ಕರ್ನಾಟಕ

karnataka

ETV Bharat / spiritual

ವಾರದ ರಾಶಿ ಭವಿಷ್ಯ: ಉದ್ಯೋಗದಲ್ಲಿ ಬಡ್ತಿ, ದೈನಂದಿನ ಆದಾಯದಲ್ಲಿ ಹೆಚ್ಚಳ - ರಾಶಿ ಭವಿಷ್ಯ

ಈ ವಾರ ನಿಮ್ಮ ರಾಶಿ ಭವಿಷ್ಯದಲ್ಲಿ ಲಾಭ, ನಷ್ಟ, ಆರೋಗ್ಯ, ಉದ್ಯೋಗ, ಶಿಕ್ಷಣ ಹೀಗಿರಲಿದೆ.

ವಾರದ ರಾಶಿ ಭವಿಷ್ಯ: ಉದ್ಯೋಗದಲ್ಲಿ ಬಡ್ತಿ, ದೈನಂದಿನ ಆದಾಯದಲ್ಲಿ ಹೆಚ್ಚಳ
ವಾರದ ರಾಶಿ ಭವಿಷ್ಯ: ಉದ್ಯೋಗದಲ್ಲಿ ಬಡ್ತಿ, ದೈನಂದಿನ ಆದಾಯದಲ್ಲಿ ಹೆಚ್ಚಳ

By ETV Bharat Karnataka Team

Published : Mar 3, 2024, 5:38 AM IST

ಮೇಷ:ಮೇಷ ರಾಶಿಯವರ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಕುಟುಂಬದ ಪ್ರತಿಯೊಂದು ಸದಸ್ಯರು ಒಟ್ಟಿಗೆ ಕೆಲಸ ಮಾಡಲಿದ್ದಾರೆ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯೊಂದಿಗೆ ಸಂತಸದ ಬದುಕನ್ನು ಸಾಗಿಸಲಿದ್ದಾರೆ. ಆದರೆ ಏನಾದರೂ ಕಾರಣಕ್ಕಾಗಿ ಅವರ ನಡುವೆ ಒತ್ತಡ ಕಾಣಿಸಿಕೊಳ್ಳಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಹಣಕಾಸಿನ ಲಾಭ ಉಂಟಾಗಬಹುದು. ನಿಮ್ಮ ಬಜೆಟ್‌ ಅನ್ನು ನೀವು ಸಿದ್ಧಪಡಿಸಲಿದ್ದು ನಿಮ್ಮ ಎಲ್ಲಾ ವೆಚ್ಚಗಳನ್ನು ನಿಭಾಯಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ವಿದೇಶದಲ್ಲಿ ಶಿಕ್ಷಣ ಪಡೆಯಲು ನಿಮಗೆ ಅವಕಾಶ ಲಭಿಸಲಿದೆ. ನೀವು ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಲಿದ್ದೀರಿ. ತಾಯಿಯ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಿರಿ. ನೀವು ಆಸ್ತಿಯನ್ನು ಖರೀದಿಸಬಹುದು. ಇದರಿಂದ ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಲಾಭ ದೊರೆಯಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ತರುವುದಕ್ಕಾಗಿ ನಿಮ್ಮ ದಿನಚರಿಯಲ್ಲಿ ನೀವು ಬೆಳಗ್ಗಿನ ನಡಿಗೆ, ಯೋಗ ಮತ್ತು ಧ್ಯಾನವನ್ನು ಸೇರಿಸಲಿದ್ದೀರಿ.

ವೃಷಭ: ಈ ವಾರವು ನಿಮ್ಮ ಪಾಲಿಗೆ ಒಳ್ಳೆಯದು. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಲಿದೆ. ಆದರೆ ನಿಮ್ಮ ಜಾಣ್ಮೆಯಿಂದ ಅದನ್ನು ನಿವಾರಿಸಲಿದ್ದೀರಿ. ನೀವು ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ ಇದು ಸಕಾಲ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಉದ್ಯೋಗದಲ್ಲಿರುವವರು ತಮ್ಮ ಹಳೆಯ ಕೆಲಸವನ್ನೇ ಮುಂದುವರಿಸುವುದು ಒಳ್ಳೆಯದು. ವ್ಯವಹಾರದಲ್ಲಿ ಹೊಸ ವಿಧಾನಗಳನ್ನು ಅಳವಡಿಸುವ ಮೂಲಕ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಆರೋಗ್ಯದಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನೀವು ಒಳ್ಳೆಯ ವೈದ್ಯರೊಬ್ಬರನ್ನು ಭೇಟಿಯಾಗುವುದು ಒಳ್ಳೆಯದು. ಅಧಿಕ ಖರ್ಚುವೆಚ್ಚ ಉಂಟಾಗಬಹುದು. ಪ್ರಯಾಣಕ್ಕಾಗಿ ನೀವು ಹಣ ವೆಚ್ಚ ಮಾಡಬಹುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಕುಟುಂಬದ ಎಲ್ಲಾ ಸದಸ್ಯರು ಧಾರ್ಮಿಕ ಸ್ಥಳಕ್ಕೆ ಒಟ್ಟಿಗೆ ಭೇಟಿ ನೀಡಲು ಯೋಜನೆ ರೂಪಿಸಲಿದ್ದಾರೆ.

