ಮೇಷ :ವಾರದ ಆರಂಭದಲ್ಲಿ ಹೆಚ್ಚನ ಹಣ ವೆಚ್ಚವಾಗಲಿದೆ, ಆದರೆ ವಾರಾಂತ್ಯದವರೆಗೆ ಪ್ರಯಾಣ ನಿಮಗೆ ಸಂತೋಷ ಉಂಟುಮಾಡಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ ಹಾಗೂ ನಿಮ್ಮ ಭವಿಷ್ಯದ ಬಗ್ಗೆ ಕೊಂಚ ಬೇಸರ ಮೂಡಲಿದೆ. ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿಸುವುದು ನಿಮ್ಮಲ್ಲಿ ಸಂತೋಷ ಮತ್ತು ಹೊಸ ಹುಮ್ಮಸ್ಸು ಮೂಡಿಸಲಿದೆ. ಯಾವುದೇ ತೀರ್ಥಯಾತ್ರೆ ನಿಮಗೆ, ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಈ ಸಮಯದಲ್ಲಿ ಒಳಿತನ್ನು ಉಂಟುಮಾಡಲಿದೆ. ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಹೂಡಿಕೆಗಳನ್ನು ಮಾಡಬಹುದು ಹಾಗೂ ಬಂಡವಳಿಗರು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿಕೊಂಡು ಹೋಗುವುದು ಉತ್ತಮ. ಕುಟುಂಬದೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳಲಿದ್ದೀರಿ. ಪರೀಕ್ಷೆ ಎದುರಿಸಲು ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರ ಆಸಕ್ತಿ ಕಡಿಮೆಯಾಗಿ, ಓದಿನ ಕಡೆ ಗಮನ ಕೇಂದ್ರೀಕರಿಸಲು ಕಷ್ಟವೆನಿಸಬಹುದು. ಗಾಯಗೊಳ್ಳುವ ಸಾಧ್ಯತೆ ಇರುವುದರಿಂದ, ಮಕ್ಕಳು ತಮ್ಮ ದೈಹಿಕ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ ಹಾಗೂ ಎಚ್ಚರಿಕೆಯಿಂದ ಇರಬೇಕಿದೆ. ದೈಹಿಕ ಕಸರತ್ತನ್ನು ದಿನಚರಿಯ ಭಾಗವಾಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ವೃಷಭ :ಈ ವಾರವು ವೃಷಭ ರಾಶಿಯವರಿಗೆ ಸಾಕಷ್ಟು ಅನುಕೂಲಗಳನ್ನು ತಂದುಕೊಡಲಿದೆ. ಜ್ಞಾನ ಮತ್ತು ಮನೋಬಲ ಹೆಚ್ಚಳವಾಗಲಿದೆ. ಪ್ರೀತಿ ಹಾಗೂ ಬೌದ್ಧಿಕ ಸಂಬಂಧಗಳ ಕಡೆಗಿನ ಒಲವು ಹೆಚ್ಚಲಿದೆ. ಒಂದು ತಂಡವಾಗಿ ಕೆಲಸ ಮಾಡುವಿಕೆ ಹಾಗೂ ಪರಸ್ಪರ ಸಹಕಾರದಂತಹ ಅನುಕೂಲಗಳು ನಿಮ್ಮದಾಗಲಿವೆ. ಕೌಟುಂಬಿಕ ಜೀವನ ಹೆಚ್ಚು ಸಂತಸದಾಯಕ ಹಾಗೂ ಶಾಂತಿಯುತವಾಗಿರಲಿದ್ದು, ಕುಟುಂಬದ ಸದಸ್ಯರಲ್ಲಿ ಪರಸ್ಪರ ಸಹಕಾರ ಹೆಚ್ಚಲಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಲು ಕುಟುಂಬದ ಸದಸ್ಯರು ಪರಸ್ಪರರನ್ನು ಮಾರ್ಗದರ್ಶಕರಾಗಿ ಕಾಣಲಿದ್ದಾರೆ. ಭವಿಷ್ಯದ ಬಗೆಗಿನ ಕಳವಳ ನಿಮ್ಮಲ್ಲಿ ಆಧ್ಯಾತ್ಮಿಕ ಆಸಕ್ತಿಯನ್ನು ಜಾಗೃತಗೊಳಿಸಲಿದೆ. ಭಕ್ತಿಗೆ ಸಂಬಂಧಿಸಿದ ಕಾರ್ಯಗಳು ಹಾಗೂ ಸತ್ಸಂಗದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು, ಸ್ತ್ರೀಯರಿಂದ ಬೆಂಬಲ ಹಾಗೂ ಲಕ್ಷ್ಮಿಯ ಆಶೀರ್ವಾದ ದೊರೆಯಲಿದೆ. ಹೊಸ ಅವಕಾಶಗಳು ದೊರೆಯಲಿವೆ. ವ್ಯಕ್ತಿಗತ ಅಭಿವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಹೊಸತನ್ನು ನಿರೀಕ್ಷಿಸುತ್ತಿರುವವರಿಗೆ ಈ ವಾರ ಶುಭವಾಲಿದೆ.
