ಕರ್ನಾಟಕ

karnataka

ETV Bharat / photos

ವಿಶ್ವದ ಅತಿ ದೊಡ್ಡ 3D ಪ್ರಿಂಟಿಂಗ್​​ ಟೆಕ್ನಾಲಜಿ: ಮನೆಗಳ ಸುಲಭ ಮುದ್ರಣ - ಇದು ಗಿನ್ನಿಸ್ ದಾಖಲೆ! - World Largest 3D Printer - WORLD LARGEST 3D PRINTER

World Largest 3D Printer: ಅಮೆರಿಕದ ಮೈನ್​ (Maine) ವಿಶ್ವವಿದ್ಯಾಲಯದಲ್ಲಿ ವಿಶ್ವದ ಅತಿ ದೊಡ್ಡ 3ಡಿ ಪ್ರಿಂಟರ್ ಅನಾವರಣಗೊಂಡಿದೆ. ಈ ಮುದ್ರಕ ಒಂದು ದಿನದಲ್ಲಿ ವಿವಿಧ ಪ್ರದೇಶಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿದೆ. ಮೈನ್​​ ಕ್ಯಾಂಪಸ್‌ನಲ್ಲಿ ದೊಡ್ಡ ಕಟ್ಟಡಗಳನ್ನು ಇದು ಮುದ್ರಿಸುತ್ತಿದೆ. ಈ 3ಡಿ ಪ್ರಿಂಟರ್ 96 ಅಡಿ ಉದ್ದ, 32 ಅಡಿ ಅಗಲ ಮತ್ತು 18 ಅಡಿ ಎತ್ತರದ ಮನೆಗಳು ಸೇರಿದಂತೆ ಯಾವುದೇ ವಸ್ತುಗಳನ್ನೂ ಮುದ್ರಿಸಬಲ್ಲದು.

By ETV Bharat Karnataka Team

Published : Apr 24, 2024, 5:35 PM IST

ಮನೆಗಳು ಮತ್ತು ವಸ್ತುಗಳನ್ನು ಮುದ್ರಿಸುವ ವಿಶ್ವದ ಅತಿದೊಡ್ಡ 3D ಪ್ರಿಂಟರ್ ಅನ್ನು ಅಮೆರಿಕದಲ್ಲಿ ಅನಾವರಣಗೊಳಿಸಲಾಗಿದೆ.
ಈ 3D ಪ್ರಿಂಟರ್ ಅದರ ಹಿಂದಿನ ಮಾಡೆಲ್​ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ದೊಡ್ಡ ವಸ್ತುಗಳನ್ನು ಮುದ್ರಿಸುವ ಸಾಮರ್ಥ್ಯ ಹೊಂದಿದೆ.
ಹೊಸ ಸಂವೇದಕಗಳು ಮತ್ತು ಕೃತಕ ಬುದ್ಧಿಮತ್ತೆಯೊಂದಿಗೆ ರೊಬೋಟಿಕ್ಸ್ ಕಾರ್ಯಾಚರಣೆಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಈ ಬೃಹತ್ ಮುದ್ರಕವನ್ನು ಬಳಸಲಾಗುತ್ತದೆ.
96 ಅಡಿ ಉದ್ದ, 32 ಅಡಿ ಅಗಲ ಮತ್ತು 18 ಅಡಿ ಎತ್ತರದ ಮನೆಗಳನ್ನು ಮುದ್ರಿಸುತ್ತದೆ.
ಈ ಪ್ರಿಂಟರ್ ಹೊಸ ಆವಿಷ್ಕಾರಕ್ಕೆ ದಾರಿದೀಪವಾಗಲಿದೆ ಎಂದು ರಕ್ಷಣಾ ಇಲಾಖೆಯ ಅಧೀನ ಕಾರ್ಯದರ್ಶಿ ಹೈಡಿ ಶೆವ್ ತಿಳಿಸಿದ್ದಾರೆ.
ಇದು ಗಂಟೆಗೆ 500 ಪೌಂಡ್ ವಸ್ತುಗಳನ್ನು ಬಳಸುತ್ತದೆ.
3ಡಿ ಪ್ರಿಂಟರ್ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ.
3ಡಿ ಪ್ರಿಂಟರ್ ಕೆಲಸಗಾರರ ಕೊರತೆಯನ್ನು ನಿವಾರಿಸುತ್ತದೆ.
ಈ ಪ್ರಿಂಟರ್ ಮುದ್ರಿಸಿದ ಮನೆಗಳಲ್ಲಿ ವಾಸಿಸಲು ಹೆಚ್ಚಿನ ಸಂಖ್ಯೆಯ ಜನರು ಆಸಕ್ತಿ ತೋರಿಸುತ್ತಿದ್ದಾರೆ.
ಈ ಪ್ರಿಂಟರ್ ಜೈವಿಕ ಆಧಾರಿತ ವಸ್ತುಗಳೊಂದಿಗೆ ಮನೆಗಳನ್ನು ಮಾಡುತ್ತದೆ.

ABOUT THE AUTHOR

...view details