ಕರ್ನಾಟಕ

karnataka

ETV Bharat / spiritual

ಮನಿ ಪ್ಲಾಂಟ್ ಇರಬೇಕಾದ ಜಾಗದಲ್ಲಿ ಇಟ್ಟರೆ ಮಾತ್ರ ಸಂಪತ್ತಿನ ಸುರಿಮಳೆ; ವಾಸ್ತು ತಜ್ಞರು ಹೇಳುವುದೇನು? - MONEY PLANT INDOOR BENEFITS

ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಸಸ್ಯಗಳನ್ನು ಇಟ್ಟುಕೊಳ್ಳುವುದು ಕುಟುಂಬ ಮತ್ತು ಕುಟುಂಬ ಸದಸ್ಯರಿಗೆ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಬಗ್ಗೆ ವಾಸ್ತುಶಿಲ್ಪಿ ಡಾ. ಡೆನ್ನಿಸ್ ಜಾಯ್ ವಿವರಿಸುವುದು ಹೀಗೆ

indoor-houseplants-tips-for-wealth-and-prosperity
ಮನಿ ಪ್ಲಾಂಟ್ ಇರಬೇಕಾದ ಜಾಗದಲ್ಲಿ ಇಟ್ಟರೆ ಮಾತ್ರ ಸಂಪತ್ತಿನ ಸುರಿಮಳೆ; ವಾಸ್ತು ತಜ್ಞರು ಹೇಳುವುದೇನು? (Representative Image (Getty Images))

By ETV Bharat Karnataka Team

Published : Dec 16, 2024, 9:26 AM IST

ತಿರುವನಂತಪುರಂ:ಕೆಲವೊಂದು ಸಸ್ಯಗಳನ್ನು ಮನೆಯೊಳಗಡೆ ಬೆಳೆಸುವುದರಿಂದ ಆರ್ಥಿಕ ಸಮೃದ್ಧಿ ಇರುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಹೀಗಾಗಿಯೇ ಹಲವು ಗಿಡಗಳನ್ನು ಹಾಕುತ್ತೇವೆ. ಸಂಪತ್ತು ವೃದ್ದಿಗೆ ಯಾವ ಸಸಿಗಳನ್ನು ನಡೆಬೇಕು, ಯಾವುದನ್ನ ನಡೆಬಾರದು, ಎಲ್ಲಿ ಇಡಬೇಕು, ಎಲ್ಲಿ ಇಡಬಾರದು ಎಂಬುದನ್ನು ವಾಸ್ತುಶಿಲ್ಪಿ ಡಾ. ಡೆನ್ನಿಸ್ ಜಾಯ್ ಹೇಳಿದ್ದಾರೆ.

ಸಸ್ಯಗಳು ಮನೆಗೆ ಸೌಂದರ್ಯವನ್ನು ಸೇರಿಸಲು ಮಾತ್ರವಲ್ಲ. ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಸಸ್ಯಗಳನ್ನು ಇಡುವುದರಿಂದ ಕುಟುಂಬ ಮತ್ತು ಕುಟುಂಬ ಸದಸ್ಯರಿಗೆ ಸಮೃದ್ಧಿ ಬರುತ್ತದೆ. ಮನಿ ಪ್ಲಾಂಟ್ ಮತ್ತು ಚೈನೀಸ್ ಬಿದಿರನ್ನು ಈ ಉದ್ದೇಶದಿಂದಲೇ ಮನೆಯೊಳಗೆ ಇರಿಸಲಾಗುತ್ತದೆ. ಆದರೆ, ಈ ರೀತಿ ಮನೆಯೊಳಗೆ ಗಿಡಗಳನ್ನು ಇಡುವುದು ವಾಸ್ತು ಶಾಸ್ತ್ರದ ನಿಯಮಗಳಿಗೆ ಅನುಸಾರವಾಗಿಲ್ಲದಿದ್ದರೆ ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು ಅಂತಾರೆ ವಾಸ್ತು ತಜ್ಞರು.

ಸಸ್ಯಗಳನ್ನು ಇರಿಸಲು ಸೂಕ್ತವಾದ ಸ್ಥಳಗಳು: ಮನೆಯ ಹಾಲ್‌ನ ಆಗ್ನೇಯ ಭಾಗದಲ್ಲಿ ಮನಿ ಪ್ಲಾಂಟ್ ಮತ್ತು ಚೈನೀಸ್ ಬಿದಿರನ್ನು ಇರಿಸಿದರೆ ಉತ್ತಮ. ಇದು ನಮ್ಮ ಆರ್ಥಿಕ ಬೆಳವಣಿಗೆಯನ್ನು ಸಾಕಷ್ಟು ವೃದ್ಧಿಸುತ್ತಿದೆ. ಮನಿ ಸಸ್ಯಗಳನ್ನು ಸಾಮಾನ್ಯವಾಗಿ ಕ್ಲೈಂಬಿಂಗ್ ರೀತಿಯಲ್ಲಿ ನೆಡಲಾಗುತ್ತದೆ. ಆದರೆ, ಈ ಗಿಡಗಳು ಮನೆಯೊಳಗೆ ಬೆಳೆಯುವ ರೀತಿಯಲ್ಲಿ ಇಡಬಾರದು.

