ಮೇಷ :ಈ ವಾರದಲ್ಲಿ ನಿಮ್ಮ ಕುಟುಂಬದ ಬೆಂಬಲವನ್ನು ಪಡೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಒಂದಷ್ಟು ಸಮಯವನ್ನು ಕಳೆದು ಹಣವನ್ನು ಹೇಗೆ ಉಳಿಸಬಹುದು ಎಂಬುದನ್ನು ಕಲಿಯಲಿದ್ದೀರಿ. ಇದು ಭವಿಷ್ಯದಲ್ಲಿ ಸಾಕಷ್ಟು ಉಪಯುಕ್ತ ಎನಿಸಲಿದೆ. ಕೌಟುಂಬಿಕ ಬದುಕಿನಲ್ಲಿ ನೀವು ಒತ್ತಡವನ್ನು ಅನುಭವಿಸಬಹುದು. ನಿಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯು ಹಸ್ತಕ್ಷೇಪ ಮಾಡುವುದರಿಂದ ನಿಮ್ಮ ಸಂಬಂಧ ಹದಗೆಡಬಹುದು. ಪ್ರೇಮ ಜೀವನವು ಸಂತೋಷದಿಂದ ಕೂಡಿರಲಿದೆ. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಹಣವನ್ನು ಗಳಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನೀವು ಜಮೀನಿನಲ್ಲಿ ಹೂಡಿಕೆ ಮಾಡಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ಶುಭ ಸುದ್ದಿಯನ್ನು ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಗಮನ ನೀಡಬಹುದು. ಆದರೆ ಕೆಲವು ಗೆಳೆಯರು ನಿಮ್ಮ ಗಮನಭಂಗ ಮಾಡಬಹುದು. ಸ್ಪರ್ಧೆಯಲ್ಲಿ ಯಶಸ್ಸನ್ನು ಗಳಿಸುವುದಕ್ಕಾಗಿ ನೀವು ಸಾಕಷ್ಟು ಕಠಿಣ ಶ್ರಮವನ್ನು ಪಡಬೇಕು. ಆರೋಗ್ಯದ ವಿಚಾರದಲ್ಲಿ ಈ ವಾರವು ದುರ್ಬಲವೆನಿಸಲಿದೆ. ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ಪ್ರತಿಯೊಬ್ಬರೊಂದಿಗೆ ಸಂವಾದ ನಡೆಸಲಿದ್ದೀರಿ.
ವೃಷಭ :ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ನೀವು ನಿಮ್ಮ ಕುಟುಂಬದ ಸದಸ್ಯರಿಂದ ಆರ್ಥಿಕ ಲಾಭ ಪಡೆಯಲಿದ್ದೀರಿ. ಪ್ರೇಮ ಸಂಬಂಧದಲ್ಲಿನ ಕುಂದುಕೊರತೆಗಳನ್ನು ನಿವಾರಿಸುವಲ್ಲ ಯಶಸ್ವಿಯಾಗಲಿದ್ದೀರಿ. ನಿಮಗೆ ಆರ್ಥಿಕ ಸವಾಲುಗಳು ಎದುರಾಗಬಹುದು. ಎಲ್ಲಾ ವೆಚ್ಚಗಳನ್ನು ಭರಿಸಲು ನೀವು ಸಿದ್ಧರಾಗಬೇಕು. ಈ ಹಿಂದೆ ಮಾಡಿದ ಹೂಡಿಕೆಗಳಿಗೆ ಫಲ ದೊರೆಯಲಿದೆ. ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಗಳಿಸಬಹುದು. ಈ ವಾರದಲ್ಲಿ ಉದ್ಯೋಗದಲ್ಲಿರುವವರು ಸಾಕಷ್ಟು ಕಠಿಣ ಶ್ರಮವನ್ನು ಮಾಡಲಿದ್ದಾರೆ. ನಿಮ್ಮ ಹಿರಿಯರು ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಉನ್ನತ ಶಿಕ್ಷಣಕ್ಕೆ ಈ ವಾರವು ಒಳ್ಳೆಯದು. ಕೆಲ ಮಂತ್ರಗಳ ಸಹಾಯದಿಂದ ನೀವು ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ವಿಶೇಷವಾದುದು ಏನೂ ಸಂಭವಿಸುವುದಿಲ್ಲ. ಮನೆಯಲ್ಲಿ ಆರಾಧನೆ ಮತ್ತು ಪ್ರವಚನವನ್ನು ಅಯೋಜಿಸಬಹುದು. ಸಹೋದರಿಯ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು ದೂರಗೊಳ್ಳಲಿವೆ. ಹಳೆಯ ಗೆಳೆಯರನ್ನು ಭೇಟಿಯಾಗಲಿದ್ದೀರಿ. ನಿಮ್ಮ ಮನಸ್ಸಿನ ಸಮಾಧಾನಕ್ಕಾಗಿ ಒಂದಷ್ಟು ಸಮಯವನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಳೆಯಲಿದ್ದೀರಿ.
