ಕರ್ನಾಟಕ

karnataka

ETV Bharat / spiritual

ವಾರದ ಭವಿಷ್ಯ: ಪ್ರೇಮಿಗಳು ವೈವಾಹಿಕ ಜೀವನಕ್ಕೆ ಕಾಲಿಡುವ ಸಮಯ ಸನ್ನಿಹಿತ!.. ಈ ರಾಶಿಯವರಿಗೆ ಈ ವಾರ ಬಂಪರ್​! - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ.

Weekly Horoscope
ವಾರದ ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Dec 1, 2024, 5:51 AM IST

ಮೇಷ :ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದ್ದು ಸಾಕಷ್ಟು ಸಮರ್ಷಣೆ ಮತ್ತು ಪರಿಶ್ರಮದ ವಾರವೆನಿಸಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಹೆಚ್ಚಿನ ಅವಕಾಶಗಳು ಲಭಿಸಲಿವೆ. ಆದರೆ ಅವೆಲ್ಲವೂ ಸಹ ನಿಮ್ಮ ಆದ್ಯತೆಯೊಂದಿಗೆ ತಾಳೆಯಾಗದೆ ಇರಬಹುದು. ಈ ಅವಧಿಯಲ್ಲಿ ನಿಮ್ಮ ಅಂತಃಪ್ರಜ್ಞೆಯನ್ನು ಗಮನಿಸುವುದು ಮತ್ತು ಯಾವುದೇ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳದೆ ಇರುವುದು ಬಹಳ ಮುಖ್ಯ. ಅಲ್ಲದೆ ಜೀರ್ಣತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಒತ್ತು ನೀಡಿ ಆರೋಗ್ಯದಾಯಕ ಆಹಾಕ್ರಮ ಮತ್ತು ದೈನಂದಿಕ ವೇಳಾಪಟ್ಟಿಗೆ ಗಮನ ನೀಡುವುದು ಅಗತ್ಯ. ಸವಾಲಿನ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯು ನಿಮ್ಮನ್ನು ಬೆಂಬಲಿಸದ್ದು, ನಿಮ್ಮ ನೆರಳಾಗಿ ಅವರು ನಿಮಗೆ ಸಹಕಾರ ನೀಡಲಿದ್ದಾರೆ. ಈ ವಾರದಲ್ಲಿ ಯಾವುದೇ ಇತಿಮಿತಿಗಳಿಂದ ಹೊರಬಂದು ಮುಕ್ತತೆಯನ್ನು ಗಳಿಸಲು ಯತ್ನಿಸಲಿದ್ದೀರಿ. ನಿಮ್ಮ ಬೆಂಬಲಕ್ಕೆ ನಿಲ್ಲುವ ಗೆಳೆಯರಿಂದ ಸಲಹೆಯನ್ನು ಪಡೆಯಲು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಪರ್ಯಾಲೋಚನೆಯನ್ನು ನಡೆಸಲು ಶಿಫಾರಸ್ಸು ಮಾಡಲಾಗಿದೆ. ಹೀಗೆ ಮಾಡುವುದರ ಮೂಲಕ ನೀವು ಸಾಕಷ್ಟು ಲಾಭ ಮತ್ತು ಯಶಸ್ಸನ್ನು ಗಳಿಸಬಹುದು.