ಹೀಗೆ ಮನೆಯೊಳಗೆ ಇಡುವ ಸಸ್ಯಗಳು ಇತರ ವಸ್ತುಗಳ ಸಹಾಯವಿಲ್ಲದೇ ಬೆಳೆಯಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಆ ಕುಟುಂಬಗಳ ಮೇಲೂ ಪರಿಣಾಮ ಬೀರಬಹುದು. ಮಡಕೆಯಲ್ಲಿ ಮನಿ ಪ್ಲಾಂಟ್ ನೆಟ್ಟಿದ್ದರೆ, ಅದನ್ನು ಕೆಳಗೆ ನೇತುಹಾಕಲು ಬಿಡಬೇಡಿ. ಮೇಲ್ಮುಖವಾಗಿ ಒಲವಿನ ರೀತಿಯಲ್ಲಿ ಬೆಳೆಯಲು ಅವಕಾಶ ಕಲ್ಪಿಸಿ.

ಮಲಗುವ ಕೋಣೆಯಲ್ಲಿ ಇಂತಹ ಸಸ್ಯಗಳನ್ನು ಬೆಳಸಬೇಡಿ: ಇಂದು ನಾವು ಅನೇಕರ ಮನೆಗಳಲ್ಲಿ ಮಲಗುವ ಕೋಣೆಗಳಲ್ಲಿ ಅಲಂಕಾರಿಕ ಸಸ್ಯಗಳನ್ನು ನೋಡುತ್ತೇವೆ. ಆದರೆ, ತಾಂತ್ರಿಕವಾಗಿ ಇದು ಉತ್ತಮವಾದ ಕ್ರಮವಲ್ಲ. ಸಸ್ಯಗಳು ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತವೆ. ಮಲಗುವ ಕೋಣೆಯಲ್ಲಿ ಮನಿ ಪ್ಲಾಂಟ್ ಅಥವಾ ಚೈಸ್ ಬಿದಿರು ಇಡುವುದರಿಂದ ರಾತ್ರಿಯಲ್ಲಿ ಕೋಣೆಯಲ್ಲಿ ಆಮ್ಲಜನಕ ಕಡಿಮೆಯಾಗುತ್ತದೆ.

ಇದು ನಿದ್ರೆಯ ಕೊರತೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಇದನ್ನು ಮನೆಯೊಳಗೆ ಹಾಲ್‌ನಲ್ಲಿ ಅಥವಾ ಮನೆಯ ಆಗ್ನೇಯ ಭಾಗದಲ್ಲಿ ಇರಿಸಿ. ನೀವು ಮನಿ ಪ್ಲಾಂಟ್ ಅಥವಾ ಚೈನೀಸ್ ಬಿದಿರನ್ನು ಅಂಗಳದಲ್ಲಿ ಇರಿಸಲು ಬಯಸಿದರೆ, ಅದನ್ನು ಅಂಗಳದ ಆಗ್ನೇಯ ಭಾಗದಲ್ಲಿ ಇರಿಸುವುದು ಸೂಕ್ತ. ಇದರಿಂದ ಆರ್ಥಿಕ ಪ್ರಗತಿಯೂ ಆಗುತ್ತದೆ ಎಂಬ ನಂಬಿಕೆ ಇದೆ. ಮನೆಯ ಪೂರ್ವ ಭಾಗದಲ್ಲಿ ಸಸ್ಯವನ್ನು ಇಡುವುದರಿಂದ ಖ್ಯಾತಿ ಹೆಚ್ಚಾಗುತ್ತದೆ ಎಂದು ಕೂಡಾ ನಂಬಲಾಗಿದೆ.

ಮನೆಯ ಪೂರ್ವ ಭಾಗದಲ್ಲಿ ಚೈನೀಸ್ ಬಿದಿರು ಇಡುವವರು ಒಂದು ಬಟ್ಟಲಿನಲ್ಲಿ ನೀರು ತುಂಬಿಸಬೇಕು. ಮುಳ್ಳಿನ ಅಥವಾ ಬಣ್ಣದ ಗಿಡಗಳನ್ನು ಮನೆಯೊಳಗೆ ಯಾವುದೇ ಕಾರಣಕ್ಕೂ ಇಡಬೇಡಿ. ಏಕೆಂದರೆ ಫೆಂಗ್ ಶೂಯಿ ಪ್ರಕಾರ ಅಂತಹ ಸಸ್ಯಗಳು ಮನೆಯೊಳಗೆ ಇರಬಾರದು

ಇದನ್ನು ಓದಿ:ಪ್ರಯಾಗ್‌ರಾಜ್ ಮಹಾಕುಂಭ ಮೇಳ: ಸಾಧುವಿನ ಶಿರದಲ್ಲಿ 45 ಕೆ.ಜಿ ತೂಕದ ರುದ್ರಾಕ್ಷಿ ಜಪಮಾಲೆಯ ಕಿರೀಟ

20 ವರ್ಷಗಳಿಂದ ಭಕ್ತರಿಗೆ ಅನ್ನಪ್ರಸಾದ ಬಡಿಸುತ್ತಾ ಖುಷಿ ಕಾಣುವ ಶ್ರೀಕೃಷ್ಣ ಭಕ್ತ; ಅಷ್ಟಮಠಗಳ ಶ್ರೀಗಳಿಗೂ ಪ್ರಿಯ ಈ ವ್ಯಕ್ತಿ

ABOUT THE AUTHOR

...view details