ಮಿಥುನ: ಈ ವಾರವು ನಿಮಗೆ ಅತ್ಯುತ್ತಮ. ನಿಮ್ಮ ಕೌಟುಂಬಿಕ ಬದುಕನ್ನು ಗರಿಷ್ಠ ಪ್ರಮಾಣದಲ್ಲಿ ಆನಂದಿಸಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಕುಟುಂಬದ ಸದಸ್ಯರ ಜೊತೆಗೆ ಎಲ್ಲಿಗಾದರೂ ಭೇಟಿ ನೀಡಲು ನೀವು ಯೋಜನೆ ರೂಪಿಸಲಿದ್ದೀರಿ. ನಿಮ್ಮ ಮನಸ್ಸಿನ ಸಮಾಧಾನಕ್ಕಾಗಿ ಒಂದಷ್ಟು ಸಮಯವನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಳೆಯಲಿದ್ದೀರಿ. ದೂರದ ಸಂಬಂಧಿಯೊಬ್ಬರ ಸಹಾಯದಿಂದ ನಿಮ್ಮ ಸಹೋದರನ ಮದುವೆಗೆ ಎದುರಾಗಿದ್ದ ಅಡಚಣೆಗಳು ದೂರಗೊಳ್ಳಲಿವೆ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಕುಟುಂಬದ ಪ್ರತಿಯೊಂದು ಸದಸ್ಯರು ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ನೀವು ಉದ್ಯೋಗದಲ್ಲಿ ಭಡ್ತಿ ಪಡೆಯಲಿದ್ದೀರಿ. ವ್ಯವಹಾರದಲ್ಲಿಯೂ ನೀವು ಬಾಕಿ ಉಳಿದಿರುವ ಯೋಜನೆಗಳನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ನಿಮ್ಮ ಪ್ರೇಮ ಜೀವನವು ಸಾಂಗವಾಗಿ ಮುಂದುವರಿಯಲಿದೆ. ನಿಮ್ಮ ಪ್ರೇಮಿಗೆ ನೀವು ಉಡುಗೊರೆಯನ್ನು ನೀಡಬಹುದು ಅಥವಾ ಪ್ರಣಯಭರಿತ ಡಿನ್ನರ್​ಗೆ ಹೋಗಬಹುದು.

ಕರ್ಕಾಟಕ: ಈ ವಾರದಲ್ಲಿ ಸಾಕಷ್ಟು ಸಂತಸವನ್ನು ಅನುಭವಿಸಲಿದ್ದೀರಿ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಂತೃಪ್ತಿಯ ವಾತಾವರಣ ಇರಲಿದೆ. ಇಂದು ನಿಮ್ಮ ಜೀವನ ಸಂಗಾತಿಯ ಪ್ರಾಮುಖ್ಯತೆಯನ್ನು ಅರಿತುಕೊಳ್ಳಲಿದ್ದೀರಿ ಹಾಗೂ ಅವರ ಸಂತಸಕ್ಕೆ ಗಮನ ನೀಡಲಿದ್ದೀರಿ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ಪ್ರೇಮ ಸಂಗಾತಿಯನ್ನು ಭೇಟಿಯಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ನೀವು ಯಾವುದಾದರೂ ಸ್ಪರ್ಧೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದರೆ, ನೀವು ಕಠಿಣ ಶ್ರಮ ಪಡಬೇಕು. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಕೆಲಸದ ಬದಲಾವಣೆಯ ಕುರಿತು ಗೊಂದಲ ಉಂಟಾಗಬಹುದು. ವ್ಯವಹಾರದಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನಿಮ್ಮಲ್ಲಿ ಚೈತನ್ಯವನ್ನು ಕಾಪಾಡುವುದಕ್ಕಾಗಿ ನಿಮ್ಮ ದಿನಚರಿಯಲ್ಲಿ ಬೆಳಗ್ಗಿನ ನಡಿಗೆ ಮತ್ತು ಯೋಗವನ್ನು ಸೇರಿಸಿಕೊಳ್ಳಿ. ಆಸ್ತಿಯಿಂದ ಹಣಕಾಸಿನ ಲಾಭ ಉಂಟಾಗಬಹುದು. ನಿಮ್ಮ ಹಣವನ್ನು ನೀವು ಎಲ್ಲಾದರೂ ಸುರಕ್ಷಿತವಾಗಿ ಹೂಡಿಕೆ ಮಾಡಲಿದ್ದೀರಿ. ಇದು ಭವಿಷ್ಯದಲ್ಲಿ ನಿಮಗೆ ಲಾಭ ದೊರೆಯಲಿದೆ.