ವೃಷಭ :ನೀವು ವೃತ್ತಿ ವ್ಯವಹಾರದಲ್ಲಿ ಸಾಧನೆಯನ್ನು ಮಾಡಲಿದ್ದೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರಿಂದ ದೊರೆಯುವ ಮಾರ್ಗದರ್ಶನ ಮತ್ತು ಶುಭಕಾಮನೆಗಳು ನಿಮ್ಮ ಪಾಲಿಗೆ ಅನುಕೂಲಕರ ಎನಿಸಲಿವೆ. ಈ ವಾರದಲ್ಲಿ ನಿಮಗೆ ಪ್ರಮುಖ ಹುದ್ದೆ ಅಥವಾ ಕರ್ತವ್ಯ ದೊರೆಯಬಹುದು. ಪ್ರೇಮ ಸಂಬಂಧವು ಇನ್ನಷ್ಟು ಭಾವತೀವ್ರತೆಯನ್ನು ಪಡೆಯಲಿದ್ದು, ನಿಮ್ಮ ಸಂಗಾತಿಯ ಜೊತೆಗೆ ಆನಂದಿಸಬಹುದಾದ ಕ್ಷಣಗಳು ನಿಮಗೆ ಲಭಿಸಲಿವೆ. ನಿಮ್ಮ ವೈವಾಹಿಕ ಜೀವನವು ಸಂತಸದಿಂದ ತುಂಬಿರಲಿದ್ದು, ನಿಮ್ಮ ಕೌಟುಂಬಿಕ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಈ ವಾರದಲ್ಲಿ ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವುದರಿಂದ ಭವಿಷ್ಯದಲ್ಲಿ ಅನುಕೂಲತೆ ಲಭಿಸಲಿದ್ದು, ಆದಾಯದ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮ ಆಸಕ್ತಿಗಳು ಮತ್ತು ಅಭ್ಯಾಸಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮ್ಮಲ್ಲಿ ಸಂತಸವನ್ನು ತರಲಿವೆ. ನಿಮ್ಮ ಕೌಶಲ್ಯ, ತಾಳ್ಮೆ ಮತ್ತು ಇತರರಿಗೆ ಸಹಾಯ ಮಾಡುವ ನಿಮ್ಮ ಸ್ವಭಾವವು ಬೆಳೆಯಲಿದ್ದು, ಇದರಿಂದ ಅನೇಕ ನಿಮಗೆ ಅನೇಕ ಪ್ರಯೋಜನಗಳು ಲಭಿಸಲಿವೆ. ಈ ವಾರದಲ್ಲಿ ನಿಮ್ಮ ಚಟುವಟಿಕೆಗಳಲ್ಲಿ ಹೆಚ್ಚಳ ಉಂಟಾಗಲಿದ್ದು, ನಿಮ್ಮ ಕುಟುಂಬ ಮತ್ತು ಸಮುದಾಯದ ಯೋಜನೆಗಾಗಿ ಗಮನ ನೀಡಲಿದ್ದೀರಿ. ಈ ವಾರವು ವೈಯಕ್ತಿಕ ಅಭಿವೃದ್ಧಿ, ಸಂಪತ್ತು ಮತ್ತು ಸಾಧನೆಗೆ ಮೀಸಲಾಗಿರಲಿದೆ.

ಮಿಥುನ :ಕೆಲಸದ ಒತ್ತಡ ಮತ್ತು ಕರ್ತವ್ಯವು ಆಯಾಸವನ್ನುಂಟು ಮಾಡಬಹುದು. ಅಲ್ಲದೆ ಮಾನಸಿಕ ಒತ್ತಡವು ಹೆಚ್ಚಾಗಬಹುದು. ಆದರೆ ಭರವಸೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಕೆಲಸಕ್ಕೆ ಅಂಟಿಕೊಳ್ಳುವ ಮೂಲಕ ಈ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಿ. ನಿಮ್ಮ ವ್ಯವಹಾರದಲ್ಲಿ ನೀವು ಸ್ಥಿರ ಗತಿಯಲ್ಲಿ ಯಶಸ್ಸನ್ನು ಅನುಭವಿಸುತ್ತಿದ್ದೀರಿ. ಹೀಗಾಗಿ ಹೆಚ್ಚಿನ ಶಕ್ತಿ ಮತ್ತು ಪ್ರಯತ್ನದ ಮೂಲಕ ಮುಂದಕ್ಕೆ ಹೋಗಲು ಯತ್ನಿಸಿ. ಸಂಘರ್ಷದಲ್ಲಿ ಪಾಲ್ಗೊಳ್ಳುವ ಬದಲಿಗೆ ನಿಮ್ಮ ವೃತ್ತಿಪರ ಕರ್ತವ್ಯಗಳಿಗೆ ಆದ್ಯತೆ ನೀಡಿರಿ ಹಾಗೂ ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಾಗ ತಾಳ್ಮೆ ವಹಿಸಿ. ಪ್ರಣಯ ಸಂಬಂಧದಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಬಹುದು. ಆದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುವ ಬದಲಿಗೆ ಎಚ್ಚರಿಕೆಯಿಂದ ಇವುಗಳನ್ನು ಬಗೆಹರಿಸಿ. ನಿಮ್ಮ ಪ್ರಣಯ ಸಂಬಂಧವನ್ನು ವೃದ್ಧಿಸುವುದಕ್ಕಾಗಿ ನಿಮ್ಮ ಗೆಳೆಯರು ಅಥವಾ ಮಾರ್ಗದರ್ಶಕರ ಸಲಹೆಯನ್ನು ಪಡೆಯಿರಿ. ವಾರಾಂತ್ಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಅಧ್ಯಾತ್ಮಿಕ ತಾಣಕ್ಕೆ ಪ್ರಯಾಣಿಸಲಿದ್ದು, ಇದು ನಿಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಮನೆಯಲ್ಲಿ ಕುಟುಂಬದ ಹಿರಿಯ ಸದಸ್ಯರೊಬ್ಬರ ಯೋಗಕ್ಷೇಮದ ಕುರಿತು ಚಿಂತೆ ಕಾಡಬಹುದು. ಆದರೆ ನಿಮ್ಮ ಸಹಾಯಹಸ್ತವನ್ನು ಚಾಚಿ ಅವರು ಸರಿಯಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವಂತೆ ನೋಡಿಕೊಳ್ಳಿ.

