ಕರ್ನಾಟಕ

karnataka

ETV Bharat / photos

ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಕಾರುಗಳ "ಪಯಣ" ಅನಾವರಣ: ವಿಂಟೇಜ್​ ಕಾರುಗಳ ವೈಭವ - VINTAGE CARS

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಅಪರೂಪದ ಕಾರುಗಳ ಜಗತ್ತು ನಗರದ ಪ್ಯಾಲೆಸ್ ಮೈದಾನದ ತ್ರಿಪುರವಾಸಿನ ಗೇಟ್​​ನಲ್ಲಿ ಇಂದಿನಿಂದ ಆರಂಭವಾದ ಆಟೋ ಶೋನಲ್ಲಿ ಅನಾವರಣಗೊಂಡಿದೆ. ಈಗಲೂ ಸುಸ್ಥಿಯಲ್ಲಿರುವ ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯಮಯ ಲೋಕವನ್ನು ಪಯಣ ವಸ್ತು ಸಂಗ್ರಹಾಲಯ ಬೆಂಗಳೂರಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತರೆದಿಟ್ಟಿದೆ. (ETV Bharat)

By ETV Bharat Karnataka Team

Published : Sep 13, 2024, 8:07 PM IST

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆ 'ಪಯಣ' ಸಂಸ್ಥೆಗೆ ಮಾರ್ಗದರ್ಶಕರಾಗಿದ್ದಾರೆ. ವಿಂಟೇಜ್ ಕಾರುಗಳು ಮತ್ತು ಛಾಯಾಗ್ರಹಣದಲ್ಲಿನ ಹೆಗ್ಗಡೆಯವರ ಆಸಕ್ತಿ ಈ ಸಂಗ್ರಹವನ್ನು ಹುಟ್ಟುಹಾಕಿದೆ. (ETV Bharat)
ಇಲ್ಲಿ ಪ್ರದರ್ಶನಕ್ಕಿರುವ ಪ್ರತೀ ಕಾರು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. (ETV Bharat)
ಕೇವಲ ಕಾರುಗಳ ಇತಿಹಾಸ ಮಾತ್ರವಲ್ಲದೇ ನಾವೀನ್ಯತೆ, ಕರಕುಶಲತೆ ಮತ್ತು ಸೌಂದರ್ಯದ ನಿರಂತರ ಅನ್ವೇಷಣೆಯನ್ನು ತರೆದಿಟ್ಟಿದೆ. ವಾಹನ ವಿನ್ಯಾಸದ ವಿಕಾಸ ಮತ್ತು ಉದ್ಯಮವನ್ನು ರೂಪಿಸಿದ ಪ್ರಮುಖ ಕ್ಷಣಗಳನ್ನು ನೋಡಿ ಅರ್ಥಮಾಡಿಕೊಳ್ಳ ಬಹುದಾಗಿದೆ. (ETV Bharat)
ಶ್ರೀರಂಗಪಟ್ಟಣದ ಬಳಿಯಿರುವ ಪಯಣ ಸಂಸ್ಥೆಯು ವಿಂಟೇಜ್ ಆಟೋಮೊಬೈಲ್‌ಗಳ ಸೌಂದರ್ಯ ಮತ್ತು ಇಂಜಿನಿಯರಿಂಗ್ ಅದ್ಭುತಗಳನ್ನು ತೋರ್ಪಡಿಸುವ ಇತಿಹಾಸದ ದಾರಿದೀಪವಾಗಿ ನಿಂತಿದೆ. (ETV Bharat)
ನಮ್ಮ ಮ್ಯೂಸಿಯಂ ಸಂಗ್ರಹಕ್ಕಿಂತ ಹೆಚ್ಚಾಗಿ ಶೈಕ್ಷಣಿಕ ಪ್ರವಾಸದಂತೆ ಗೋಚರಿಸುತ್ತದೆ. ಮೋಟಾರಿಂಗ್‌ನ ಸುವರ್ಣ ಯುಗಕ್ಕೆ ಮರು ಜೀವವನ್ನು ನೀಡಿದೆ. ಇಲ್ಲಿನ ಪ್ರತಿಯೊಂದು ಕಾರು ಒಂದು ಕಥೆಯನ್ನು ಹೇಳುತ್ತದೆ. (ETV Bharat)
ಪ್ರತೀ ಪ್ರದರ್ಶನವು ಆಟೋಮೋಟಿವ್ ಶ್ರೇಷ್ಠತೆಯ ಒಂದು ಅಧ್ಯಾಯವನ್ನು ತೆರೆದಿಡುತ್ತದೆ. (ETV Bharat)
ಪಯಣ ಮ್ಯೂಸಿಯಂ ವಿಂಟೇಜ್ ಕಾರುಗಳ ಬಹುದೊಡ್ಡ ಸಂಗ್ರಹವನ್ನು ಹೊಂದಿದೆ. ಇದು ಧರ್ಮಸ್ಥಳದಲ್ಲಿರುವ ಮಂಜುಷಾ ಮ್ಯೂಸಿಯಂನ ವಿಸ್ತರಣೆಯಾಗಿದೆ. (ETV Bharat)
ಸ್ಟಾಂಡರ್ಡ್ 2000, ಕಾಂಟೆಸ್ಸಾ, ಅಂಬಾಸಿಡರ್, ಮಾರುತಿ ಝೆನ್, ಫಿಯೆಟ್ ಪಾಲಿಯೋ, ರೀವಾ, ಮಟಿಜ್, ಡಾಲ್ಫಿನ್, ಮಾರಿಸ್ ಮೊದಲಾದ ಕಾರುಗಳು ನಮ್ಮ ಸಂಗ್ರಹದಲ್ಲಿವೆ ಎಂದಿದ್ದಾರೆ. (ETV Bharat)
ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳಿಗೆ ಸಂಬಂಧಿಸಿದ ಆಟೋಮೋಟಿವ್ ಮತ್ತು ಇವಿಯ ಪ್ರಗತಿಯನ್ನು ಪ್ರದರ್ಶಿಸಲು ಪರಿಪೂರ್ಣ ವೇದಿಕೆಯನ್ನು ನಮ್ಮ ಆಟೋ ಶೋ ನೀಡಿದೆ. (ETV Bharat)
ಪಯಣ ವಸ್ತುಸಂಗ್ರಹಾಲಯ 23 ಎಕರೆಗಳಲ್ಲಿ ಹರಡಿದ್ದು ಅಲ್ಲಿ ವಿನೂತನ 69 ವಾಹನಗಳನ್ನು ಸಂಹ್ರಹಿಸಿದೆ. 1925ರಿಂದ ವಿಂಟೇಜ್ ಕಾರುಗಳಿಂದ ಹಿಡಿದು ಹೊಸ ಮಾದರಿ ಕಾರುಗಳು ವೀಕ್ಷಣೆಗೆ ಇವೆ. (ETV Bharat)
ಗತಕಾಲದ ಕಾರುಗಳ "ಪಯಣ" (ETV Bharat)
ಗತಕಾಲದ ಕಾರುಗಳ "ಪಯಣ" (ETV Bharat)
ಗತಕಾಲದ ಕಾರುಗಳ "ಪಯಣ" (ETV Bharat)
ಗತಕಾಲದ ಕಾರುಗಳ "ಪಯಣ" (ETV Bharat)

ABOUT THE AUTHOR

...view details