ಸಿಂಹ:ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ತಮ್ಮ ತಮ್ಮ ಪ್ರೇಮಿಯ ಬೆಂಬಲ ಪಡೆಯಲಿದ್ದಾರೆ. ಅವಿವಾಹಿತರಿಗೆ ಒಳ್ಳೆಯ ವಿವಾಹ ಪ್ರಸ್ತಾಪ ಬರಬಹುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸಲಿದ್ದೀರಿ. ಆದರೆ ನಿಮ್ಮ ಸಮಯವನ್ನು ಹಾಳು ಮಾಡುವ ಗೆಳೆಯರಿಂದ ದೂರವಿರಿ. ಉದ್ಯೋಗದಲ್ಲಿರುವವರು ಹೊಸ ಕೆಲಸದ ಹಿಂದೆ ಓಡಬಾರದು. ಅವರು ಹಳೆಯ ಕೆಲಸವನ್ನೇ ಮುಂದುವರಿಸಿದರೆ ಒಳ್ಳೆಯದು. ನೀವು ಇದರಲ್ಲಿ ಅನೇಕ ಅವಕಾಶಗಳನ್ನು ಪಡೆಯಲಿದ್ದೀರಿ. ವ್ಯವಹಾರದಲ್ಲಿ, ಪ್ರಮುಖ ಜನರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಆರೋಗ್ಯದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನಿಮಗೆ ಪ್ರಗತಿ ಉಂಟಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನೀವು ಜಮೀನಿನಲ್ಲಿ ಹೂಡಿಕೆ ಮಾಡಬಹುದು. ನೀವು ಹೊಸ ವಾಹನವನ್ನು ಖರೀದಿಸಲು ಇಚ್ಛಿಸುವುದಾದರೆ, ನಿಮ್ಮ ಖರ್ಚುವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಒಳ್ಳೆಯದು.

ಕನ್ಯಾ: ಈ ವಾರ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರಿಂದ ನೀವು ಸಾಕಷ್ಟು ವಿಚಾರಗಳನ್ನು ಕಲಿಯಲಿದ್ದೀರಿ. ಇದು ನಿಮಗೆ ಭವಿಷ್ಯದಲ್ಲಿ ಸಾಕಷ್ಟು ಉಪಯುಕ್ತ ಎನಿಸಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಇದೇ ವೇಳೆ ಖರ್ಚುವೆಚ್ಚಗಳಲ್ಲಿ ವೃದ್ಧಿ ಉಂಟಾಗಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಣಯಭರಿತ ಡಿನ್ನರ್‌ ಅನ್ನು ಮಾಡಬಹುದು. ಅವಿವಾಹಿತರು ತಮ್ಮ ನೆಚ್ಚಿನ ಜೀವನ ಸಂಗಾತಿಯನ್ನು ಪಡೆಯಬಹುದು. ಕುಟುಂಬದಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಅಯೋಜಿಸಬಹುದು. ಮನೆಯ ಅಲಂಕಾರಕ್ಕಾಗಿ ಒಂದಷ್ಟು ಶಾಪಿಂಗ್‌ ಮಾಡಬಹುದು. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ಒಳ್ಳೆಯ ವ್ಯಕ್ತಿಯ ನೆರವು ದೊರೆಯಬಹುದು. ಶಿಕ್ಷಣದಲ್ಲಿ ನಿಮ್ಮ ಕಠಿಣ ಶ್ರಮವು ಫಲ ನೀಡಲಿದೆ. ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕಠಿಣ ಶ್ರಮದ ಮೂಲಕ ನಿಯೋಜಿತ ಕೆಲಸವನ್ನು ಪೂರ್ಣಗೊಳಿಸಲಿದ್ದಾರೆ. ಅಧಿಕಾರಿಗಳ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ರೂಪಿಸಲಿದ್ದು ಎಲ್ಲರೂ ಸಂತಸ ಅನುಭವಿಸಲಿದ್ದೀರಿ. ನೀವು ಜಮೀನಿನಲ್ಲಿ ಹೂಡಿಕೆ ಮಾಡಬಹುದು.