ಕರ್ಕಾಟಕ :ಈ ವಾರದಲ್ಲಿ ಅದೃಷ್ಟವು ನಿಮ್ಮ ಪರವಾಗಿ ಇರುವುದರಿಂದ ನಿಮ್ಮ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಇದು ಸೂಕ್ತ ಸಮಯವಾಗಿದೆ. ಅಲ್ಲದೆ ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ಅನುಕೂಲಕರ ಫಲಿತಾಂಶಗಳು ಲಭಿಸಲಿದ್ದು, ನಿಮ್ಮ ವೃತ್ತಿಯಲ್ಲಿ ಪ್ರಗತಿ ಉಂಟಾಗಲಿದೆ. ಈ ಅವಧಿಯಲ್ಲಿ ಕೌಟುಂಬಿಕ ಸಮಸ್ಯೆಗಳಿಗೆ ಗಮನ ನೀಡುವುದು ಅಗತ್ಯ. ಅಂತರಾಷ್ಟ್ರೀಯ ಪಾಲುದಾರರು ಮತ್ತು ವ್ಯಾವಹಾರಿಕ ಡೀಲುಗಳಿಗೆ ಸಂಬಂಧಿಸಿದಂ ನಿಮ್ಮ ಸಂಬಂಧಗಳು ಧನಾತ್ಮಕ ಬೆಳವಣಿಗೆಯನ್ನು ತರಬಹುದು. ಆರೋಗ್ಯದಲ್ಲಿ ಸ್ಥಿರತೆ ಉಂಟಾಗಲಿದೆ. ಆದರೆ ನಿರಂತರವಾಗಿ ವ್ಯಾಯಾಮ ಮಾಡುವ ಮೂಲಕ ಮತ್ತು ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯದಾಯಕ ಜೀವನಶೈಲಿಯನ್ನು ಮುಂದುವರಿಸಿ. ಆರೋಗ್ಯದ ಹಿತದೃಷ್ಟಿಯಿಂದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿರಿ ಮತ್ತು ಸಂತುಲಿತ ಆಹಾರವನ್ನು ಸೇವಿಸಿರಿ. ವಾರದ ಕೊನೆಗೆ, ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನ ನಡುವೆ ಸಂತುಲನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ತಾಳ್ಮೆಯ ಅಗತ್ಯವಿದೆ. ಆದರೆ ಸಮಯವನ್ನು ಪರಿಣಾಮವಾಗಿ ನಿಭಾಯಿಸುವ ನಿಮ್ಮ ಸಾಮರ್ಥ್ಯವು, ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಲಿದೆ.

ಸಿಂಹ :ಸಿಂಹ ರಾಶಿಯವರಲಿಗೆ ಉತ್ಸಾಹ ಮತ್ತು ಆಶಾಭಾವನೆಯಿಂದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ವಾರವು ಸಾಕಷ್ಟು ಅವಕಾಶಗಳನ್ನು ಒದಗಿಸಲಿದೆ. ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುವ ಮೂಲಕ ನೀವು ಯಥಾರ್ಥತೆಯ ಪ್ರಜ್ಞೆಯನ್ನು ಸಾಧಿಸಲಿದ್ದು, ನಿಮ್ಮೊಳಗಿನ ನೈಜ ವ್ಯಕ್ತಿಯನ್ನು ಅನ್ವೇಷಿಸಲಿದ್ದೀರಿ. ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರಿಂದ ಬೇಷರತ್‌ ಬೆಂಬಲ ನಿಮಗೆ ದೊರೆಯಲಿದೆ. ಪ್ರೇಮವು ಸಂತಸವನ್ನು ತರಲಿದ್ದು, ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲಿದ್ದೀರಿ. ಅಲ್ಲದೆ ವೈವಾಹಿಕ ಜೀವನವು ಸಂತಸವನ್ನು ತಂದು ಕೊಡಲಿದೆ. ಆದರೆ, ಆರೋಗ್ಯದ ವಿಚಾರ ಬಂದಾಗ ಕುಟುಂಬದ ಅಗತ್ಯತೆಗಳನ್ನು ನಿರ್ಲಕ್ಷಿಸದೆ ಯಾವುದೇ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಗೆಹರಿಸುವುದು ಒಳ್ಳೆಯದು. ಋತುವು ಬದಲಾಗುತ್ತಿರುವುದರಿಂದ ನಿಮ್ಮ ಯೋಗಕ್ಷೇಮಕ್ಕೆ ಗಮನ ನೀಡಿರಿ. ತಾಳ್ಮೆಯಿಂದ ವರ್ತಿಸಿ ಉತ್ತಮ ಆರೋಗ್ಯವನ್ನು ಕಾಪಾಡಿ. ನಿಮ್ಮ ಪ್ರೇಮಿಯೊಂದಿಗೆ ಸೇರಿಕೊಂಡು ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡರೆ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

