ಟು ಕಾಳಜಿ ವಹಿಸಬೇಕು. ಈ ವಾರದ ಕೊನೆಗೆ ವ್ಯಾಪಾರೋದ್ಯಮಿಗಳು ತಮ್ಮ ಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಲಿದ್ದಾರೆ.

ತುಲಾ: ಈ ರಾಶಿಯಲ್ಲಿ ಜನಿಸಿದವರು ಈ ವಾರದಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು. ಏಕೆಂದರೆ ಅವರ ಮಾತುಗಳು ಪರಿಶ್ರಮಕ್ಕೆ ಇಂಬು ನೀಡಬಹುದು ಅಥವಾ ಹಾಳುಗೆಡವಬಹುದು. ವಾರದ ನಡುವೆ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ತಿರದ ಅಥವಾ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ಈ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಮತ್ತು ಬೆಲೆಬಾಳುವ ವಸ್ತುಗಳ ಕುರಿತು ಎಚ್ಚರಿಕೆ ವಹಿಸಬೇಕು. ತಪ್ಪು ಗ್ರಹಿಕೆಯು ನಿಮ್ಮ ಮತ್ತು ನಿಮ್ಮ ಪ್ರೇಮಿಯ ನಡುವಿನ ಅಂತರವನ್ನು ಹೆಚ್ಚಿಸಬಹುದು. ಭಾವನೆಗಳನ್ನು ಆಧರಿಸಿ ಪ್ರೇಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವೈವಾಹಿಕ ಸಂಬಂಧದಲ್ಲಿ ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ. ವಾರದ ದ್ವಿತೀಯಾರ್ಧದಲ್ಲಿ, ಯಾವುದೇ ಹಾಸ್ಯವನ್ನು ಮಾಡಬೇಡಿ. ಅಥವಾ ಕೆಲಸದ ಸ್ಥಳದಲ್ಲಿ ನಿಮಗೆ ಸಮಸ್ಯೆಯನ್ನುಂಟು ಮಾಡುವ ಯಾವುದೇ ಕೆಲಸವನ್ನು ಮಾಡಬೇಡಿ. ಈ ಅವಧಿಯಲ್ಲಿ, ನಿಮ್ಮ ವೃತ್ತಿಯ ಎಲ್ಲಾ ವಿಭಾಗಗಳಿಗೆ ಆದ್ಯತೆ ನೀಡಿರಿ.

ವೃಶ್ಚಿಕ: ಈ ವಾರವನ್ನು ತುಂಬಾ ಸಂತಸದಿಂದ ಕಳೆಯಲಿದ್ದಾರೆ. ಉದ್ಯೋಗದಲ್ಲಿರುವವರಿಗೆ ತಮ್ಮ ಆಯ್ಕೆಯ ಸ್ಥಳಕ್ಕೆ ವರ್ಗಾವಣೆ ಅಥವಾ ಬಡ್ತಿ ಉಂಟಾಗಬಹುದು. ಆದಾಯದ ಹೆಚ್ಚುವರಿ ಮೂಲಗಳು ತೆರೆದುಕೊಳ್ಳಲಿದ್ದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆ ಮಾಡಲಾದ ಹೂಡಿಕೆಗಳಿಗೆ ಒಳ್ಳೆಯ ಲಾಭ ದೊರೆಯಲಿದೆ. ನ್ಯಾಯಾಲಯದಲ್ಲಿ ಯಾವುದೇ ಪ್ರಕರಣವು ಬಾಕಿ ಇದ್ದಲ್ಲಿ, ತೀರ್ಪು ನಿಮ್ಮ ಪರವಾಗಿ ಬರಲಿದೆ. ನಿಮ್ಮ ಪ್ರೇಮ ಸಂಗಾತಿಯ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಸಿಗಬಹುದು. ಈ ವಾರದಲ್ಲಿ ಹಳೆಯ ಗೆಳೆಯರನ್ನು ನೀವು ಭೇಟಿಯಾಗಬಹುದು. ಅವರೊಂದಿಗೆ ಸೇರಿಕೊಂಡು ಹಳೆಯ ನೆನಪುಗಳನ್ನು ನೀವು ಮರುಕಳಿಸಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಪ್ರೇಮಿಯಿಂದ ಅಚ್ಚರಿಯ ಉಡುಗೊರೆಯೊಂದನ್ನು ಪಡೆಯುವ ಸಾಧ್ಯತೆ ಇದೆ. ಆರೋಗ್ಯವು ಎಂದಿನಂತೆ ಇರಲಿದೆ. ದ್ವಿತೀಯಾರ್ಧದಲ್ಲಿ ಮಗುವಿಗೆ ಸಂಬಂಧಿಸಿದ ಯಾವುದಾದರೂ ಪ್ರಮುಖ ಒತ್ತಡವು ನಿವಾರಣೆಗೊಳ್ಳುವುದರಿಂದ ನೀವು ನಿರಾಳತೆಯನ್ನು ಅನುಭವಿಸಲಿದ್ದೀರಿ. ವ್ಯವಹಾರದಲ್ಲಿ ಅಗತ್ಯ ಯಶಸ್ಸು ದೊರೆಯಲಿದೆ.