ತುಲಾ:ಈ ವಾರ ನಿಮ್ಮ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆ ಕಾಣಿಸಿಕೊಳ್ಳದು. ನಿಮ್ಮ ಕುಟುಂಬದಲ್ಲಿ ಒಂದಷ್ಟು ವೈಮನಸ್ಸು ನೆಲೆಸಲಿದೆ. ಏನಾದರೂ ವಿಷಯದ ಕಾರಣ ನಿಮ್ಮ ಜೀವನ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಒರಟು ಮಾತಿನಿಂದಾಗಿ ಪ್ರೇಮ ಸಂಬಂಧದಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ತರುವುದಕ್ಕಾಗಿ ನಿಮ್ಮ ದಿನಚರಿಯಲ್ಲಿ ನೀವು ಬದಲಾವಣೆ ಮಾಡಬೇಕು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯಲು ಅವಕಾಶ ದೊರೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಎಲ್ಲರ ಹಣವನ್ನು ಮರಳಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ಗೆಳೆಯರಿಂದ ಆದಾಯದ ಅವಕಾಶಗಳನ್ನು ಪಡೆಯಲಿದ್ದೀರಿ. ನಿಮ್ಮ ವ್ಯವಹಾರವನ್ನು ವಿಸ್ತರಿಸುವುದಕ್ಕಾಗಿ ನೀವು ಮಾಡಿದ ಪ್ರಯತ್ನಕ್ಕೆ ಫಲ ದೊರೆಯಲಿದೆ. ಉದ್ಯೋಗದಲ್ಲಿ ಭಡ್ತಿ ಪಡೆಯಲು ಅವಕಾಶ ದೊರೆಯಲಿದೆ. ಈ ವಾರದಲ್ಲಿ ನೀವು ಜಮೀನಿನಲ್ಲಿ ಹೂಡಿಕೆ ಮಾಡಬಹುದು. ನೀವು ಮನೆ ಅಥವಾ ಆಸ್ತಿಯನ್ನು ಖರೀದಿಸಲು ನೀವು ಇಚ್ಛಿಸುವುದಾದರೆ ಇದರಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ.

ವೃಶ್ಚಿಕ: ಈ ವಾರ ನಿಮ್ಮ ನಿರೀಕ್ಷಿತ ಕೆಲಸವನ್ನು ಪೂರ್ಣಗೊಳಿಸಲಿದ್ದೀರಿ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ಗೆಳೆಯರೊಂದಿಗೆ ಎಲ್ಲಿಗಾದರೂ ಪ್ರಯಾಣಿಸಲು ನೀವು ಯೋಜನೆ ರೂಪಿಸಲಿದ್ದೀರಿ. ಇದರಿಂದಾಗಿ ಖರ್ಚು ಉಂಟಾಗಬಹುದು. ನೀವು ಉದ್ಯೋಗದಲ್ಲಿ ಭಡ್ತಿ ಪಡೆಯಲಿದ್ದೀರಿ. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು. ಮನೆಯಲ್ಲಿ ಆರಾಧನೆ ಮತ್ತು ಪ್ರವಚನವನ್ನು ಅಯೋಜಿಸಬಹುದು. ಅಧಿಕಾರಿಗಳೊಂದಿಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಿಸುವುದು ಒಳ್ಳೆಯದು. ನಿಮ್ಮ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಿ. ನಿಮ್ಮ ವೈವಾಹಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಂಡುಬರಬಹುದು. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ನಿಮ್ಮ ಖರ್ಚುವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಒಂದಷ್ಟು ಶಾಪಿಂಗ್‌ ಮಾಡಲಿದ್ದೀರಿ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಶಿಕ್ಷಣಕ್ಕಾಗಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗಬಹುದು.