ಕನ್ಯಾ :ವಾರದ ಆರಂಭದಲ್ಲಿ ಎದುರಾಗುವ ಅಡಚಣೆಗಳು ಮತ್ತು ಅಪಾಯಗಳ ಕಾರಣ ಕೋಪ ಮತ್ತು ಕಹಿತನದ ಅನುಭವ ಉಂಟಾಗುವುದು ಸಹಜ. ಹೀಗಾಗಿ ತಾಳ್ಮೆಯಿಂದ ಇರಬೇಕಾಗುತ್ತದೆ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ಸಮಸ್ಯೆಯು ಉಲ್ಬಣಿಸಬಹುದು. ಹೀಗಾಗಿ ನಿಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು. ಹಣಕಾಸಿಗೆ ಸಂಬಂಧಿಸಿದಂತೆ, ಯಾವುದೇ ಆರ್ಥಿಕ ಸಮಸ್ಯೆ ಎದುರಾಗದಂತೆ ನೋಡಬೇಕಾದರೆ ಜಾಣ್ಮೆಯಿಂದ ಹಣದ ನಿರ್ವಹಣೆ ಮಾಡಬೇಕು. ಇತರರಿಂದ ಮೋಸ ಹೋಗದಂತೆ ನೋಡಿಕೊಳ್ಳಿ. ಸಾಕಷ್ಟು ಪರ್ಯಾಲೋಚನೆಯ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಿರಿ. ವಾರದ ಕೊನೆಗೆ, ನಿಮ್ಮ ಪ್ರೇಮಿ ಅಥವಾ ಸಂಗಾತಿಯ ಜೊತೆಗಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳ್ಳಲಿದ್ದು, ನಿಮ್ಮ ಸಂಬಂಧದಲ್ಲಿ ಅನುರಾಗದ ಭಾವನೆ ಇರಲಿದೆ. ಈ ಅವಧಿಯಲ್ಲಿ ಕಠಿಣ ಸವಾಲುಗಳನ್ನು ಎದುರಿಸಲು ಪ್ರಕ್ರಿಯೆಯು ಇನ್ನಷ್ಟು ಸರಳಗೊಳ್ಳಲಿದ್ದು, ನಿಮ್ಮ ಅಸ್ತಿತ್ವದ ಬುನಾದಿಯನ್ನು ಗಟ್ಟಿಗೊಳಿಸಲಿದೆ. ನಿಮ್ಮ ತಾಯಿಯ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ಆದರೆ ಅವರನ್ನು ನೋಡಿಕೊಳ್ಳುವುದು ಮತ್ತು ಅವರು ನಿರಂತರವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವುದನ್ನು ಖಚಿತಪಡಿಸುವುದು ಅತ್ಯಗತ್ಯ. ಸಾಕಷ್ಟು ಎಚ್ಚರಿಕೆಯಿಂದ ಇರಿ ಹಾಗೂ ಋತುಮಾನದ ಬದಲಾವಣೆಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿಡುವುದಕ್ಕಾಗಿ ಆರೋಗ್ಯದಾಯಕ ವಿಧಾನವನ್ನು ನಿಮ್ಮದಾಗಿಸಿ.