ಧನು: ವಾರದ ಆರಂಭದಲ್ಲಿ ಅನಿಯಮಿತ ಆಹಾರ ಕ್ರಮದ ಕಾರಣ ಅಥವಾ ದೀರ್ಘಕಾಲೀನ ರೋಗವು ಕಾಣಿಸಿಕೊಳ್ಳುವ ಕಾರಣ ನೀವು ದೈಹಿಕ ನೋವನ್ನು ಅನುಭವಿಸಬಹುದು. ವಾರದ ಮಧ್ಯದಲ್ಲಿ ನೀವು ಸಾಕಷ್ಟು ಚಟುವಟಿಕೆಯಿಂದ ಕೂಡಿರಬಹುದು. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸಂಪೂರ್ಣ ಫಲ ದೊರೆಯಲಿದೆ. ಪ್ರಣಯ ಸಂಬಂಧದಲ್ಲಿರುವವರಿಗೆ ಈ ವಾರವು ಅದೃಷ್ಟದಿಂದ ಕೂಡಿದೆ. ಒತ್ತಡದ ಸಮಯದಲ್ಲಿ ನಿಮ್ಮ ಪ್ರಣಯ ಸಂಗಾತಿಯು ನಿಮಗೆ ರಕ್ಷಣೆ ಒದಗಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯ ಪ್ರಮುಖ ಸಾಧನೆಯು ನಿಮ್ಮ ಪಾಲಿಗೆ ಗೌರವವನ್ನು ಗಳಿಸಿ ಕೊಡಲಿದೆ. ಸರಿಯಾದ ಆಹಾರ ಕ್ರಮ ಮತ್ತು ದಿನಚರಿಯನ್ನು ಪಾಲಿಸಿ. ವಾರದ ಕೊನೆಗೆ ಏನಾದರೂ ಶುಭ ಸುದ್ದಿ ಬರಲಿದೆ. ಗೃಹಿಣಿಯರು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದಾರೆ. ಈ ಅವಧಿಯಲ್ಲಿ ನಿಮ್ಮ ಕೆಲಸವನ್ನು ಸಕಾಲದಲ್ಲಿ ಮುಗಿಸುವುದಕ್ಕಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಸರಿಯಾಗಿ ನಿಭಾಯಿಸಬೇಕು.

ಮಕರ: ಈ ವಾರದಲ್ಲಿ ಮಕರ ರಾಶಿಯವರು ತಮ್ಮ ಪ್ರಯತ್ನಕ್ಕೆ ತಕ್ಕುದಾದ ಫಲವನ್ನು ಪಡೆಯಲಿದ್ದಾರೆ. ವಾರದ ಆರಂಭಿಕ ದಿನಗಳಲ್ಲಿ ನೀವು ಈ ಹಿಂದೆ ಮಾಡಿದ ಕೆಲಸಗಳಿಗೆ ಮನ್ನಣೆ ದೊರೆಯಲಿದೆ. ಹಿರಿಯರು ಮತ್ತು ಕಿರಿಯರು ನಿಮ್ಮ ಕೆಲಸವನ್ನು ಶ್ಲಾಘಿಸಲಿದ್ದಾರೆ. ಕಳೆದ ವಾರದಿಂದ ನಿಮ್ಮನ್ನು ಕಾಡುತ್ತಿದ್ದ ಕೌಟುಂಬಿಕ ಸಮಸ್ಯೆಗಳು ಈ ವಾರದಲ್ಲಿ ಬಗೆಹರಿಯಲಿವೆ. ಉದ್ಯೋಗದಲ್ಲಿರುವವರಿಗೆ ಆದಾಯದ ಹೆಚ್ಚುವರಿ ಮೂಲಗಳು ದೊರೆಯಬಹುದು. ನಿಮ್ಮ ಒಟ್ಟು ಸಂಪತ್ತಿನಲ್ಲಿ ವೃದ್ಧಿಯಾಗಲಿದೆ. ಪ್ರೇಮ ಸಂಬಂಧದಲ್ಲಿ ಅನುರಾಗ ನೆಲೆಸಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ದೂರದ ಅಥವಾ ಹತ್ತಿರದ ಸ್ಥಳಕ್ಕೆ ನೀವು ಪ್ರಯಾಣಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಅದ್ಭುತ ಸುದ್ದಿಯನ್ನು ಪಡೆಯಲಿದ್ದಾರೆ. ವಾರದ ಕೊನೆಗೆ ಪ್ರೀತಿಪಾತ್ರರೊಬ್ಬರನ್ನು ನೀವು ಭೇಟಿಯಾಗಲಿದ್ದು, ದೀರ್ಘ ಕಾಲದಿಂದ ಬಾಕಿ ಉಳಿಸಿರುವ ಕೆಲಸವನ್ನು ಪೂರ್ಣಗೊಳಿಸಲು ಅವರಿಂದ ನೆರವು ದೊರೆಯಲಿದೆ.