ಮಿಥುನ :ಪ್ರೇಮ ಸಂಬಂಧದಲ್ಲಿರುವವರು ತಮ್ಮ ಪ್ರೇಮಿಯೊಂದಿಗೆ ಸಂತಸ ಅನುಭವಿಸಲಿದ್ದು, ಎಲ್ಲಾದರೂ ಹೋಗಲು ಯೋಜನೆ ರೂಪಿಸಲಿದ್ದಾರೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸದ ಕ್ಷಣಗಳನ್ನು ಕಳೆಯಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ಸಾಧಿಸುವ ಪ್ರಗತಿಯು ನಿಮಗೆ ಸಂತಸ ನೀಡಲಿದೆ. ಈ ವಾರದಲ್ಲಿ ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಆದಾಯವು ಚೆನ್ನಾಗಿರಲಿದೆ. ನೀವು ಈಗಾಗಲೇ ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಿಂದಲೂ ಸಂಪೂರ್ಣ ಲಾಭವನ್ನು ಗಳಿಸಲಿದ್ದೀರಿ. ವ್ಯವಹಾರದಲ್ಲಿ ನೀವು ಅನುಭವಿ ವ್ಯಕ್ತಿಯ ಸಹಕಾರ ಪಡೆಯಲಿದ್ದೀರಿ. ಕೆಲಸದ ಸ್ಥಳದಲ್ಲಿ ಕೆಲಸದ ಹೆಚ್ಚಿನ ಒತ್ತಡ ಇರಬಹುದು. ಆದರೆ ನಿಮ್ಮ ಕೆಲಸವನ್ನು ನೀವು ಸಕಾಲದಲ್ಲಿ ಮುಗಿಸಲಿದ್ದೀರಿ. ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಿಗೆ ಗಮನ ನೀಡುವ ಕಾರಣ ಅಧ್ಯಯನಕ್ಕೆ ಗಮನ ನೀಡಲು ಅವರಿಗೆ ಸಾಧ್ಯವಾಗದು. ಸ್ಪರ್ಧೆಯಲ್ಲಿ ವಿಶೇಷವಾದುದೇನೂ ಘಟಿಸದು. ಹವಾಮಾನದ ಕಾರಣ ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮನೆಯಿಂದ ದೂರವಿದ್ದು ಕೆಲಸ ಮಾಡುವವರು ತಮ್ಮ ಕುಟುಂಬವನ್ನು ಮಿಸ್ ಮಾಡಲಿದ್ದಾರೆ. ಗೆಳೆಯರ ಸಹಾಯದಿಂದ ಆದಾಯ ಗಳಿಸಲು ನಿಮಗೆ ಅನೇಕ ಅವಕಾಶಗಳು ಲಭಿಸಲಿವೆ.
ಕರ್ಕಾಟಕ :ನಿಮ್ಮ ಹಣಕಾಸಿನ ಸ್ಥಿತಿಯು ಚೆನ್ನಾಗಿರಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಬಹುದು. ನೀವು ಏನಾದರೂ ಹೂಡಿಕೆಯನ್ನು ಮಾಡುವುದಾದರೆ ಅದನ್ನು ಎಚ್ಚರಿಕೆಯಿಂದ ಮಾಡಿರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಸ್ವಲ್ಪ ಹೂಡಿಕೆಯನ್ನು ಮಾಡಬೇಕಾದೀತು. ಉದ್ಯೋಗದಲ್ಲಿರುವ ಜನರ ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು. ವಿದ್ಯಾರ್ಥಿಗಳು ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಲಿದ್ದಾರೆ. ಸ್ಪರ್ಧೆಯಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಉನ್ನತ ಶಿಕ್ಷಣಕ್ಕೆ ಇದು ಸಕಾಲ. ನಿಮ್ಮ ಅಚ್ಚುಮೆಚ್ಚಿನ ವಿಷಯಗಳನ್ನು ಓದಲು ನಿಮಗೆ ಅವಕಾಶ ಸಿಗಬಹುದು. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಕುಟುಂಬದ ಸದಸ್ಯರ ನೆರವನ್ನು ಪಡೆಯಲಿದ್ದೀರಿ. ಹಿರಿಯ ಸದಸ್ಯರು ನಿಮಗೆ ಕೆಲವೊಂದು ಜವಾಬ್ದಾರಿಗಳನ್ನು ವಹಿಸಬಹುದು. ಇದನ್ನು ನೀವು ಖಂಡಿತವಾಗಿಯೂ ಈಡೇರಿಸಲಿದ್ದೀರಿ. ಸಹೋದರಿಯ ಮದುವೆಯಲ್ಲಿ ಎದುರಾಗಿರುವ ಅಡಚಣೆಗಳು, ಸಾಕಷ್ಟು ಆರಾಧನೆ ಮತ್ತು ಪಠಣದ ನಂತರ ದೂರಗೊಳ್ಳಲಿವೆ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮಗಳನ್ನು ಅಯೋಜಿಸಬಹುದು. ಸಂಜೆಯ ವೇಳೆ ಅನೇಕ ಅತಿಥಿಗಳು ಬರಲಿದ್ದಾರೆ. ನಿಮ್ಮ ತಾಯಿಯ ನೆರವು ಮತ್ತು ಸಹಕಾರ ಪಡೆಯಲಿದ್ದೀರಿ.