ತುಲಾ :ಹೊಸ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಿಮ್ಮ ಕುಟುಂಬದ ಸದಸ್ಯರೊಂದಿಗಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ನೀವು ಯತ್ನಿಸಲಿದ್ದು, ಇದು ನಿಮ್ಮ ಬದುಕಿನಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿದೆ. ವಿಶೇಷ ವ್ಯಕ್ತಿಯ ನೆರವಿನ ಮೂಲಕ, ಬಾಕಿ ಉಳಿದಿರುವ ಕೆಲಸವನ್ನು ನೀವು ಶೀಘ್ರವೇ ಪೂರ್ಣಗೊಳಿಸಲಿದ್ದು, ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಕೊಡುಗೆಯನ್ನು ನೀಡಲಿದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುವ ಕಾರ್ಯವು ಸಂತಸದಿಂದ ಕೂಡಿರಲಿದ್ದು, ಅನುಕೂಲತೆಯನ್ನು ತರಲಿದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಹಿವಾಟುಗಳಿಂದ ಸಾಕಷ್ಟು ಆರ್ಥಿಕ ಲಾಭ ದೊರೆಯಲಿದ್ದು, ನಿಮ್ಮ ಪಾಲುದಾರರು ನಿಮಗೆ ನೆರವನ್ನು ಒದಗಿಸಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸ್ಥಿರತೆ ಇರಲಿದೆ. ಆದರೆ ಯೋಗ ಮತ್ತು ಧ್ಯಾನವನ್ನು ಅಭ್ಯಸಿಸುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ನೀವು ವೃದ್ಧಿಸಬಹುದು. ನೀವು ಈಗಾಗಲೇ ಪ್ರಣಯ ಸಂಬಂಧದಲ್ಲಿದ್ದರೆ, ವೈವಾಹಿಕ ಜೀವನಕ್ಕೆ ಕಾಲಿಡುವ ಸಮಯವು ಸನ್ನಿಹಿತಗೊಳ್ಳಲಿದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಈ ಬಂಧವನ್ನು ಬೆಂಬಲಿಸಲಿದ್ದಾರೆ. ಮಗುವಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಬೆಂಬಲ ಪಡೆಯಲಿದ್ದೀರಿ. ಅವರ ಯೋಗಕ್ಷೇಮಕ್ಕಾಗಿ ಪ್ರಯತ್ನಿಸಲಿದ್ದೀರಿ. ಈ ವಾರದಲ್ಲಿ ನಿಮ್ಮ ಸಂಬಂಧಕ್ಕೆ ಗಮನ ನೀಡುವುದರಿಂದ ಹಾಗೂ ಧನಾತ್ಮಕ ನೋಟದ ಮೂಲಕ ಸವಾಲುಗಳನ್ನು ಎದುರಿಸುವುದರಿಂದ ಬದುಕಿನಲ್ಲಿ ಸಂತೃಪ್ತಿ ನೆಲೆಸಲಿದೆ.

ವೃಶ್ಚಿಕ :ಆರೋಗ್ಯ ಸಮಸ್ಯೆಗಳಿಗೆ ಗಮನ ನೀಡುವುದು ಮತ್ತು ಈಗ ಕಾಡುತ್ತಿರುವ ಯಾವುದೇ ವೈದ್ಯಕೀಯ ಸ್ಥಿತಿಗೆ ಸಕಾಲಿಕ ಚಿಕಿತ್ಸೆ ಮಾಡಿಸಿಕೊಳ್ಳುವುದು ಅಗತ್ಯ. ಋತುಮಾನದಲ್ಲಿ ಬದಲಾವಣೆ ಉಂಟಾಗುತ್ತಿರುವುದರಿಂದ ನಿಮ್ಮ ಆಹಾರಕ್ರಮದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದರ ಜೊತೆಗೆ ದಿನಚರಿಯನ್ನು ಕಾಪಾಡಿ ಗಂಭೀರ ಆರೋಗ್ಯ ಸಮಸ್ಯೆಗಳಿಂದ ದೂರವಿರುವುದು ಒಳ್ಳೆಯದು. ಪ್ರಣದಯ ವಾಂಚೆಯು ಈ ವಾರದಲ್ಲಿ ಹೆಚ್ಚಲಿದ್ದು, ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಯತ್ನಿಸಲಿದ್ದೀರಿ. ಒಳ್ಳೆಯ ಉಡುಗೊರೆಯ ಮೂಲಕ ಅವರನ್ನು ಅಚ್ಚರಿಗೊಳಿಸಿ ಅವರ ಮನ ಗೆಲ್ಲಲು ಯತ್ನಿಸಿ. ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ನೀವು ಸಮಯವನ್ನು ಚೆನ್ನಾಗಿ ಕಳೆಯುವುದರಿಂದ ಸಂತಸ ನೆಲೆಸಲುದ್ದು, ನಿಮ್ಮ ಪ್ರೀತಿಪಾತ್ರರೊಂದಿಗೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮ ಗುರಿಯನ್ನು ನೀವು ಸಾಧಿಸಬೇಕಾದರೆ ಆರ್ಥಿಕ ನಿರ್ಧಾರಗಳನ್ನು ಜಾಣ್ಮೆಯಿಂದ ತೆಗೆದುಕೊಳ್ಳುವುದು ಅಗತ್ಯ. ಒಳ್ಳೆಯ ಉದ್ಯಮದಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಯಶಸ್ಸು ದೊರೆಯಲಿದೆ. ಆದರೆ ಅಧಿಕ ಅಪಾಯದ ಆಯ್ಕೆಗಳಿಂದ ದೂರವಿರುವುದು ಒಳ್ಳೆಯದು. ವೃತ್ತಿಪರ ಮಾರ್ಗದರ್ಶನವನ್ನು ಪಡೆಯಿರಿ ಹಾಗೂ ನಿಮ್ಮ ಅಗತ್ಯತೆಗಳಿಗೆ ಹೊಂದಿಕೊಳ್ಳುವ ಗಟ್ಟಿಯಾದ ಹಾಗೂ ಭದ್ರ ಕಾರ್ಯತಂತ್ರವನ್ನು ರೂಪಿಸಿ.