ಕುಂಭ: ಈ ವಾರದ ಆರಂಭಿಕ ದಿನಗಳು ಸವಾಲಿನಿಂದ ಕೂಡಿರಲಿವೆ. ಆದರೆ, ನಿಮ್ಮ ಜಾಣ್ಮೆ, ಒಳನೋಟ ಮತ್ತು ಧೈರ್ಯದ ಮೂಲಕ ಯಾವುದೇ ಸನ್ನಿವೇಶವನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುತ್ತದೆ. ವಿಶೇಷವೆಂದರೆ, ಯಾವುದೇ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ನಿಮ್ಮ ಆತ್ಮೀಯ ಗೆಳೆಯರು ಮತ್ತು ಸಂಬಂಧಿಗಳ ನೆರವು ನಿಮಗೆ ದೊರೆಯಲಿದೆ. ಈ ಅವಧಿಯಲ್ಲಿ, ನಿಮ್ಮ ವರ್ಚಸ್ಸನ್ನು ಹಾಳುಗೆಡವಲು ಯತ್ನಿಸುತ್ತಿರುವ ಗೌಪ್ಯ ಶತ್ರುವಿನ ಕುರಿತು ನೀವು ಎಚ್ಚರಿಕೆ ವಹಿಸಬೇಕು. ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಿತೈಷಿಗಳ ಸಲಹೆಯನ್ನು ಪಡೆಯಿರಿ. ವೃತ್ತಿಯ ವಿಚಾರದಲ್ಲಿ ಇದು ಅದ್ಭುತ ಸಮಯವೆನಿಸಲಿದೆ. ಪ್ರೇಮ ಸಂಬಂಧದಲ್ಲಿ ಪರಸ್ಪರ ನಂಬಿಕೆ ಮತ್ತು ಅನ್ಯೋನ್ಯತೆಯು ಬೆಳೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ನೀವು ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ದೀರ್ಘ ಕಾಲದಲ್ಲಿ ತಮ್ಮ ವೃತ್ತಿಯನ್ನು ಬದಲಾಯಿಸಲು ಇಚ್ಛಿಸುತ್ತಿರುವವರು ಈ ಬಾರಿ ಉತ್ತಮ ಕೊಡುಗೆಯನ್ನು ಪಡೆಯಲಿದ್ದಾರೆ. ಅವರು ವ್ಯವಹಾರದಲ್ಲಿಯೂ ಉತ್ತಮ ಲಾಭವನ್ನು ಪಡೆಯಲಿದ್ದಾರೆ.

ಮೀನ: ಇಡೀ ವಾರದಲ್ಲಿ ನಿಮಗೆ ಪ್ರೇಮ ಮತ್ತು ಅದೃಷ್ಟದ ನೆರವು ದೊರೆಯಲಿದೆ. ನೀವು ಈ ವಾರದ ಆರಂಭದಲ್ಲಿ ಅದ್ಭುತ ಸಾಧನೆಯೊಂದನ್ನು ಮಾಡಲಿದ್ದು, ಮನೆಯಲ್ಲಿ ಸಂತಸದ ವಾತಾವರಣವನ್ನು ಸೃಷ್ಟಿಸಲಿದ್ದೀರಿ. ವ್ಯವಹಾರದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿದ್ದು, ಅಗತ್ಯ ವಿಸ್ತರಣೆಯು ಉಂಟಾಗಲಿದೆ. ಮಕ್ಕಳಿಗೆ ಸಂಬಂಧಿಸಿದ ಯಾವುದಾದರೂ ಪ್ರಮುಖ ಸಾಧನೆಯು ಉನ್ನತ ಮಟ್ಟದ ಗೌರವವನ್ನು ತಂದು ಕೊಡಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ಯಾರಿಗಾದರೂ ನಿಮ್ಮ ಅನುರಾಗವನ್ನು ವ್ಯಕ್ತಪಡಿಸುವ ಇಚ್ಛೆ ಇದ್ದಲ್ಲಿ, ಈ ರೀತಿ ಮಾಡಲು ಇದು ಸಕಾಲ. ಇದೇ ವೇಳೆ ಪ್ರಸ್ತುತ ಪ್ರಣಯ ಸಂಬಂಧದಕ್ಕೆ ಬಲ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಆರೋಗ್ಯವು ಎಂದಿನಂತೆ ಇರಲಿದೆ. ವಾರದ ದ್ವಿತೀಯಾರ್ಧದಲ್ಲಿ, ಯಾವುದಾದರೂ ಏಕಾಂತ ಸ್ಥಳಕ್ಕೆ ಭೇಟಿ ನೀಡಿ ಒಬ್ಬಂಟಿಯಾಗಿ ಸಮಯ ಕಳೆಯಲು ನೀವು ಇಚ್ಚಿಸಲಿದ್ದೀರಿ. ಈ ಅವಧಿಯಲ್ಲಿ, ನಿಮ್ಮ ಮನಸ್ಸು ಧಾರ್ಮಿಕತೆ, ಅಧ್ಯಾತ್ಮಿಕತೆ ಮತ್ತು ಸಾಮಾಜಿಕ ಕಾರ್ಯದ ಚಿಂತನೆಗಳಿಂದ ತುಂಬಿರಲಿದೆ.

ABOUT THE AUTHOR

...view details