ಕರ್ನಾಟಕ

karnataka

ETV Bharat / photos

ಟೆಸ್ಟ್‌ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್‌ ಪಡೆದ ಆಟಗಾರರು ಯಾರೆಲ್ಲಾ? - 500 ವಿಕೆಟ್​ ಪಡೆದ ಆಟಗಾರರು

ಟೆಸ್ಟ್ ಕ್ರಿಕೆಟ್​ನಲ್ಲಿ 500ಕ್ಕೂ ಹೆಚ್ಚು ವಿಕೆಟ್​ ಉರುಳಿಸಿದ ಪ್ರಮುಖ ಬೌಲರ್​ಗಳ ಪಟ್ಟಿಗೆ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸದ್ಯದಲ್ಲೇ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ 499 ವಿಕೆಟ್‌ಗಳನ್ನು ಅವರು ಪಡೆದಿದ್ದು ಇನ್ನೊಂದು ವಿಕೆಟ್​ ಕಿತ್ತರೆ 500 ವಿಕೆಟ್ ದಾಖಲೆ ಮಾಡಲಿದ್ದಾರೆ.​ ಇವರೊಂದಿಗೆ ಟೆಸ್ಟ್​ನಲ್ಲಿ ಅತೀ ವೇಗವಾಗಿ 500 ವಿಕೆಟ್​ ಗಳಿಸಿದ ಬೌಲರ್​ಗಳ ಪಟ್ಟಿ ಇಂತಿದೆ.

By ETV Bharat Karnataka Team

Published : Feb 7, 2024, 8:08 PM IST

ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ): ಇವರು ಈ ಪಟ್ಟಿಯಲ್ಲಿ ಅಗ್ರಸ್ಥಾನಿ. ಆಡಿರುವ 133 ಪಂದ್ಯಗಳಲ್ಲಿ 22.72 ಸರಾಸರಿಯಲ್ಲಿ ಒಟ್ಟು 800 ಟೆಸ್ಟ್ ವಿಕೆಟ್​ ಉರುಳಿಸಿದ್ದಾರೆ. 9/51 ಇವರ ಅತ್ಯುತ್ತಮ ಬೌಲಿಂಗ್​ ದಾಳಿ.
ಶೇನ್ ವಾರ್ನ್ (ಆಸ್ಟ್ರೇಲಿಯಾ): ಟೆಸ್ಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಶೇನ್ ವಾರ್ನ್ ಎರಡನೇ ಸ್ಥಾನಿ. 145 ಪಂದ್ಯಗಳಲ್ಲಿ ಒಟ್ಟು 708 ವಿಕೆಟ್‌ ಉರುಳಿಸಿದ್ದಾರೆ. 8/71 ಅತ್ಯುತ್ತಮ ಸಾಧನೆ.
ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್): ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್ಸನ್ ಮೂರನೇ ಸ್ಥಾನದಲ್ಲಿದ್ದಾರೆ. ಇದುವರೆಗೆ 184 ಟೆಸ್ಟ್ ಪಂದ್ಯಗಳಲ್ಲಿ 695 ವಿಕೆಟ್‌ಗಳನ್ನು ಪಡೆದಿದ್ದಾರೆ. 7/42 ಅತ್ಯುತ್ತಮ ಬೌಲಿಂಗ್​ ದಾಳಿ.
ಅನಿಲ್ ಕುಂಬ್ಳೆ (ಭಾರತ): ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ 132 ಪಂದ್ಯಗಳಲ್ಲಿ 619 ವಿಕೆಟ್‌ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ವಿರುದ್ಧ 10/74 ಅತ್ಯುತ್ತಮ ಬೌಲಿಂಗ್​ ದಾಳಿ.
ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್): ಸ್ಟುವರ್ಟ್ ಬ್ರಾಡ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಆಡಿದ 167 ಪಂದ್ಯಗಳಲ್ಲಿ 604 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 8/15 ಅತ್ಯುತ್ತಮ ಸಾಧನೆ.
ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ): ಮೆಕ್‌ಗ್ರಾತ್ 124 ಪಂದ್ಯಗಳಲ್ಲಿ 563 ವಿಕೆಟ್​ಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. 8/24 ಅತ್ಯುತ್ತಮ ಬೌಲಿಂಗ್ ದಾಳಿ. ಇವರು 2007ರಲ್ಲಿ ನಿವೃತ್ತಿ ಘೋಷಿಸಿದರು.
ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್): ಕರ್ಟ್ನಿ ವಾಲ್ಷ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಇವರು 132 ಪಂದ್ಯಗಳಲ್ಲಿ 519 ವಿಕೆಟ್‌ ಪಡೆದಿದ್ದಾರೆ. 7/37 ಅತ್ಯುತ್ತಮ ಸಾಧನೆ.
ನಾಥನ್ ಲಿಯಾನ್ (ಆಸ್ಟ್ರೇಲಿಯಾ): ಪಾಕಿಸ್ತಾನ​​ ವಿರುದ್ಧದ ಪಂದ್ಯದಲ್ಲಿ ನಾಥನ್ ಲಿಯಾನ್ 5 ವಿಕೆಟ್ ಕಬಳಿಸಿದ್ದು, ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್‌ಗಳನ್ನು ಪೂರೈಸಿದರು. 123 ಟೆಸ್ಟ್ ಪಂದ್ಯಗಳಲ್ಲಿ 230 ಇನಿಂಗ್ಸ್ ಆಡಿದ್ದಾರೆ.
ಆರ್.ಅಶ್ವಿನ್ (ಭಾರತ): ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳನ್ನು ಕಬಳಿಸಿದ ಟಾಪ್ ಬೌಲರ್​ಗಳ ಪಟ್ಟಿಗೆ ರವಿಚಂದ್ರನ್ ಅಶ್ವಿನ್ ಸದ್ಯದಲ್ಲೇ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ 499 ವಿಕೆಟ್‌ಗಳನ್ನು ಕಬಳಿಸಿದ್ದು 1 ವಿಕೆಟ್ ಮಾತ್ರ ಬಾಕಿ ಇದೆ.

ABOUT THE AUTHOR

...view details