ಧನು :ಉದ್ಯೋಗದ ಸ್ಥಳದಲ್ಲಿರುವ ಹಿರಿಯ ಸದಸ್ಯರು ನಿಮ್ಮ ಕೆಲಸದ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ಇದರಿಂದ ಇನ್ನಷ್ಟು ಪ್ರಮುಖ ಹುದ್ದೆ ಅಥವಾ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಬಾಗಿಲು ತೆರೆದುಕೊಳ್ಳಲಿದೆ. ನಿಮ್ಮ ವೃತ್ತಿಪರ ಮತ್ತು ಔದ್ಯಮಿಕ ಗುರಿಗಳಲ್ಲಿ ಪ್ರಗತಿ ಮತ್ತು ಯಶಸ್ಸು ಲಭಿಸಲಿದೆ. ನಿಮ್ಮ ವ್ಯವಹಾರದಲ್ಲಿ ಇತ್ತೀಚಿನ ದಿನಗಳಲ್ಲಿ ಹಿನ್ನಡೆ ಉಂಟಾಗಿದ್ದರೆ, ಈ ವಾರದಲ್ಲಿ ಪ್ರಮುಖ ಒಪ್ಪಂದದ ಮೂಲಕ ನಿರ್ಣಯವೊಂದು ಲಭಿಸಲಿದ್ದು, ಆರ್ಥಿಕ ಲಾಭ ಉಂಟಾಗಲಿದೆ. ವೃತ್ತಿಯಲ್ಲಿ ಪ್ರಗತಿ ಉಂಟಾಗುವ ಸಾಧ್ಯತೆ ಇದ್ದು, ನಿಮ್ಮ ವೈಯಕ್ತಿಕ ಬದುಕಿನಲ್ಲಿ ಉನ್ನತಿ ಕಾಣಿಸಿಕೊಳ್ಳಲಿದೆ. ನಿಮ್ಮ ಪ್ರಣಯ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದ್ದು, ಪ್ರಬಲ ಬಂಧದ ಮೂಲಕ ನಿಮ್ಮ ಸಂಗಾತಿಯ ಜೊತೆಗಿನ ಅನುರಾಗವು ಹೆಚ್ಚಲಿದೆ. ವಿಶ್ವಾಸಾರ್ಹ ಗೆಳೆಯ ಅಥವಾ ಕುಟುಂಬದ ಸದಸ್ಯರ ಮೂಲಕ, ಆದಾಯಕ್ಕಾಗಿ ಹೊಸ ಮೂಲಗಳನ್ನು ನೀವು ಕಂಡುಕೊಳ್ಳಲಿದ್ದು, ನಿಮ್ಮ ಸಂಪತ್ತಿನಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಹಣಕಾಸಿನ ಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಗಮನ ನೀಡಬೇಕಾದುದು ಅಗತ್ಯ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಅಧ್ಯಯನ ಮಾಡುವುದಕ್ಕಾಗಿ ಮತ್ತು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಟ್ಟು ಪ್ರಯತ್ನವನ್ನು ಮಾಡಿದರೆ ಯಶಸ್ಸು ದೊರೆಯಲಿದೆ. ನಿಮ್ಮ ಶಿಕ್ಷಣಕ್ಕೆ ಬದ್ಧತೆ ತೋರಿಸುವುದು ಅಗತ್ಯ.