ಸಿಂಹ :ಈ ವಾರದಲ್ಲಿ ನಿಮ್ಮ ಪ್ರೇಮಿಯೊಂದಿಗೆ ಎಲ್ಲಾದರೂ ದೂರಕ್ಕೆ ಹೋಗಲು ಯೋಚಿಸಬಹುದು. ಪರಸ್ಪರ ನಂಬಿಕೆಯು ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲಿ ಸಂತಸ ಮತ್ತು ಶಾಂತಿ ಕಾಣಿಸಿಕೊಳ್ಳಲಿದೆ. ಏನಾದರೂ ಹೊಸ ಕೆಲಸವನ್ನು ಪ್ರಾರಂಭಿಸಲು ನಿಮ್ಮ ಜೀವನ ಸಂಗಾತಿಯು ನೆರವು ಒದಗಿಸಲಿದ್ದಾರೆ. ಆಸ್ತಿಗಾಗಿ ನೀವು ಹಣವನ್ನು ಖರ್ಚು ಮಾಡಲಿದ್ದೀರಿ. ಸರ್ಕಾರಿ ಕೆಲಸದಲ್ಲಿರುವ ಜನರ ಹುದ್ದೆಯಲ್ಲಿ ವೃದ್ಧಿ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನಕ್ಕೆ ಸಂಪೂರ್ಣ ಗಮನ ನೀಡಲು ಸಾಧ್ಯವಾಗುತ್ತದೆ. ಶಿಕ್ಷಕರಿಗೆ ಅವರಿಗೆ ನೆರವು ಒದಗಿಸಲಿದ್ದಾರೆ. ನಿಮ್ಮ ಆರೋಗ್ಯವು ದುರ್ಬಲವಾಗಿರಲಿದೆ. ಮನೆಯಿಂದ ಆನ್ಲೈನ್ ಕೆಲಸ ಮಾಡುವ ಜನರು ಒಳ್ಳೆಯ ಲಾಭ ಗಳಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡವರು ತಮ್ಮ ವ್ಯವಹಾರವನ್ನು ಮುಂದಕ್ಕೆ ಒಯ್ಯಲು ಸಾಕಷ್ಟು ಯತ್ನವನ್ನು ಮಾಡಲಿದ್ದಾರೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು. ನೀವು ತಾಯಿಯೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಇಲ್ಲಿ ಒಂದಷ್ಟು ಸಮಯವನ್ನು ನೀವು ಕಳೆಯಲಿದ್ದು, ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯಲಿದೆ.
ಕನ್ಯಾ :ಕನ್ಯಾ ರಾಶಿಯವರು ಈ ವಾರದಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಕೆಲವೊಂದು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ಕೌಟುಂಬಿಕ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿದೆ. ಹಣಕಾಸಿನ ದೃಷ್ಟಿಯಿಂದ ಈ ವಾರವು ಸಾಕಷ್ಟು ಖರ್ಚಿನಿಂದ ತುಂಬಿರಲಿದೆ. ಒಂದಷ್ಟು ಹೂಡಿಕೆ ಮಾಡಲು ನೀವು ಯೋಜನೆ ರೂಪಿಸಲಿದ್ದು, ನಿಮಗೆ ಯಶಸ್ಸು ದೊರೆಯಲಿದೆ. ಹಠಾತ್ ಆಗಿ ಒಂದಷ್ಟು ವೆಚ್ಚಗಳು ಉಂಟಾಗಲಿದ್ದು ಇದರಿಂದ ನಿಮಗೆ ಚಿಂತೆ ಉಂಟಾಗಲಿದೆ. ವ್ಯವಹಾರದಲ್ಲಿ ತೊಡಗಿಕೊಂಡಿರುವ ಜನರು ಯಶಸ್ಸನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿರುವ ಜನರು ತನ್ನ ಕೆಲಸದಲ್ಲಿ ನಿರತರಾಗಲಿದ್ದಾರೆ. ಕಚೇರಿಯ ಕೆಲಸಕ್ಕಾಗಿ ನೀವು ಪ್ರವಾಸಕ್ಕೆ ಹೋಗಬಹುದು. ಸರಿಯಾದ ವೇಳಾಪಟ್ಟಿಯನ್ನು ರೂಪಿಸಿ ಅಧ್ಯಯನ ಮಾಡಿದರೆ ವಿದ್ಯಾರ್ಥಿಗಳಿಗೆ ಒಳ್ಳೆಯದು. ನಿಮ್ಮ ಆರೋಗ್ಯವು ಮೊದಲಿಗಿಂತಲೂ ಚೆನ್ನಾಗಿರಲಿದೆ. ಹಿರಿಯ ಸದಸ್ಯರ ಆಶೀರ್ವಾದವು ದೊರೆಯಲಿದೆ. ಗೆಳೆಯರ ಸಹಾಯದಿಂದ ಆದಾಯ ಗಳಿಸಲು ನಿಮಗೆ ಅನೇಕ ಅವಕಾಶಗಳು ಲಭಿಸಲಿವೆ.