ಧನು:ಈ ವಾರದಲ್ಲಿ ಧನು ರಾಶಿಯವರು ದೀರ್ಘ ಕಾಲದಿಂದ ಬಾಕಿ ಉಳಿದಿರುವ ಏನಾದರೂ ಪ್ರಮುಖ ಕೆಲಸಕ್ಕಾಗಿ ಕೈ ಹಾಕಲಿದ್ದಾರೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಅನುರಾಗದ ಕ್ಷಣಗಳನ್ನು ನೀವು ಕಳೆಯಲಿದ್ದೀರಿ. ಅಲ್ಲದೆ ಹೊಸ ಕೆಲಸವನ್ನು ನೀವು ಪ್ರಾರಂಭಿಸಲಿದ್ದು, ಇದರಲ್ಲಿ ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಬೆಂಬಲಿಸಲಿದ್ದಾರೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮ ಪಟ್ಟರೆ ಮಾತ್ರವೇ ಯಶಸ್ಸು ದೊರೆಯಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ಉದ್ಯೋಗದಲ್ಲಿರುವವರು ಅಧಿಕಾರಿಗಳಿಂದ ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ನೀವು ಜಮೀನಿನಲ್ಲಿ ಹೂಡಿಕೆ ಮಾಡಬಹುದು. ನೀವು ಈಗಾಗಲೇ ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಿಂದಲೂ ಸಂಪೂರ್ಣ ಲಾಭವನ್ನು ಗಳಿಸಲಿದ್ದೀರಿ. ಹೊಸ ವಾಹನ ಖರೀದಿಯಿಂದಾಗಿ ನಿಮಗೆ ಸಂತಸ ಲಭಿಸಲಿದೆ. ಸಹೋದರರು ಮತ್ತು ಸಹೋದರಿಯದ ಶಿಕ್ಷಣಕ್ಕಾಗಿ ಹೂಡಿಕೆ ಮಾಡಲಿದ್ದೀರಿ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ನಿಮ್ಮ ಕೆಲಸಗಳನ್ನು ಸಕಾಲದಲ್ಲಿ ಮುಗಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ತಾಯಿಯ ಸಂಗವನ್ನು ಪಡೆಯಲಿದ್ದೀರಿ.

ಮಕರ:ಈ ವಾರ ನಿಮ್ಮ ಸಂಬಂಧದ ಕುರಿತು ವಿಶೇಷ ಕಾಳಜಿ ವಹಿಸಬೇಕು. ಬೇರೆ ಯಾರಾದರೂ ವ್ಯಕ್ತಿಯ ಮಾತುಗಳ ಕಾರಣ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಕುಟುಂಬದೊಂದಿಗೆ ಸಮಯ ಕಳೆಯಿರಿ ಹಾಗೂ ಎಲ್ಲಾದರೂ ಹೋಗಲು ಯೋಜನೆ ರೂಪಿಸಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ದೈನಂದಿನ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಶಿಕ್ಷಣ ಪಡೆಯುವ ವಿಚಾರದಲ್ಲಿ ಒಂದಷ್ಟು ಸಮಸ್ಯೆಗಳು ಕಂಡುಬರಬಹುದು. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಸಹೋದರನ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಅಯೋಜಿಸಬಹುದು. ಎಲ್ಲರೂ ಒಟ್ಟಿಗೆ ಸೇರಿ ಶಾಪಿಂಗ್‌ ಮಾಡಲಿದ್ದಾರೆ. ಹೊಸ ಅತಿಥಿಯ ಆಗಮನದಿಂದಾಗಿ ಕುಟುಂಬದಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ನಿಮ್ಮ ಗೆಳೆಯರ ಆರ್ಥಿಕ ನೆರವು ನಿಮಗೆ ಲಭಿಸಲಿದೆ. ಹೂಡಿಕೆಗಾಗಿ ಒಳ್ಳೆಯ ಸಲಹೆಗಾರರ ಸಲಹೆಯನ್ನು ಪಡೆಯಿರಿ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಹೊಸ ಕೆಲಸದ ಕೊಡುಗೆಯು ಸಿಗಬಹುದು. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನಿಮ್ಮ ಸಹೋದರನ ನೆರವು ದೊರೆಯಲಿದೆ.