ಮಕರ :ನಿಮ್ಮ ಕೆಲಸಕ್ಕೆ ಸಂಪೂರ್ಣವಾಗಿ ಗಮನ ನೀಡಿ ತಪ್ಪುಗಳು ಉಂಟಾಗದಂತೆ ನೋಡಿಕೊಳ್ಳಬೇಕಾದುದು ಅಗತ್ಯ. ಪರಿಣಾಮಕಾರಿಯಾಗಿ ಸಂವಹನ ನಡೆಸುವ ಮೂಲಕ ಹಾಗೂ ನಿಮ್ಮ ಕೆಲಸದ ಜವಾಬ್ದಾರಿಗಳಿಗೆ ಹೊಂದಿಕೆಯಾಗುವಂತೆ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಮೂಲಕ ನಿಮ್ಮ ಮಾಲೀಕರ ಜೊತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಯತ್ನಿಸಿ. ನಿಮ್ಮ ಯೋಗಕ್ಷೇಮವನ್ನು ಕಾಪಾಡುವುದಕ್ಕಾಗಿ ನಿರಂತರವಾಗಿ ವ್ಯಾಯಾಮ ಮಾಡುವುದರ ಜೊತೆಗೆ ಆರೋಗ್ಯದಾಯಕ ಆಹಾರಕ್ರಮವನ್ನು ಪಾಲಿಸುವುದು ಅಗತ್ಯ. ಅನುಭೂತಿಯನ್ನು ವ್ಯಕ್ತಪಡಿಸುವುದರ ಜೊತೆಗೆ ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಾದುದು ಅಗತ್ಯ. ನೀವು ಪ್ರಣಯ ಸಂಬಂಧದಲ್ಲಿದ್ದರೆ, ಸಾಕಷ್ಟು ಜಾಣ್ಮೆಯಿಂದ ಈ ಸಂಬಂಧವನ್ನು ನಿಭಾಯಿಸಿ. ಅಲ್ಲದೆ ನಿಮ್ಮ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ನಿಮ್ಮ ಆರ್ಥಿಕ ಅಡಚಣೆಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಹೆಚ್ಚಿನ ಆದಾಯವನ್ನು ಗಳಿಸಲು ಯತ್ನಿಸಿ. ಕೆಲಸ ಮತ್ತು ಸಾಮಾಜಿಕ ಬದುಕಿನ ನಡುವೆ ಸಂತುಲನ ಕಾಪಾಡಲು ಯತ್ನಿಸಿ. ನಿಮ್ಮ ಹಣಕಾಸಿನ ಯೋಜನೆಯನ್ನು ಜಾಣ್ಮೆಯಿಂದ ರೂಪಿಸಿ. ಅಲ್ಲದೆ ಹಣವನ್ನು ಸಾಕಷ್ಟು ಎಚ್ಚರಿಕೆಯಿಂದ ಖರ್ಚು ಮಾಡಿರಿ. ತಾಳ್ಮೆ ಮತ್ತು ಜಾಣ್ಮೆಯಿಂದ ಮುಂದೆ ಸಾಗಿದರೆ ಈ ವಾರದಲ್ಲಿ ಯಶಸ್ಸು ದೊರೆಯಲಿದೆ. ಅಲ್ಲದೆ ನಿಮ್ಮ ಆರೋಗ್ಯ, ಪ್ರಣಯ ಸಂಬಂಧ ಮತ್ತು ಆರ್ಥಿಕ ಸ್ಥಿರತೆಗೆ ಒತ್ತು ನೀಡಿರಿ. ಈ ರೀತಿ ಮಾಡುವುದರಿಂದ ಈ ವಾರದಲ್ಲಿ ನಿಮ್ಮ ಧನಾತ್ಮಕ ಅನುಭವ ಉಂಟಾಗಲಿದೆ.

ಕುಂಭ :ನೀವು ಸಾಮರಸ್ಯದಿಂದ ಕೂಡಿದ ಹಾಗೂ ಪರಸ್ಪರ ಲಾಭವನ್ನು ತಂದು ಕೊಡಬಲ್ಲ ಸಂಬಂಧವನ್ನು ಆನಂದಿಸಲಿದ್ದು, ಇದರಿಂದ ನಿಮ್ಮ ಭವಿಷ್ಯದ ಸಂತಸಕ್ಕೆ ಸಾಕಷ್ಟು ಕೊಡುಗೆ ದೊರೆಯಲಿದೆ. ಪ್ರಣಯ ಸಂಬಂಧದಲ್ಲಿ ವೃದ್ಧಿ ಉಂಟಾಗಲಿದ್ದು, ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಅವಕಾಶ ಲಭಿಸಲಿದೆ. ನಿಮ್ಮ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಂದ ದೊರೆಯುವ ಪ್ರೀತಿ ಮತ್ತು ಬೆಂಬಲವು ನಿಮ್ಮಲ್ಲಿ ಸಾಕಷ್ಟು ಸಂತಸ ಮತ್ತು ಸಂತೃಪ್ತಿಯನ್ನು ತರಲಿದೆ. ವಾರದ ಆರಂಭದಲ್ಲಿ, ನೀವು ತೊಡಗಿಸಿಕೊಳ್ಳುವ ವೃತ್ತಿ ಮತ್ತು ವ್ಯಾವಹಾರಿಕ ಉದ್ಯಮದಲ್ಲಿ ಯಶಸ್ಸು ಲಭಿಸಲಿದೆ. ಅಲ್ಲದೆ ಪ್ರಮುಖ ಆರ್ಥಿಕ ಹೊರೆಯಿಂದ ನೀವು ಹೊರಬರಲಿದ್ದು, ನಿಮ್ಮ ಆರ್ಥಿಕ ಸ್ಥಿರತೆಯಲ್ಲಿ ವೃದ್ಧಿ ಉಂಟಾಗಲಿದೆ. ಇನ್ನಷ್ಟು ಆಳವಾಗಿ ಧಾರ್ಮಿಕ ಅಭ್ಯಾಸವನ್ನು ಕೈಗೊಳ್ಳಲು ಮತ್ತು ಧಾರ್ಮಿಕ ತಾಣಗಳನ್ನು ಅನ್ವೇಷಿಸಲು ಈ ಸಮಯವು ಸಕಾಲ. ನೀವು ಕೆಲವು ಐಷಾರಾಮಿ ವಸ್ತುಗಳನ್ನು ಖರೀದಿಸಲಿದ್ದೀರಿ. ಆದರೆ ನಿಮ್ಮ ಖರ್ಚನ್ನು ಜಾಣ್ಮೆಯಿಂದ ನಿಭಾಯಿಸುವುದು ಅಗತ್ಯ. ಬದುಕಿನ ಧನಾತ್ಮಕ ಮಗ್ಗುಲನ್ನು ಆಲಿಂಗಿಸಿಕೊಳ್ಳಿರಿ ಹಾಗೂ ಸಾಮಾಜಿಕ ಸಭೆ ಸಮಾರಂಭಗಳನ್ನು ಆನಂದಿಸಿರಿ. ನಿಮ್ಮ ಧನಾತ್ಮಕ ಮನೋಭಾವ ಮತ್ತು ಸಮುದಾಯದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯು ಇನ್ನಷ್ಟು ಸಂತಸ ಮತ್ತು ಸಂತೃಪ್ತಿಯನ್ನು ತರಲಿದೆ. ಬದುಕಿನಲ್ಲಿ ಹೊಸ ಮತ್ತು ಆನಂದಿಸಬಲ್ಲ ಅನುಭವಗಳನ್ನು ಪಡೆಯುವುದಕ್ಕಾಗಿ ಈ ವಾರವು ಸಾಕಷ್ಟು ಅವಕಾಶಗಳನ್ನು ಹೊತ್ತು ತರಲಿದೆ.