ಮಿಥುನ :ಈ ವಾರ ನಿಮಗೆ ಖಂಡಿತವಾಗಿ ಹೊಸ ಸಂತೋಷ ತಂದುಕೊಡಲಿದೆ ಹಾಗೂ ಬಾಕಿ ಉಳಿಸಿದ ಕೆಲಸವನ್ನು ಪೂರ್ಣಗೊಳಿಸಲು ಸಹಾಯಕವಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಅಂತರ ಕಡಿಮೆಯಾಗಿ ಪ್ರೀತಿ ವೃದ್ಧಿಸಲಿದೆ. ವಾರಾಂತ್ಯದ ವೇಳೆಗೆ, ಕಲಿಕೆ ಹಾಗೂ ಪ್ರೇರಣೆಯ ಬಗೆಗಿನ ನಿಮ್ಮ ಪ್ರೀತಿ ಹೆಚ್ಚಲಿದೆ. ವಿವಾಹಿತರಿಗೆ ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದ್ದು, ಆಸೆಗಳು ಈಡೇರಲಿವೆ. ಜ್ಞಾನ ಪಡೆದುಕೊಳ್ಳಲು ಹಣ ಹೂಡಬೇಕಾಗಿ ಬರಬಹುದು, ಹಾಗಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಉನ್ನತ ವ್ಯಾಸಂಗ ಮಾಡುತ್ತಿರುವವರು ತಮ್ಮ ಇಷ್ಟದ ವಿಷಯದ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಈ ವಾರ ಸಹಾಯಕವಾಗಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲಿದ್ದೀರಿ. ಅಧ್ಯಾಪಕರು ನಿಮಗೆ ಸಹಾಯ ಮತ್ತು ಮಾರ್ಗದರ್ಶನ ಒದಗಿಸಲಿದ್ದಾರೆ. ಪ್ರವಾಸಕ್ಕೆ ತೆರಳಲು ಅವಕಾಶ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ಕಾಣಲಿದ್ದು, ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಪ್ರಯಾಣದಿಂದ ಅನುಕೂಲ ಉಂಟಾಗಲಿದೆ.
ಕರ್ಕಾಟಕ :ಈ ವಾರದಲ್ಲಿ ಕುಟುಂಬದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯವಿದೆ. ಸಂಕೀರ್ತನೆ ಹಾಗೂ ಇನ್ನಿತರ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂತಸ ಹಾಗೂ ಶಾಂತಿ ಕಾಣಬಹುದಾಗಿದೆ. ವಿವಾಹಿತರಿಗೆ ಈ ವಾರವಿಡೀ ಭಕ್ತಿ ಹಾಗೂ ಪ್ರೀತಿಗಾಗಿ ಮೀಸಲಿದ್ದು, ಸಂತೋಷ ಹಾಗೂ ಪ್ರಗತಿ ಹೊಂದಲಿದ್ದೀರಿ. ಪರಿವಾರಗಳು ಪ್ರಮುಖವಾದ ಉಡುಗೊರೆಗಳನ್ನು ಪಡೆಯಬಹುದು. ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಸಾಕಷ್ಟು ಗಟ್ಟಿಯಾಗಿರಲಿವೆ. ಕೊಟ್ಟ ಕೆಲಸವನ್ನು ನಿಗದಿತ ಸಮಯದೊಳಗೆ ಮಾಡಿ ಮುಗಿಸುವ ಕಡೆ ನೌಕರರು ಗಮನ ಹರಿಸಬೇಕು. ವಹಿವಾಟುದಾರರು ಹೊಸ ಉಪಕರಣಗಳು ಹಾಗೂ ಶಿಕ್ಷಣದಲ್ಲಿ ಹಣ ಹೂಡಿಕೆ ಮಾಡುವುದು ಒಳಿತು. ಸಮರ್ಥವಾದ ಕಲಿಕೆ ಸಾಧ್ಯವಿರುವುದರಿಂದ, ಈ ವಾರ ಕಲಿಕೆ ಉತ್ತಮವಾಗಿ ನಡೆಯಲಿದೆ. ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಆದರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಬೇಕಿದೆ. ಹೊರಗಿನ ಆಹಾರ ಪದಾರ್ಥಗಳ ಸೇವನೆ ಕಡಿಮೆಗೊಳಿಸಿ, ನಿಯಮಿತ ಆಹಾರಪದ್ಧತಿ ಹಾಗೂ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ.