ಕುಂಭ:ಈ ರಾಶಿಯವರ ಪಾಲಿಗೆ ಈ ವಾರ ಅತ್ಯುತ್ತಮ. ಕುಟುಂಬದ ಸದಸ್ಯರೊಂದಿಗೆ ಒಂದಷ್ಟು ಸಮಯವನ್ನು ಕಳೆದು ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಕಲಿಯಲಿದ್ದೀರಿ. ಇದು ಭವಿಷ್ಯದಲ್ಲಿ ಸಾಕಷ್ಟು ಉಪಯುಕ್ತ ಎನಿಸಲಿದೆ. ಶಿಕ್ಷಣದಲ್ಲಿ ಸಾಕಷ್ಟು ಕಠಿಣ ಶ್ರಮವನ್ನು ಮಾಡುವ ಮೂಲಕ ಯಶಸ್ಸನ್ನು ಸಾಧಿಸಲಿದ್ದೀರಿ. ಸಮಯವನ್ನು ಹಾಳು ಮಾಡುವ ಗೆಳೆಯರಿಂದ ದೂರವಿರಿ. ಆರ್ಥಿಕ ಸ್ಥಿತಿಯು ಉತ್ತಮವಾಗಿರಲಿದೆ. ನೀವು ಹೊಸ ಮನೆಯನ್ನು ಖರೀದಿಸಲಿದ್ದೀರಿ. ಹೊಸ ವಾಹನ ಖರೀದಿಯಿಂದಾಗಿ ನಿಮಗೆ ಸಂತಸ ಲಭಿಸಲಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ. ನಿಮ್ಮ ಪ್ರೇಮ ಬದುಕು ಚೆನ್ನಾಗಿರಲಿದೆ. ವಿದೇಶದೊಂದಿಗೆ ವ್ಯವಹಾರ ಮಾಡುವ ಅವಕಾಶ ದೊರೆಯಬಹುದು. ಉದ್ಯೋಗದಲ್ಲಿ ಭಡ್ತಿ ಪಡೆಯಲು ಅವಕಾಶ ದೊರೆಯಲಿದೆ. ಮಕ್ಕಳ ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲಿದ್ದೀರಿ. ನೀವು ಈಗಾಗಲೇ ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಿಂದಲೂ ಸಂಪೂರ್ಣ ಲಾಭವನ್ನು ಗಳಿಸಲಿದ್ದೀರಿ. ಅವಿವಾಹಿತರ ವಿಚಾರದಲ್ಲಿ ವಿವಾಹದ ಪ್ರಸ್ತಾವನೆಯ ಮಾತುಕತೆ ಉಂಟಾಗಬಹುದು.

ಮೀನ: ಈ ರಾಶಿಯವರ ಕುರಿತು ಹೇಳುವುದಾದರೆ, ಈ ವಾರದಲ್ಲಿ ನಿಮ್ಮಲ್ಲಿ ಚೈತನ್ಯವು ಹೊರಹೊಮ್ಮಲಿದೆ. ಇದರಿಂದಾಗಿ ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ನೀವು ಮುಗಿಸಲಿದ್ದೀರಿ. ನಿಮ್ಮ ಮನದಾಳದ ಭಾವನೆಗಳನ್ನು ನಿಮ್ಮ ಪ್ರೇಮಿಯೊಂದಿಗೆ ವ್ಯಕ್ತಪಡಿಸಲಿದ್ದೀರಿ ಹಾಗೂ ಅವರೊಂದಿಗೆ ಒಂದಷ್ಟು ಸಮಯವನ್ನು ಕಳೆಯಲಿದ್ದೀರಿ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಹೊಂದಿರುವ ಅಂತರವು ದೂರಗೊಳ್ಳಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಉದ್ಯೋಗದಲ್ಲಿ ಹಿರಿಯರು ನಿಮ್ಮ ಕೆಲಸವನ್ನು ಪ್ರಶಂಸಿಸಲಿದ್ದಾರೆ. ನೀವು ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವಿದೇಶಗಳಿಂದ ಆಮದು ಮತ್ತು ರಫ್ತು ಮಾಡಲು ಅವಕಾಶ ಲಭಿಸಲಿದೆ. ನೀವು ಗೆಳೆಯರಿಂದ ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ಸರ್ಕಾರಿ ದಾಖಲೆಗಳನ್ನು ಸಿದ್ಧಪಡಿಸುವುದಕ್ಕಾಗಿ ಸಾಕಷ್ಟು ಕಠಿಣ ಶ್ರಮದ ಅಗತ್ಯವಿದೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಮನೆಯ ಅಲಂಕಾರಕ್ಕಾಗಿ ನೀವು ಒಂದಷ್ಟು ಶಾಪಿಂಗ್ ಮಾಡಬಹುದು.

ABOUT THE AUTHOR

...view details