ಮೀನ :ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕುಗಳೆರಡರಲ್ಲೂ ಸುಧಾರಣೆ ಕಾಣಿಸಿಕೊಳ್ಳಲಿದ್ದರೂ ಸಹ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೀವು ಒಂದಷ್ಟು ಹತಾಶೆಯನ್ನು ಅನುಭವಿಸಬಹುದು. ವಾರದ ಕೊನೆಗೆ ವೃತ್ತಿಯಲ್ಲಿ ಸಾಕಷ್ಟು ಮುನ್ನಡೆ ದೊರೆಯಲಿದ್ದು, ಇದರಿಂದ ದೊಡ್ಡ ಮಟ್ಟದ ಪ್ರತಿಫಲ ದೊರೆಯಲಿದೆ. ಪ್ರೇಮ ಸಂಬಂಧವು ಇನ್ನಷ್ಟು ಭಾವತೀವ್ರತೆಯನ್ನು ಅನುಭವಿಸಲಿದ್ದು ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರತ್ತ ನೀವು ಅನುಭೂತಿಯನ್ನು ತೋರಲಿದ್ದು, ನಿಮ್ಮ ಕೋಪವನ್ನು ನಿಯಂತ್ರಿಸುವಲ್ಲಿ ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಬೆಂಬಲಿಸಲಿದ್ದಾರೆ. ನಿಮ್ಮ ಆರೋಗ್ಯದಲ್ಲಿ ಸ್ಥಿರತೆ ಇರಲಿದೆ. ಸಂಪರ್ಕಗಳನ್ನು ಬಳಸಿಕೊಳ್ಳುವ ಮೂಲಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರಯೋಜನವನ್ನು ಗಳಿಸಿಕೊಳ್ಳಲಿದ್ದೀರಿ. ನಿಮ್ಮ ಭವಿಷ್ಯಕ್ಕಾಗಿ ಯೋಜನೆಯನ್ನು ರೂಪಿಸಿಕೊಳ್ಳಲು ಮತ್ತು ನಿಮ್ಮ ಗುರಿಯನ್ನು ಸಾಧಿಸಿಕೊಳ್ಳಲು ಇದು ಸಕಾಲ. ಈ ವಾರದಲ್ಲಿ ನಿಮ್ಮ ವೃತ್ತಿಪರ ಮತ್ತು ಕೌಟುಂಬಿಕ ಬದ್ಧತೆಗಳ ನಡುವೆ ಸಂತುಲನ ಸಾಧಿಸಲು ಗಮನ ನೀಡಿರಿ. ಈ ವಾರದಲ್ಲಿ ಜಾಣ್ಮೆಯ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ನೀವು ಅದ್ಭುತ ಫಲಿತಾಂಶವನ್ನು ಪಡೆಯಲಿದ್ದೀರಿ. ಹೊಸ ಮತ್ತು ಯಶಸ್ವಿ ಅವಕಾಶಗಳು ನಿಮಗೆ ಲಭಿಸಲಿವೆ.

ABOUT THE AUTHOR

...view details