ಸಿಂಹ :ಈ ವಾರ ಕೆಲವು ಸವಾಲುಗಳನ್ನು ಒಡ್ಡಲಿದೆ. ಬೇಸರ ಕಾಣಿಸಿಕೊಳ್ಳಬಹುದು ಹಾಗೂ ಕೆಲಸಗಳು ಪೂರ್ಣಗೊಳ್ಳಲು ಮಾಮೂಲಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಅಹಿತವಾದ ವಾತಾವರಣ ಕಾಣಿಸಿಕೊಳ್ಳಬಹುದು, ಆದರೆ ಕಷ್ಟಕಾಲದಲ್ಲಿ ನಿಮ್ಮ ಪ್ರೀತಿಪಾತ್ರರ ಸಹಕಾರ ಇರಲಿದೆ. ಸ್ವಲ್ಪ ಕಾಲ ನೀವು ಹಿಂದುಳಿಯಬಹುದು, ವ್ಯವಹಾರದಲ್ಲಿ ಇತರರೊಂದಿಗೆ ಸೇರಿ ಕೆಲಸ ಮಾಡುವುದರಿಂದ ಹೊಸ ಹೊಸ ದಾರಿಗಳು ನಿಮ್ಮ ಎದುರು ತೆರೆದುಕೊಳ್ಳಬಹುದು. ಇಂದಿನ ಹೂಡಿಕೆಗಳ ಮೂಲಕ ಮುಂದಿನ ದಿನಗಳಲ್ಲಿ ಒಳಿತಾಗುವ ಆಶಾಭಾವನೆ ಇರಿಸಿಕೊಳ್ಳಬಹುದು, ಜೊತೆಗೆ ಆದಾಯವೂ ಹೆಚ್ಚಬಹುದು. ಕೆಲವು ಅನಿರೀಕ್ಷಿತ ಸಂತೋಷಗಳು ಸಹ ನಿಮ್ಮದಾಗಬಹುದು. ಹೊಸ ಶಿಕ್ಷಣ ಪಡೆಯುವ ಸಿದ್ಧತೆಯಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸುವ ಜೊತೆಜೊತೆಗೆ, ಈಗ ಪಡೆಯುತ್ತಿರುವ ಶಿಕ್ಷಣವನ್ನು ಕಡೆಗಣಿಸದೆ ಇರುವುದು ಸಹ ಮುಖ್ಯವಾಗಿದೆ. ಅತಿಯಾದ ಕೆಲಸ ಮಾಡಿ ಆರೋಗ್ಯ ಹಾಳುಮಾಡಿಕೊಳ್ಳದೇ ನಿಮ್ಮ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಹಾಗೂ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯದ ಪರಿಣಾಮವಾಗಿ ನೀವು ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇದೆ.
ಕನ್ಯಾ :ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಸಧ್ಯಕ್ಕೆ ಆರೋಗ್ಯ ಸಂಬಂಧಿತ ತೊಂದರೆಗಳು ಕಾಣಿಸಿಕೊಂಡರೂ, ನಂತರದ ದಿನಗಳಲ್ಲಿ ಕ್ರಮೇಣ ಅವೆಲ್ಲವೂ ಬಗೆಹರಿಯಲಿವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ ಹಾಗೂ ವಿವಾಹಿತರು ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹಳೆಯ ಸ್ನೇಹಿತರಿಂದ ಸಹಾಯ ಪಡೆದುಕೊಳ್ಳಬಹುದು. ಹಳೆಯ ಬಿಕ್ಕಟ್ಟುಗಳು ಬಗೆಹರಿದು, ಪರಿಹಾರ ನಿಮ್ಮ ಪರವಾಗಿ ಇರಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಸರ್ಕಾರಿ ಯೋಜನೆಗಳ ಸವಲತ್ತು ದೊರೆಯಲಿದೆ. ಸರ್ಕಾರಿ ಕೆಲಸದ ಹುಡುಕಾಟದಲ್ಲಿ ಇರುವವರಿಗೆ ಸಿಹಿಸುದ್ದಿ ಸಿಗಲಿದೆ. ಪ್ರೇಮಸಂಬಂಧಗಳು ಎಂದಿನಂತೆ ಇರಲಿದ್ದು, ಹಳೆಯ ಸ್ನೇಹಿತರಿಂದ ಹೆಚ್ಚಿನ ಆತ್ಮೀಯತೆ ಅನುಭವಿಸಲಿದ್ದೀರಿ. ರಾಜಕೀಯವಾಗಿ ಯಶಸ್ಸು ಸಿಗಲಿದ್ದು, ಆರ್ಥಿಕ ಅನುಕೂಲ ಉಂಟಾಗಲಿದೆ. ನಿಮ್ಮ ಕೌಶಲ್ಯ ಹಾಗೂ ಪ್ರಶಾಂತತೆಯ ಕಾರಣದಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಎತ್ತರಕ್ಕೆ ಏರಲಿದೆ. ಪೋಷಕರ ಬಗ್ಗೆ ಗಮನ ವಹಿಸುವುದು ಮುಖ್ಯ. ಮದುವೆಗಾಗಿ ಹುಡುಕಾಟದಲ್ಲಿರುವ ಹುಡುಗಿಯರಿಗೆ ಈ ವಾರ ಸೂಕ್ತ ಸಂಗಾತಿ ದೊರೆಯಲಿದ್ದಾರೆ. ದಂಪತಿಗಳ ನಡುವಿನ ಆಳವಾದ ಪ್ರೇಮ ಇನ್ನಷ್ಟು ಹೆಚ್ಚಾಗಲಿದೆ. ಹೊಸ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಭವಿಷ್ಯ ರೂಪುಗೊಳ್ಳಲಿದೆ.